ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ.

0
134

ಚಿಕ್ಕಬಳ್ಳಾಪುರ/ಗುಡಿಬಂಡೆ: ಯಾವುದೇ  ರಾಜಕೀಯ ಉದ್ದೇಶವಿಲ್ಲದೇ ಕ್ಷೇತ್ರದ ಅಭಿವೃದ್ದಿ ಮಾಡುವ ದೃಷ್ಠಿಯಿಂದ ರಾಜಕೀಯಕ್ಕೇಬಂದಿದ್ದೇನೆ ಹೊರತು ಬೇರೆ ಉದ್ದೇಶಕ್ಕಲ್ಲ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ತಾಲ್ಲೂಕಿನ ಕಾಲುವಗಡ್ಡಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ನಮ್ಮ ಗ್ರಾಮ ನಮ್ಮ ರಸ್ತೆಯೋಜನೆಯಡಿ ಬೀಚಗಾನಹಳ್ಳಿ ಕ್ರಾಸ್ ನಿಂದ ಕಾಲುವಗಡ್ಡಹಳ್ಳಿ ಗ್ರಾಮದ ವರೆಗೆ ಸುಮಾರು 4.27 ಕೋಟಿಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ನನ್ನ ಅಧಿಕಾರ ಅವಧಿಯಲ್ಲಿ ಸುಮಾರು ಅಭಿವೃದ್ದಿಕಾರ್ಯಗಳನ್ನು ಕೈಗೊಂಡಿದ್ದೇನೆ. ಇಲ್ಲಿಯವರೆಗೂ ಸುಮಾರು 36 ಕೋಟಿ ರೂಪಾಯಿಗಳಷ್ಟು ಗ್ರಾಮೀಣ ಭಾಗದರಸ್ತೆಗಳಿಗಾಗಿ ಅನುದಾನ ಬಿಡುಗಡೆ ಮಾಡಿದ್ದೇನೆ. ಗುಡಿಬಂಡೆ ಪಟ್ಟಣದ ಮುಖ್ಯ ರಸ್ತೆ, ಹಂಪಸಂದ್ರ,ಬೀಚಗಾನಹಳ್ಳಿ, ಪೋಲಂಪಲ್ಲಿ ಸೇರಿದಂತೆ ತಾಲ್ಲೂಕಿನ ವಿವಿಧ ಸಂಪರ್ಕ ರಸ್ತೆಗಳ ಅಭಿವೃದ್ದಿ ಕಾರ್ಯವನ್ನುಕೈಗೊಂಡಿದ್ದೇನೆ ಎಂದರು.

ನಂತರ ಕಾರ್ಯಕ್ರಮದಲ್ಲಿ ಸಂಸದ ಎಂ.ವೀರಪ್ಪ ಮೊಯಿಲಿ ಮಾತನಾಡಿ ಸತತ ಬರಗಾಲಕ್ಕೆತುತ್ತಾಗುತ್ತಿರುವ ಈ ಭಾಗಕ್ಕೆ ಶಾಶ್ವತವಾಗಿ ನೀರಾವರ ಯೋಜನೆಯನ್ನು ಒದಗಿಸಲು ಸುಮಾರು 13 ಸಾವಿರ ಕೋಟಿವೆಚ್ಚದಲ್ಲಿ ಎತ್ತಿನಹೊಳೆ ಕಾಮಗಾರಿ ಪ್ರಾರಂಭಿಸಲಾಗಿದೆ. ಈಗಾಗಲೇ ಭಾಗಶಃ ಕಾಮಗಾರಿ ಮುಕ್ತಾಯಹಂತದಲ್ಲಿದ್ದು, ಆದಷ್ಟು ಶೀಘ್ರವೇ ನಿಮ್ಮ ಕೆರೆಗಳಿಗೆ ನೀರು ಬರಲಿದೆ, ಬತ್ತಿಹೋದ ನಿಮ್ಮ ಕೊಳವೆ ಬಾವಿಗಳುಮರುಪೂರ್ಣವಾಗಲಿವೆ. ಎತ್ತಿನಹೊಳೆ ಕಾಮಗಾರಿ ಕುರಿತು ನಿಮಗೆ ಏನಾದರೂ ಸಂಶಯಗಳಿದ್ದರೇ ಕಾಮಗಾರಿನಡೆಯುವ ಪ್ರದೇಶಕ್ಕೆ ನೀವು ಭೇಟಿ ನೀಡಬಹುದು ನಿಮಗಾಗಿ ವಾಹನ ಸೌಲಭ್ಯವನ್ನು ನಾವೇ ಮಾಡಿಸುತ್ತೇವೆಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಗ್ರಾಮ ನಮ್ಮ ರಸ್ತೆ ಮೂಲಕ ಗ್ರಾಮೀಣ ಭಾಗಗಳ ರಸ್ತೆಗಳಅಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ. ಗ್ರಾಮೀಣ ಭಾಗಗಳ ಅಭಿವೃದ್ದಿ ಕೇವಲ ಕಾಂಗ್ರೇಸ್ ಪಕ್ಷದಿಂದ ಮಾತ್ರ ಸಾಧ್ಯಎಂದರು.

ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷೆ ವರಲಕ್ಷ್ಮೀ, ಉಪಾಧ್ಯಕ್ಷ ಬೈರಾರೆಡ್ಡಿ, ಪ.ಪಂ. ಅಧ್ಯಕ್ಷಚಂದ್ರಶೇಖರನಾಯ್ಡು, ಮುಖಂಡರಾದ ರಘುನಾಥರೆಡ್ಡಿ, ಅಮರ, ಶ್ರೀನಿವಾಸರೆಡ್ಡಿ, ಹೆಚ್.ಹನುಮಂತರೆಡ್ಡಿ,ಕೆ.ಟಿ.ಅಶ್ವತ್ಥರೆಡ್ಡಿ, ಕೃಷ್ಣೇಗೌಡ ಸೇರಿದಂತೆ ಹಲವರು ಇದ್ದರು.

ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ.

ಗುಡಿಬಂಡೆ: ಯಾವುದೇ ರಾಜಕೀಯ ಉದ್ದೇಶವಿಲ್ಲದೇ ಕ್ಷೇತ್ರದ ಅಭಿವೃದ್ದಿ ಮಾಡುವ ದೃಷ್ಠಿಯಿಂದ ರಾಜಕೀಯಕ್ಕೇಬಂದಿದ್ದೇನೆ ಹೊರತು ಬೇರೆ ಉದ್ದೇಶಕ್ಕಲ್ಲ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ತಾಲ್ಲೂಕಿನ ಕಾಲುವಗಡ್ಡಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ನಮ್ಮ ಗ್ರಾಮ ನಮ್ಮ ರಸ್ತೆಯೋಜನೆಯಡಿ ಬೀಚಗಾನಹಳ್ಳಿ ಕ್ರಾಸ್ ನಿಂದ ಕಾಲುವಗಡ್ಡಹಳ್ಳಿ ಗ್ರಾಮದ ವರೆಗೆ ಸುಮಾರು 4.27 ಕೋಟಿಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ನನ್ನ ಅಧಿಕಾರ ಅವಧಿಯಲ್ಲಿ ಸುಮಾರು ಅಭಿವೃದ್ದಿಕಾರ್ಯಗಳನ್ನು ಕೈಗೊಂಡಿದ್ದೇನೆ. ಇಲ್ಲಿಯವರೆಗೂ ಸುಮಾರು 36 ಕೋಟಿ ರೂಪಾಯಿಗಳಷ್ಟು ಗ್ರಾಮೀಣ ಭಾಗದರಸ್ತೆಗಳಿಗಾಗಿ ಅನುದಾನ ಬಿಡುಗಡೆ ಮಾಡಿದ್ದೇನೆ. ಗುಡಿಬಂಡೆ ಪಟ್ಟಣದ ಮುಖ್ಯ ರಸ್ತೆ, ಹಂಪಸಂದ್ರ,ಬೀಚಗಾನಹಳ್ಳಿ, ಪೋಲಂಪಲ್ಲಿ ಸೇರಿದಂತೆ ತಾಲ್ಲೂಕಿನ ವಿವಿಧ ಸಂಪರ್ಕ ರಸ್ತೆಗಳ ಅಭಿವೃದ್ದಿ ಕಾರ್ಯವನ್ನುಕೈಗೊಂಡಿದ್ದೇನೆ ಎಂದರು.

ನಂತರ ಕಾರ್ಯಕ್ರಮದಲ್ಲಿ ಸಂಸದ ಎಂ.ವೀರಪ್ಪ ಮೊಯಿಲಿ ಮಾತನಾಡಿ ಸತತ ಬರಗಾಲಕ್ಕೆತುತ್ತಾಗುತ್ತಿರುವ ಈ ಭಾಗಕ್ಕೆ ಶಾಶ್ವತವಾಗಿ ನೀರಾವರ ಯೋಜನೆಯನ್ನು ಒದಗಿಸಲು ಸುಮಾರು 13 ಸಾವಿರ ಕೋಟಿವೆಚ್ಚದಲ್ಲಿ ಎತ್ತಿನಹೊಳೆ ಕಾಮಗಾರಿ ಪ್ರಾರಂಭಿಸಲಾಗಿದೆ. ಈಗಾಗಲೇ ಭಾಗಶಃ ಕಾಮಗಾರಿ ಮುಕ್ತಾಯಹಂತದಲ್ಲಿದ್ದು, ಆದಷ್ಟು ಶೀಘ್ರವೇ ನಿಮ್ಮ ಕೆರೆಗಳಿಗೆ ನೀರು ಬರಲಿದೆ, ಬತ್ತಿಹೋದ ನಿಮ್ಮ ಕೊಳವೆ ಬಾವಿಗಳುಮರುಪೂರ್ಣವಾಗಲಿವೆ. ಎತ್ತಿನಹೊಳೆ ಕಾಮಗಾರಿ ಕುರಿತು ನಿಮಗೆ ಏನಾದರೂ ಸಂಶಯಗಳಿದ್ದರೇ ಕಾಮಗಾರಿನಡೆಯುವ ಪ್ರದೇಶಕ್ಕೆ ನೀವು ಭೇಟಿ ನೀಡಬಹುದು ನಿಮಗಾಗಿ ವಾಹನ ಸೌಲಭ್ಯವನ್ನು ನಾವೇ ಮಾಡಿಸುತ್ತೇವೆಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಗ್ರಾಮ ನಮ್ಮ ರಸ್ತೆ ಮೂಲಕ ಗ್ರಾಮೀಣ ಭಾಗಗಳ ರಸ್ತೆಗಳಅಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ. ಗ್ರಾಮೀಣ ಭಾಗಗಳ ಅಭಿವೃದ್ದಿ ಕೇವಲ ಕಾಂಗ್ರೇಸ್ ಪಕ್ಷದಿಂದ ಮಾತ್ರ ಸಾಧ್ಯಎಂದರು.

ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷೆ ವರಲಕ್ಷ್ಮೀ, ಉಪಾಧ್ಯಕ್ಷ ಬೈರಾರೆಡ್ಡಿ, ಪ.ಪಂ. ಅಧ್ಯಕ್ಷಚಂದ್ರಶೇಖರನಾಯ್ಡು, ಮುಖಂಡರಾದ ರಘುನಾಥರೆಡ್ಡಿ, ಅಮರ, ಶ್ರೀನಿವಾಸರೆಡ್ಡಿ, ಹೆಚ್.ಹನುಮಂತರೆಡ್ಡಿ,ಕೆ.ಟಿ.ಅಶ್ವತ್ಥರೆಡ್ಡಿ, ಕೃಷ್ಣೇಗೌಡ ಸೇರಿದಂತೆ ಹಲವರು ಇದ್ದರು.

LEAVE A REPLY

Please enter your comment!
Please enter your name here