ರಸ್ತೆ ಕಾಮಗಾರಿ ಕಳಪೆ :ಸಂಘಟನೆಗಳ ಆರೋಪ…

0
141

ಚಾಮರಾಜನಗರ/ಕೊಳ್ಳೇಗಾಲ: ತಾಲ್ಲೂಕಿನ ಮಧುವನಹಳ್ಳಿ ಗ್ರಾಮಪಂಚಾಯಿತಿಯಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಲ್ಲಿ ನಡೆಯುತ್ತಿದೆ ಎಂದು ಯುವ ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಪ್ರಕಾಶ್ ಆರೋಪಿಸಿದರು.

ಪಟ್ಟಣದ ಲೊಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಅವೈಜ್ಷಾನಿಕ ರೀತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು ಇದರಿಂದ ಗ್ರಾಮಸ್ಥರಿಗೆ ಕಿಕಿರಿ ಉಂಟಾಗಿದೆ. ಚರಂಡಿಯೇ ನಿರ್ಮಾಣ ಮಾಡದೇ ರಸ್ತೆ ನಿರ್ಮಿಸಿಲಾಗುತಿದೆ . ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಮಳೆ ಬಿದ್ದಂತಹ ಸಂಧರ್ಭದಲ್ಲಿ ಹರಿಯುವ ಕೊಳಕು ನೀರು ಮನೆಗಳಿಗೆ ನುಗ್ಗುತ್ತಿದೆ. ಇದರಿಂದ ಸೊಳ್ಳೆ ಕಾಟವು ಹೆಚ್ಚಾಗಿ ಗ್ರಾಮಸ್ಥರು ವಿವಿಧ ಕಾಯಿಲೆಗಳಿಗೆ ತುತ್ತಾಗಿರುವುದಕ್ಕೆ ಉದಾಹರಣೆಗಳಿವೆ. ಅಧಿಕಾರಿಗಳು ಅಂದಾಜು ಪಟ್ಟಿಯಲ್ಲಿರುವಂತೆÉ ಕಾಮಗಾರಿ ಮಾಡುತ್ತಿಲ್ಲ ಎಂಬ ಅನುಮಾನಗಳಿವೆ. ಕಾಮಗಾರಿಯ ಅಂದಾಜುಪಟ್ಟಿ ನೀಡುವಂತೆ ಲಿಖಿತ ರೂಪದಲ್ಲಿ ಮನವಿ ಮಾಡಲಾಗಿತ್ತು. ಆದರೆ ಯಾವುದಕ್ಕೂ ಪ್ರತಿಕ್ರಿಯೆಯೂ ನೀಡದೆ ಅಂದಾಜುಪಟ್ಟಿ ನೀಡದೆ ನಿರ್ಲಕ್ಷ್ಯತನದಿಂದ ನಡೆದುಕೊಳ್ಳುತ್ತಿದ್ದಾರೆ.
ಪ್ರಗತಿಪರ ಸಂಘಟನೆಗಳ ಮಾತಿಗೆ ಮನ್ನಣೆ ನೀಡದವರು ಜನಸಾಮಾನ್ಯರೊಂದಿಗೆ ಹೇಗೆ ನಡೆದುಕೊಳ್ಳುತ್ತಾರೆಂದು ತಿಳಿಸಯುತ್ತದೆ ಎಂದು ಕಿಡಿಕಾಡಿದರು.

ನಂತರ ಜಯಕರ್ನಾಟಕ ಜಿಲ್ಲಾ ಕಾರ್ಯಾಧ್ಯಕ್ಷ ಕುಮಾರ್ ಮಾತನಾಡಿ ಇದೇ ವಿಷಯದ ಕುರಿತು ಇದುವರೆಗೆ ಐದಾರು ಬಾರಿ ಅಧಿಕಾರಿಗಳಿಗೆ ತಿಳಿಸಿದ್ದರೂ ಕ್ಯಾರೆ ಅನ್ನುತ್ತಿಲ್ಲ. ಈ ಹಿಂದೆ ರಸ್ತೆ ತಡಯೂ ನಡೆಸುತ್ತದ್ದೆವು ಆದರೂ ಪ್ರಯೋಜನವಾಗಿಲ್ಲ ಇವರ ನಇರ್ಲಕ್ಷತನಕ್ಕೆ ಅಮಾಯಕರಿಗೆ ತೊಂದರೆಯಾಗುತ್ತಿದೆ ಇದು ಹೀಗಿಯೇ ಮುಂದುವರೆದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಯಕರ್ನಾಟಕ ಸಂಘಟನೆಯ ಟೌನ್ ಉಪಾಧ್ಯಕ್ಷ ಅಜೀಕ್ ಪಾಷ(ಚಮ್ಕಿ) ಕರ್ನಾಟಕ ಯುವಶಕ್ತಿಯ ಸಿದ್ದಪ್ಪಾಜಿ, ತಾಲ್ಲೂಕು ಅಧೈಕ್ಷ ದೇವಾನಂದ್, ಕಾರ್ಯದರ್ಶಿ ರಾಜೇಶ್ ಹಾಜರಿದ್ದರು.

LEAVE A REPLY

Please enter your comment!
Please enter your name here