ರಸ್ತೆ ಸಮಸ್ಯೆ ಬಗೆಹರಿಸಿದ ಶಾಸಕ.

0
241

 

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ರಸ್ತೆಯ ವಿಷಯವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದ ಎರಡು ದಿನಗಳ ಕಾಲ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು. ರಸ್ತೆಯನ್ನು ಅತಿಕ್ರಮಿಸಿ ಕಟ್ಟಡ ತಲೆ ಎತ್ತಿದ್ದರೂ ಮಾಲಕಿ ಜಮೀನಿನಲ್ಲಿ ಸಂಚಾರಕ್ಕೆ ರಸ್ತೆ ನೀಡುವ ಬಗ್ಗೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು.ಘಟನೆಯಲ್ಲಿ ರಾಜಕೀಯ ಎಂಟ್ರಿಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿದ್ದ ಗೌಡರ ಎಂಬುವರ ಕುಟುಂಬದವರ ಜಮೀನಿನಲ್ಲಿಯೇ ಇದ್ದ ಸಂಚಾರ ಮುಂದುವ ರೆಸುವಂತೆ ಒತ್ತಾಯಿಸಿ ಇನ್ನೊಂದು ಬಣದವರು ಆ ಕುಟುಂಬದವರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿತ್ತು.

ಈ ಹಿನ್ನೆಲೆಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್‌‌ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದ ಲ್ಲೂ ಪರ ಹಾಗೂ ವಿರೋಧಿ ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಂತರ ಮಾಲಕಿ ಜಮೀನು ಸಾರ್ವಜ ನಿಕರಿಗೆ ಬಿಟ್ಟುಕೊಡುವ ಬಗ್ಗೆ ಗೌಡರ ಕುಟುಂಬದವರು ಶಾಸಕರ ಮುಂದೆ ಒಪ್ಪಿಕೊಂಡಾಗ, ಪ್ರಕರಣ ಸುಖ್ಯಾಂತ ಕಂಡಿತು. ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆಯ ಉದ್ದೇಶದಿಂದ ಜಮೀನು ಬಿಟ್ಟುಕೊಟ್ಟಿರುವುದಕ್ಕೆ ಶಾಸಕರು ಅಭಿನಂದನೆ ತಿಳಿಸಿ, ಸರ್ಕಾರ ಜಮಿನು ವಶಕ್ಕೆ ಪಡೆದುಕೊಂಡು ಪರಿಹಾರ ನೀಡಲಿದೆ ಎಂದು ತಿಳಿಸಿದರು.

ಕಳೆದ ನಾಲ್ಕು ವರ್ಷಗಳ ಹಿಂದೆಯೂ ಇಲ್ಲಿನ ಸಂಚಾರಕ್ಕಾಗಿ ಎರಡು ಪಕ್ಷದ ಕಾರ್ಯಕರ್ತರ ಮಧ್ಯೆ ಕಿತ್ತಾಟ ನಡೆದಿತ್ತು. ಆದರೆ ಎರಡು ದಿನಗಳ ಹಿಂದೆ ವಿಕೋಪಕ್ಕೆ ತಿರುಗಿ ಗಲಾಟೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್‌‌, ತಹಸಿಲ್ದಾರ್‌‌ ಹಾಗೂ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಎರಡು ಬಣಗಳೊಂದಿಗೆ ಮಾತುಕತೆ ನಡೆದು ರಸ್ತೆ ವಿವಾದ ಸುಖಾಂತ್ಯವಾಗಿದ್ದು. ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಕಾರ್ಯವೈಖರಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ರು.

LEAVE A REPLY

Please enter your comment!
Please enter your name here