ರಾಜಕಾಲುವೆ ತೆರವು ಮತ್ತು ಮೂಲಭೂತ ಸೌಲಭ್ಯಗಳಿಗೆ ಒತ್ತಾಯಿಸಿ ಮಾನವ ಸರಪಳಿ

0
276

ರಾಜಕಾಲುವೆ ತೆರವು ಮತ್ತು ಮೂಲಭೂತ ಸೌಲಭ್ಯಗಳಿಗೆ ಒತ್ತಾಯಿಸಿ ಮಾನವ ಸರಪಳಿ

ಬೆಂಗಳೂರು/ಮಹದೇವಪುರ:-ಮನ್ನೆಕೊಳಲು ಮತ್ತು ಚಿನ್ನಪ್ಪನಗಳ್ಳಿ ಕೆರೆಗಳ ಮದ್ಯೆ ಹಾದುಹೋಗುವ ರಾಜಕಾಲುವೆ ಮೇಲೆ ಅನಧಿಕೃತವಾಗಿ ಕೆಲ ಪ್ರತಿಷ್ಟಿತ ಅಪಾಟರ್್ಮೆಂಟ್ಗಳನ್ನು ನಿರ್ಮಿಸಿ ಹಲವು ಸಮಸ್ಯೆಗಳಿಗೆ ಕಾರಣವಾದ ಸಂಬಂದ ಕಳೆದೆರಡು ದಿನಗಳಿಂದ ವಿಸೃತವರದಿಯನ್ನು ಮಾನವೀಯತೆ ದೃಷ್ಟಿಯಿಂದ ಕೆಳ ಮಾಧ್ಯಮಗಳಲ್ಲಿ ಸುದ್ದಿ ಮಾಡಲಾಗಿತ್ತು, ಇದರ ಫಲವಾಗಿ ನೆನ್ನೆ ಮಹದೇವಪುರ ಬಿಬಿಎಂಪಿ ವಲಯದ ಜಂಟಿ ಆಯುಕ್ತರಾದ ವಾಸಂತಿ ಅಮರ್ ಕೂಡಲೆ ಕ್ರಮ ಜರುಗಿಸುವ ಭರವಸೆ ನೀಡಿದ್ದರು, ಆದರೆ ಇಂದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು ಸಾವಿರಾರು ಸ್ಥಳೀಯರು ಮಾನವ ಸರಪಳಿ ನಿರ್ಮಿಸಿ ಮಾರತ್ ಹಳ್ಳಿ ಜಂಕ್ಷನ್ ಬಳಿ ಪ್ರತಿಭಟನೆ ನಡೆಸಿದರು. ಮಾಧ್ಯಮದವರ ಸಾಮಾಜಿಕ ಕಳಕಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಮಳೆ ನೀರು ಸರಾಗವಾಗಿ ಹರಿಯ ಬೇಕು, ನೀರು ಬೇಕು, ರಸ್ತೆಬೇಕು, ಒಳಚರಂಡಿ ವ್ಯವಸ್ಥೆ ಬೇಕು ಎಂದು ಬಿತ್ತಿಪತ್ರಗಳನ್ನು ಹಿಡಿದು ನಿಂತಿರುವುದು ಮಹದೇವಪುರ ಕ್ಷೇತ್ರದ ಮಾರತ್ ಹಳ್ಳಿ, ಮುನ್ನೇಕೊಳಾಲ ಗ್ರಾಮಸ್ಥರು,ಸರಿಯಾಗಿ ಮನೆಗಳಿಗೆ ಕುಡಿಯುವ ನೀರು ಬರುತ್ತಿಲ್ಲ, ಓಡಾಡಲು ಸರಿಯಾದ ರಸ್ತೆಗಳಿಲ್ಲ, ರಾಜಾ ಕಾಲುವೆಗಳಲ್ಲಿ ಹೂಳು ತುಂಬಿಕೊಂಡು ಮಳೆನೀರು ಸರಾಗವಾಗಿ ಹರಿಯದೇ ಮನೆಗಳಿಗೆ ನುಗ್ಗುತ್ತಿರುವುದು ಇಷ್ಟೇಲ್ಲಾ ಸಮಸ್ಯೆಗಳಿದ್ದರೂ ಯಾರೊಬ್ಬರು ನಮ್ಮ ಕಡೆ ತಿರುಗಿ ನೋಡದೇ ನಿರ್ಲಕ್ಷ್ಯವಹಿಸಿದ್ದಾರೆ. ಎಷ್ಟೇ ಬಾರಿ ನಮ್ಮ ಸ್ಯೆಗಳನ್ನು ಹೇಳಿಕೊಂಡರು ಸಹ ಪಾಲಿಕೆ ಅಧಿಕಾರಿಗಳು ಬೇಜವಾಬ್ದಾರಿತನ ಮೆರೆದಿದ್ದಾರೆ. ಈಗಲಾದರೂ ಮುಂದೆ ಆಗಬಹುದಾದ ದೊಡ್ಡ ಅನಾಹುತಗಳನ್ನು ತಪ್ಪಿಸ ಬೇಕು.

ಮಾರತ್ ಹಳ್ಳಿ, ಮುನ್ನೆಕೊಳಾಲ ಸುತ್ತಮುತ್ತಲ ಸುಮಾರು 15ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಇದೇ ಸಮಸ್ಯೆಗಳಿವೆ. ಪ್ರತಿನಿತ್ಯ ಹೆಣಗಬೇಕು, ಮಕ್ಕಳನ್ನು ಶಾಲೆಗೆ ಬಿಡಲು, ಉದ್ಯೋಗಗಳಿಗೆ ತೆರಳಲು ಆಗುತ್ತಿಲ್ಲ. ಮೊಳಕಾಲು ಮಟ್ಟಕ್ಕೆ ನೀರು ನಿಲ್ಲುವುದರಿಂದ ಪ್ರತಿ ನಿತ್ಯ ಅದರಲ್ಲೇ ಓಡಾಡಬೇಕು. ಮಳೆನೀರಿನೊಂದಿಗೆ ಕೊಳಚೆ ನೀರು ಬರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲೇ ಜೀವನ ಸಾಗಿಸುವಂತಾಗಿದೆ. ರಸ್ತೆಗಳಲ್ಲಿ ಎಲ್ಲಿ ಹೋಗಬೇಕೆಂಬುದೇ ತಿಳಿಯದು ಅಷ್ಟು ಗುಂಡಿಗಳಿವೆ. ಸ್ವಲ್ಪ ಯಾಮಾರಿದರೂ ಕೂಡಾ ನೆಲಕ್ಕೆ ಬೀಳುವುದು ಖಚಿತ. ರಾಜಕಾಲುವೆ ನೀರು ಓವರ್ ಫ್ಲೊ ಆಗಿ ರಸ್ತೆಗಳಿಗೆ ಹರಿದು ಬರುತ್ತೆ ಎಂದು ತಮ್ಮ ಅಳಲು ತೋಡಿಕೊಂಡರು.

ಬಿಬಿಎಂಪಿ ಮತ್ತು ಬೃಹತ್ ರಾಜಕಾಲುವೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದ ಪ್ರತಿ ಸಣ್ಣ ಮಳೆಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ರಾಜಕಾಲುವೆ ಮೇಲೆ ನಿಮರ್ಾಣವಾಗಿರುವ ಮನೆಗಳನ್ನು ಕೆಲ ಅಮಾಯಕರು ಖರೀದಿಸಿದ್ದು ತಮ್ಮ ಮನೆಗಳನ್ನೆ ಕಳೆದುಕೊಳ್ಳುವ ಬೀತಿಯಲ್ಲಿರುವುದು ನಿಜಕ್ಕೂ ನಾಚಿಗೇಡಿನ ಸಂಗತಿಯೇ ಸರಿ.

LEAVE A REPLY

Please enter your comment!
Please enter your name here