ರಾಜಶೇಖರ ಕೋಟೆ ನಿಧನ,ಸಂತಾಪ..

0
121

ರಾಯಚೂರು:ಆಂದೋಲನ ಪತ್ರಿಕೆ ಸಂಪಾದಕ ರಾಜಶೇಖರ ಕೋಟೆ ಅವರ ನಿಧನರಾದ ಹಿನ್ನಲೆಯಲ್ಲಿ ರಾಯಚೂರನ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಗಿಲ್ಡ್ ವತಿಯಿಂದ  ಪತ್ರಿಕಾ ಭವನದಲ್ಲಿ  ಸಂತಾಪ ಸಭೆ ನಡೆಸಲಾಯಿತು.ಬಿ.ವೆಂಕಟಸಿಂಗ್ ಮಾತನಾಡಿ ೪ ದಶಕಗಳಿಂದ ಪತ್ರಿಕಾ ರಂಗದಲ್ಲಿ ಅವರ ಸೇವೆ ಅಪಾರ ಮೂಲತಃ ಗದಗ ಜಿಲ್ಲೆಯವರಾಗಿದ್ದು ಮೈಸೂರು ಜಿಲ್ಲೆಯಲ್ಲಿ ಆಂದೋಲನ ಪತ್ರಿಕೆ ಮೂಲಕ ಸಾಮಾಜಿಕ ಕಳಕಳಿಯನ್ನು ಉಳ್ಳವರಾಗಿದ್ದರು.ಇಂದು ನಮ್ಮನ್ನ ಅಗಲಿಕೆಯಿಂದ ಪತ್ರಿಕೋದ್ಯಮಕ್ಕೆ ತುಂಬಲಾಗದ ನಷ್ಟವಾಗಿದೆ ಎಂದರು.ದತ್ತು ಸರ್ಕಿಲ್ ಮಾತನಾಡಿ ೭೧ ನೇ ಇಳಿವಯಸ್ಸಿನಲ್ಲೂ ಸಮಾಜಕ್ಕೆ ಅವರ ಸೇವೆ ಅಪಾರ.ಸಾಮಾಜಿಕ ನ್ಯಾಯಕ್ಕಾಗಿ ಭದ್ದತೆಯನ್ನು ಹೊಂದಿದವರಾಗಿದ್ದರು. ಪ್ರಗತಿಪರಚಿಂತಕ ,ಬರಹಗಾರ, ಎಡಪಂಕ್ತಯಹೋರಾಟಗಾರರಾಗಿದ್ದರು.ಇವರ ಅಗಲಿಕೆ ಇಂತವರ ಅಗಲಿಕೆ ಪತ್ರಿಕಾ ರಂಗಕ್ಕೆ ತುಂಬಲಾಗದ ನಷ್ಟ .ಇವರ ಆದರ್ಶಗಳಿಟ್ಟುಕೊಂಡು ಅನೇಕ ಪತ್ರಕರ್ತರು ಬೆಳೆದಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಬಿ.ವೆಂಕಟ್ ಸಿಂಗ್,ದತ್ತು ಸರ್ಕಿಲ್,ವೀರನಗೌಡ,ಜಗನ್ನಾಥ ದೇಸಾಯಿ, ವೆಂಕಟೇಶ ಹೂಗಾರ ಮುತ್ತಣ್ಣ,ನರೇಶ ಕುಮಾರ್,ಶ್ರೀನಿವಾಸ್,ಶಿವಕುಮಾರ ಇನ್ನಿತರ ಛಾಯಾಗ್ರಾಹಕರು ಪತ್ರಕರ್ತರು ಇದ್ದರು

LEAVE A REPLY

Please enter your comment!
Please enter your name here