ರಾಜ್ಯದಲ್ಲಿ ಶಿವಸೇನೆ ನಿಷೇಧಕ್ಕೆ ಕರವೇ ಆಗ್ರಹ…

0
132

ಶಿವಸೇನೆ ರಾಜ್ಯ ಪ್ರವೇಶ ವಿರೋಧಿಸಿ ಕರವೇ ಪ್ರತಿಭಟನೆ

ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಪುರ: ನಗರದ ತಾಲೂಕು ಕಚೇರಿ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ) ಬಣದ ವತಿಯಿಂದ ಶಿವಸೇನೆ ರಾಜ್ಯಕ್ಕೆ ಪ್ರವೇಶಿಸಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ, ರಾಜ್ಯದ ಗಡಿ ಭಾಗದಲ್ಲಿ ಸಾಕಷ್ಟು ಬಾರಿ ಪುಂಡಾಟಿಕೆಯನ್ನು ಪ್ರದರ್ಶಿಸಿದ ಮಹಾರಾಷ್ಟ್ರದ ಪಕ್ಷ ನಮ್ಮ ರಾಜ್ಯಕ್ಕೆ ಅಗತ್ಯವಿಲ್ಲ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಸಂಚನ್ನು ರೂಪಿಸಿದ ಮುತಾಲಿಕ್ ರಾಜ್ಯದ ರಾಜಕೀಯಕ್ಕೆ ಆಗಮಿಸುವುದು ದುರಂತ.

ಶಿವಸೇನೆಯ ಅಜೆಂಡಾ ಕೇವಲ ಮಹಾರಾಷ್ಟ್ರದ ಒಳಿತು ಕಾಯುವುದಾಗಿದೆ. ರಾಜ್ಯ ಸರಕಾರ ಈ ಕೂಡಲೆ ಎಚ್ಚೆತ್ತುಕೊಂಡು

ಪ್ರಮೋದ್ ಮುತಾಲಿಕ್ ಗೆ ಬಿಜೆಪಿಯಲ್ಲಿ ಸ್ಥಾನ ನೀಡಲಾಗಿತ್ತು. ಇದನ್ನು ದುರುಪಯೋಗಪಡಿಸಿಕೊಂಡು ಬಿಜೆಪಿಯಲ್ಲಿ ಘರ್ಷಣೆಗಳನ್ನು ಸೃಷ್ಟಿಸಿದ ಕಾರಣ ಅವರನ್ನು ಪಕ್ಷದಿಂದ ಹೊರಗುಳಿಸಲಾಯಿತು. ನಂತರ ಇತರೆ ಪಕ್ಷಗಳೊಂದಿಗೆ ಗುರುತಿಸಿಕೊಂಡು, ರಾಜ್ಯದಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ಮಾಡುತ್ತಿದ್ದರು. ಇದೀಗ ಶಿವಸೇನೆಯನ್ನು ರಾಜ್ಯಕ್ಕೆ ಕರೆತರುವುದನ್ನು ಖಂಡಿಸುತ್ತೇವೆ.ಒಂದು ವೇಳೆ ಅವರು ಮುಂದುವರೆದು ಶಿವಸೇನೆ ಪಕ್ಷವನ್ನು ರಾಜ್ಯಕ್ಕೆ ತಂದಿದ್ದೇ ಆದಲ್ಲಿ ರಾಜ್ಯಾದ್ಯಂತ ಕರವೇ ವತಿಯಿಂದ ಉಗ್ರ ಹೋರಾಟ ಮಾಡಿ ಪ್ರಮೋದ್ ಮುತಾಲಿಕ್ ರನ್ನೇ ಘಡೀಪಾರು ಮಾಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಕಾನೂನು ಸಲಹೆಗಾರ ಆನಂದ್, ತಾಲೂಕಿ ಅಧ್ಯಕ್ಷ ಹೆಚ್.ಎಸ್.ವೆಂಕಟೇಶ್, ಗೌರವಾಧ್ಯಕ್ಷ ಪು.ಮಹೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಎಸ್.ಎಲ್.ಎನ್.ವೇಣು, ಉಪಾಧ್ಯಕ್ಷ ಶ್ರೀನಗರಬಷೀರ್, ಸಂಘಟನಾ ಕಾರ್ಯದರ್ಶಿ ಆನಂದ್, ಕಾರ್ಯದರ್ಶಿ ಜೋಗಳ್ಳಿ ಅಮ್ಮು, ನಗರಪ್ರಧಾನ ಕಾರ್ಯದರ್ಶಿ ಸುಬ್ರಮಣಿ, ನಗರ ಉಪಾಧ್ಯಕ್ಷ ಮಾರುತಿ, ಮುಖಂಡರಾದ ಮುನಿಆಂಜಿನಪ್ಪ, ಸೂರಿ, ಸುಹಾಸ್, ಹಸೇನ್, ತುಪೇಲ್ ಹಾಜರಿದ್ದರು.

LEAVE A REPLY

Please enter your comment!
Please enter your name here