ರಾಜ್ಯಮಟ್ಟದ ಜಾನಪದ ಜಾತ್ರೆ

0
203

ಮಂಡ್ಯ/ಮಳವಳ್ಳಿ: ಆದುನಿಕ ತಂತ್ರಜ್ಞಾನ ದಿಂದ ಹಳೆಯ ಪರಂಪರೆಯ ಕಲೆಗಳು ನಶಿಸಿಹೋಗಿದೆ ಎಂದು ಶಾಸಕ ಪಿ.ಎಂ ನರೇಂದ್ರ ಸ್ವಾಮಿ ವಿಷಾದ ವ್ಯಕ್ತ ಪಡಿಸಿದರು.
ಮಳವಳ್ಳಿ ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣ ದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆವತಿಯಿಂದ ರಾಜ್ಯಮಟ್ಟದ ಜಾನಪದ ಜಾತ್ರೆ ವೇದಿಕೆ ಕಾಯ೯ಕ್ರಮ ವನ್ನು ದೇವಿ ಪುಷ್ವ ಹಾಕುವ ಮೂಲಕ ಉದ್ಘಾಟಿಸಿ ಹಳೆಯ ಕಲೆಗಳ ಕಂಸಾಳೆ.ಜಾನಪದ ಹಾಡು,. ಸೋಬಾನೆ ಪದಗಳನ್ನು ಮರೆಯಾಗಿ ಮೊಬೈಲ್ ನಲ್ಲಿ ಮ್ಯೂಜಿಕ್ ಗಳನ್ನು ಆಳವಡಿಸಿಕೊಳ್ಳುತ್ತಿದ್ದಾರೆ. ಆದರೆ ಹಳೆಯ ಕಲೆಗಳು ನಶಿಸಿದಂತೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಜಾನಪದಜಾತ್ರೆ ಮೂಲಕ ಎಲ್ಲಾ ಶೈಲಿಯ ಜಾನಪದಗಳನ್ನು ಪರಿಚಯಸಲು ಮುಂದಾಗಿ ಎಂದರು ಕಾಯ೯ಕ್ರಮ ದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್.ಎನ್ ವಿಶ್ವಾಸ್, ಉಪಾಧ್ಯಕ್ಷ ಮಾಧು, ಸ್ಥಾಯಿ ಸಮಿತಿ ಅಧ್ಯಕ್ಷ ದೊಡ್ಡಯ್ಯ, ಜಿ.ಪಂ ಸದಸ್ಯೆ ಜಯಕಾಂತ, ಜಾನಪದಜಾತ್ರೆ ನಿರ್ದೇಶಕ ಬಾನಂದೂರು ಕೆಂಪಯ್ಯ, . ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುಯ್ಯ, ನಂಜುಂಡಸ್ವಾಮಿ ಸೇರಿದಂತೆ ಮತ್ತಿತ್ತರರು ಇದ್ದರು. ಇದೇ ಸಂದರ್ಭದಲ್ಲಿ 45 ಕ್ಕೂ ಹೆಚ್ಚು ಕಲಾತಂಡಗಳು ವೇದಿಕೆಯಲ್ಲಿ ಪ್ರದರ್ಶನ ಮಾಡುವ ಮೂಲಕ ರಂಜಿಸಿದರು.

LEAVE A REPLY

Please enter your comment!
Please enter your name here