ರಾಜ್ಯಾದ್ಯಂತ ವಿಟಿಯು ಕಾಲೇಜುಗಳ ಬಂದ್

0
140

ರಾಯಚೂರು:ವಿಟಿಯು ವಿಶ್ವವಿದ್ಯಾಲಯದ ಇಂಜನೀಯರಿಂಗ್ ಕಾಲೇಜುಗಳನ್ನು ರಾಜ್ಯಾದ್ಯಂತವಾಗಿ ಎಐಡಿಎಸ್‍ಒ ಬಂದ್ ಕರೆ ನೀಡಿ ಪ್ರತಿಭಟನೆ ನಡೆಸಿದರು.

ವಿಟಿಯು ವಿಶ್ವವಿದ್ಯಾಲಯದ ಇಂಜನೀಯರಿಂಗ್ ಕಾಲೇಜುಗಳಲ್ಲಿ ಓದುತ್ತಿರುವ 2010ರ ವಿದ್ಯಾರ್ಥಿಗಳಿಗೆ ಇಯರ್ ಬ್ಯಾಕ್ ಮತ್ತು ಕ್ರಿಟಿಕಲ್ ಇಯರ್ ಬ್ಯಾಕ್ ವ್ಯವಸ್ಥೆಯನ್ನು ತೆಗೆದು ಹಾಕಲು ಮತ್ತು ಸಿಬಿಸಿಎಸ್ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ನಡೆಸಲು ಒತ್ತಾಯಿಸಿ ರಾಜ್ಯಾದ್ಯಂತವಾಗಿ ಇಂದು ಸ್ವಯಂ ಪ್ರೇರಿತ ವಿಟಿಯು ಕಾಲೇಜುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗಿದೆ ಎಂದರು.
2016ರಲ್ಲಿ ಇಂಜನೀಯರಿಂಗ್ ಪರೀಕ್ಷೆಗಳ ಫಲಿತಾಂಶದಲ್ಲಿ ಸಾಕಷ್ಟು ಲೋಪದೋಷಗಳು ಕಂಡು ಬಂದಿದ್ದು, ಇದರಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಫಲಿತಾಂಶ ಮತ್ತು ಮರುಮೌಲ್ಯಮಾಪನ ಮಾಡುವುದನ್ನು ಪರೀಕ್ಷೆಯ ಹಿಂದಿನ ದಿನ ಪ್ರಕಟಿಸಲಾಗಿತ್ತು. ಮುಂದಿನ ಸೆಮೇಸ್ಟ್‍ರ್‍ಗಳಿಗೆ ಅರ್ಹತೆ ಪಡೆಯಲು ವಿದ್ಯಾರ್ಥಿಗಳಿಗೆ 50 ದಿನದ ಅಂತರವಿದ್ದು 15 ರಿಂದ 20 ವಿಷಯಗಳನ್ನು ಪರೀಕ್ಷೆಗೆ ಪರೀಕ್ಷೆ ಬರೆಯಬೇಕಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿ ಅನುತ್ತೀರ್ಣವಾಗುವ ಸಂಭವ ಹೆಚ್ಚಾಗಿದೆ ಎಂದು ತಿಳಿಸಿದರು. ಸಿಬಿಸಿಎಸ್ ಮಾದರಿಗಳಿಗಿಂತ ಹಿಂದಿನ ಎಲ್ಲಾ ಮಾದರಿಗಳಿಗಿಂತ ವಿಭಿನ್ನವಾಗಿದ್ದು ವಿದ್ಯಾರ್ಥಿಗಳನ್ನು ಮುಂದಿನ ವರ್ಷಕ್ಕೆ ಹೋಗದೆ ತಡೆಹಿಡಿಯಲಾಗಿದೆ. ಕೋರ್ಸ್‍ನ ಅರ್ಧ ಭಾಗವನ್ನು 2010ರ ಮಾದರಿಯಲ್ಲಿ ಉಳಿದರ್ಧ ಸಿಬಿಸಿಎಸ್ ಮಾದರಿಯಲ್ಲಿ ಕಲಿಯಬೇಕಾಗಿದೆ.
ಅರ್ಹ ವಿದ್ಯಾರ್ಥಿಗಳಿಗೆ ಪ್ರತ್ತೇಕವಾಗಿ ಹಳೇಯ ಮಾದರಿಯಲ್ಲಿಯೇ ಬೋಧನೆ ಮಾಡಲು ಆದೇಶ ನೀಡಿದೆ. ಹಲವು ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ ಹಾಗೂ ಪ್ರಾಧ್ಯಾಪಕರ ಸಮಸ್ಯೆಯನ್ನು ಎದುರಿಸುತ್ತಿವೆ. ಬೇರೆ ಬೇರೆ ತರಗತಿಗಳನ್ನು ಸಮಾನಾಂತರವಾಗಿ ನಡೆಸುವುದು ಅಸಾಧ್ಯ. ಈ ಕೂಡಲೇ ಸರಕಾರ ಇಂಜನೀಯರಿಂಗ್ ವಿದ್ಯಾರ್ಥಿಗಳ ಭವಿಷ್ಯ ಅತಂತ್ರಗೊಳಿಸದೇ ಸಮಸ್ಯೆಯನ್ನು ಬಗೆಹರಿಸಬೇಕೆಂದು ಬಂದ್ ಮಾಡುವ ಮೂಲಕ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಹೇಶ ಚೀಕಲಪರ್ವಿ, ನವೀನ, ಶ್ರೀನಿವಾಸ, ಅಕ್ಷಯ ಸೇರಿದಂತೆ ಇಂಜನೀಯರಿಂಗ್ ಕಾಲೇಜ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here