ರಾಜ್ಯ ಮಟ್ಟದ ಖಾದಿ ಉತ್ಸವ..

0
221

ಚಿಕ್ಕಬಳ್ಳಾಪುರ:ರಾಜ್ಯ ಮಟ್ಟದ ಖಾದಿ ಉತ್ಸವ -2018.ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ವಜ್ರ ಮಹೋತ್ಸವದ ಪ್ರಯುಕ್ತ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ವತಿಯಿಂದ ಖಾದಿ ಉತ್ಸವದಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟವನ್ನ ಫೆಬ್ರವರಿ 2 ರಂದು ಖಾದಿ ಉತ್ಸವದ ಉದ್ಘಾಟನೆಯಾಗಲಿದ್ದು ಅಂದಿನಿಂದ ಸುಮಾರು 15 ದಿನಗಳ ಕಾಲ ಚಿಕ್ಕಬಳ್ಳಾಪುರದ ಪಿ.ಎಲ್.ಡಿ.ಬ್ಯಾಂಕ್ ಆವರಣದಲ್ಲಿ ಆಯೋಜಿಸಲಾಗಿದೆ ಮತ್ತು ಈ ಖಾದಿ ಉತ್ಸವದ ಅವಕಾಶವನ್ನ ಜಿಲ್ಲೆಯ ಸಾರ್ವಜನಿಕರು ಸದುಪಯೋಗವನ್ನ ಪಡೆದು ಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರಾದ ಯಲುವಳ್ಳಿ ರಮೇಶ್ ರವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಹಾಗು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮುಖ್ಯ. ಕಾರ್ಯ ನಿರ್ವಹಣಾದಿಕಾರಿಗಳಾದ ಜಯವಿಭವ ರವರು ಮಾತನಾಡಿ ಇನ್ನು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗದ ವಸ್ತುಗಳನ್ನ ಆನ್ ಲೈನ್ ಮುಖಾಂತರ ಕೂಡ ಪಡೆಯುವ ಅವಕಾಶವನ್ನ ಮಂಡಳಿಯು ಕಲ್ಪಿಸಿ ಕೊಡಲಿದೆ ಇದರಿಂದ ಗ್ರಾಹಕರಿಗೆ ಬಹಳ ಉಪಯೋಗವಾಗಲಿದೆ ಎಂದು ತಿಳಿಸಿದರು.

ವರದಿಗಾರರು
ಅರಿಕೆರೆ ಮುನಿರಾಜು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ

LEAVE A REPLY

Please enter your comment!
Please enter your name here