ರಾಜ್ಯ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ…

0
331

ಬೆಂಗಳೂರು/ಮಹದೇವಪುರ:ಗೃಹಸ್ಥ ಮಹಿಳೆಯರು ಸ್ವಾವಲಂಬಿಗಳಾಗಲು ರಾಜ್ಯ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಕೆಂಪರಾಜ್ ತಿಳಿಸಿದರು. ಮಹದೇವಪುರ ಕ್ಷೇತ್ರದ ಆವಲಹಳ್ಳಿ ಗ್ರಾಮ ಪಂಚಾಯಿತಿಯ ಚೀಮಸಂದ್ರ ಗ್ರಾಮದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಮತ್ತು ಟೈಲರಿಂಗ್, ಬ್ಯುಟೀಷಿಯನ್ ಕೌಶಲ್ಯಗಳ ತರಭೇತಿ ಶಿಭಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜದಲ್ಲಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕವಾಗಿ ಸಬಲರಾಗಿ, ಉತ್ತಮ ಜೀವನ ಮಟ್ಟ ಹೊಂದಲು ಪುರುಷರೇ ಹೆಚ್ಚು ದುಡಿಮೆಯಲ್ಲಿ ನಿರತರಾಗಿದ್ದಾರೆ, ಶಿಕ್ಷಿತ ಮಹಿಳೆಯರು ಅತ್ಯುನ್ನತ ಹುದ್ದೆಗಳಿಗೇರುತ್ತಿದ್ದಾರೆ, ಶಿಕ್ಷಣ ದಿಂದ ವಂಚಿತರಾದವರು ಟೈಲರಿಂಗ್, ಬ್ಯುಟೀಷಿಯನ್ ಕೌಶಲ್ಯಗಳ ಅಭಿವೃದ್ದಿಗಳಂತಹ ಅವಕಾಶಗಳನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಮನವಿ ಮಾಡಿದರು, ಗೃಹಸ್ಥ ಮಹಿಳೆಯರು ಕುಟುಂಬಕ್ಕೆ ಸಹಕಾರಿಯಾಗಲು ದುಡಿಯುವ ಮಾರ್ಗ ಹುಡುಕುತ್ತಿರುತ್ತಾರಾದರೂ ಮಕ್ಕಳು ಮನೆಯಲ್ಲಿನ ಹಿರಿಯರನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿದ್ದಾರೆ, ಸಕರ್ಾರ ಮಹಿಳೆಯರಿಗೆ ಟೈಲರಿಂಗ್, ಬ್ಯುಟೀಷಿಯನ್, ಎಮ್ರಾಯ್ಡರಿಂಗ್, ಮೆಹಂದಿಯಂತಹ ಕೌಶಲ್ಯಗಳ ತರಭೇತಿ ನೀಡಿ ದುಡಿಮೆಗೆ ಪ್ರೆರೇಪಿಸುವ ಕಾರ್ಯಕ್ಕೆ ಮುಂದಾಗಿದೆ, ಮಹಿಳೆಯರು ಸರ್ಕಾರದ ಸದವಕಾಶವನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗುವ ಮೂಲಕ ಕುಟುಂಬ ನೆರವಾಗಿ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಬಹುದು ಎಂದರು. ಇದೆ ವೇಳೆ ಚೀಮಸಂದ್ರ ಗ್ರಾಮದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ಹೊಲಿಗೆ ಯಂತ್ರ ತರಭೇತಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಆವಲಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಜ್ಯೋತಿ ದೇವರಾಜ್, ಗ್ರಾ.ಪಂ ಸದಸ್ಯರಾದ ಶಾರದಮ್ಮ, ಸುನಾಂದಮ್ಮ, ಉಷಾ, ಶ್ರೀನಿವಾಸ್, ಮಂಜುನಾಥ್, ನಾರಯಣಸ್ವಾಮಿ ಮತ್ತು ಅಧಿಕಾರಿಗಳು ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here