ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾಯಕರ್ತರಿಂದ ಪ್ರತಿಭಟನೆ

0
184

ದೊಡ್ಡಬಳ್ಳಾಪುರ:ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾಯಕರ್ತರಿಂದ ಪ್ರತಿಭಟನೆ. ದೊಡ್ಡಬಳ್ಳಾಪುರ ನಗರದ ಜಯಚಾಮರಾಜೇಂದ್ರ ವೃತ್ತದಿಂದ ಪ್ರತಿಭಟನೆ ಮೆರವಣಿಗೆ ಹೊರಟು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಪವಿಭಾಗಾಧಿಕಾರಿಗಳ ಕಚೇರಿ ಎದುರು  ಬೃಹತ್ ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರು,ಶಾಸಕರು ಭ್ರಷ್ಟಚಾರದಲ್ಲಿ ಭಾಗಿಯಾಗಿದ್ದಾರೆ. ಮುಖ್ಯಮಂತ್ರಿ ಮತ್ತು  ಹೈಕಾಮಮಂಡ್ ಗೆ ಕೋಟಿ ಕೋಟಿ ಹಣ ನೀಡಿ ಕುರ್ಚಿ ಉಳಿಸಿ ಕೊಂಡಿದ್ದಾರೆ. ಕ್ಷೇತ್ರದ ಮಾಜಿ ಶಾಸಕರು ಜೆ.ನರಸಿಂಹಸ್ವಾಮಿ ಮಾತನಾಡುತ್ತಾ ರಾಜ್ಯದ ಜನತೆಗೆ ಸಿಎಂ.ಸಿದ್ದರಾಮಯ್ಯ  ಅನೇಕ ಧೌರ್ಭಾಗ್ಯ ಗಳನ್ನು ಕರುಣಿಸುದ್ದಾರೆ ಆದರೆ ದೊಡ್ಡಬಳ್ಳಾಪುರದ ಜನತೆಗೆ ಮಾನ್ಯ ಶಾಸಕರು ಟಿ.ವೆಂಕಟರಮಣಯ್ಯ ವಿಶೇಷ ವಾಗಿ ಎಣ್ಣೆ ಭಾಗ್ಯ ಕಲ್ಪಿಸಿ ಬಡ ಕುಟುಂಬಗಳು ಬೀದಿಗೆ ಬೀಳುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು. ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವ ಕಾಂಗ್ರೆಸ್ ಸಚಿವರುಗಳ ಅಕ್ರಮಗಳ ಕುರಿತು ಕೂಡಲೇ  ಸಿಬಿಐ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿದರು ಪ್ರತಿಭಟನೆ ಕಾರ್ಯಕ್ರಮದಲ್ಲಿ ಮಾಜಿಸಚಿವ ಬಚ್ಚೇಗೌಡ, ಮಾಜಿಶಾಸಕ ಜೆ.ನರಸಿಂಹಸ್ವಾಮಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಿಜೆಪಿ ಅಧ್ಯಕ್ಷ ನಾಗೇಶ್,ಪ್ರಧಾನ ಕಾರ್ಯದರ್ಶಿ ಪುಷ್ಪಶಿವಶಂಕರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವತ್ಸಲಾ,ತಾಲ್ಲೂಕು ಅಧ್ಯಕ್ಷೆ ಲೀಲಾಮಹೇಶ್, ತಾಲ್ಲೂಕು ಅಧ್ಯಕ್ಷ ಸಿ.ನಾರಾಯಣಸ್ವಾಮಿ,ನಗರಾಧ್ಯಕ್ಷ ಕೆಹೆಚ್.ರಂಗರಾಜು ಸೇರಿದಂತೆ ಕಾರ್ಯಕರ್ತರು ಅನೇಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here