ರಾಮ್ ಗೋಪಾಲ್ ವರ್ಮ ವಿರುದ್ಧ ಕರವೇ ಪ್ರತಿಭಟನೆ

0
154

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ವತಿಯಿಂದ ತೆಲುಗು ಚಿತ್ರನಿರ್ಧೇಶಕ ರಾಮ್ ಗೋಪಾಲ್ ವರ್ಮ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ಸಂಘಟನೆಯ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡುತ್ತಾ ಡಬ್ಬಿಂಗ್ ವಿಚಾರವಾಗಿ ಕನ್ನಡಿಗರನ್ನು ಅವಾಚ್ಯ ಮತ್ತು ಅವಹೇಳನಾಕಾರಿಯಾಗಿ ಮಾತನಾಡಿ ಸ್ವಾಭಿಮಾನಿ ಕನ್ನಡಿಗರಿಗೆ ಮನಸುಗಳಿಗೆ ನೋವುಂಟು ಮಾಡಿರುವುದು ಖಂಡನೀಯ. ಪರಭಾಷಿಗರನ್ನು ಅಣ್ಣತಮ್ಮಂದಿರಂತೆ ಕಾಣುವ ಸಹೃದಯಿ ಕನ್ನಡಿಗರ ತಾಲ್ಮೆಯನ್ನು ಕೆಣಕುವುದು ಅವರ ವಿನಾಶಕ್ಕೆ ಅವರೇ ನಾಂದಿ ಹಾಡಿದಂತಾದೀತು. ತಿಂದ ಮನೆಗೆ ಕಣ್ಣಹಾಕುವ ಕೆಲಸಕ್ಕೆ ಮುಂದಾದ ಮೂರ್ಖ ರಾಮ್ ಗೋಪಾಲ್ ವರ್ಮ ಆಗಿಂದಾಗ್ಗೆ ತಮಗೆ ಸಂಬಂಧವೇ ಇಲ್ಲದ ವಿಚಾರಗಳಲ್ಲಿ ಮೂಗು ತೂರಿಸಿ ಪುಕ್ಕಟೆ ಪ್ರಚಾರ ಪಡೆದುಕೊಳ್ಳುವ ಬರದಲ್ಲಿ ಕನ್ನಡಿಗರ ಮನಸಿಗೆ ಕೊಳ್ಳಿ ಇಟ್ಟರೇ ನೋಡಿಕೊಂಡು ಸುಮ್ಮನಿರುವ ಅಸಮರ್ತರು ಕನ್ನಡಿರಲ್ಲ ಎಂಬುದನ್ನು ಅರಿತು ಈ ಕೂಡಲೇ ಎಚ್ಚೆತ್ತು ಸಮಸ್ತ ಕರ್ನಾಟಕದ ಸಹೃದಯಿ ಕನ್ನಡಿಗರಲ್ಲಿ ಕ್ಷಮೆಯಾಚಿಸಲೇ ಬೇಕು.ಒಂದು ವೇಳೆ ನಾಮಾಡಿದ್ದೆ ಸರಿ ಎಂದು ಉದ್ದಟತನ ಪ್ರದರ್ಶನಕ್ಕೆ ಮುಂದಾದಲ್ಲಿ ಆತನ ವಿರುದ್ಟ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ವತಿಯಿಂದ ರಾಜ್ಯಾದಂತ್ಯ ಉಗ್ರಹೋರಾಟ ನಡೆಸಿ ಆತನನ್ನು ಕರ್ನಾಟಕದಿಂದ ಬಹಿಷ್ಕಾರ ಹಾಕಿ ಕನ್ನಡ ಚಿತ್ರರಂಗದಲ್ಲಿ ಯಾವುದೇ ರೀತಿಯ ಅವಕಾಶ ನೀಡದಂತೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಒತ್ತಾಯಿಸುತ್ತೇವೆ. ಒಂದು ವೇಳೆ ಇಂತಹ ಕನ್ನಡ ವಿರೋಧಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸುವ ಯಾವುದೇ ವ್ಯಕ್ತಿಯನ್ನು ಕನ್ನಡ ವಿರೋಧಿಗಳಾಗಿ ಪರಿಗಣಿಸಿ ಅವರ ವಿರುದ್ದವೂ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಕರವೇ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಪು.ಮಹೇಶ್.ಕಾರ್ಯಾಧ್ಯಕ್ಷ ಹಮಾಮ್ ಪ್ರಕಾಶ್, ಕಾರ್ಯದರ್ಶಿ ಬಷೀರ್, ನಗರಾಧ್ಯಕ್ಷ ಎಸ್ಕೆ ಸತೀಶ್, ಕಾರ್ಯದರ್ಶಿ ಸುಬ್ಬಣ್ಣ,ವಿಜಯ್ ಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here