ರಾಷ್ಟೀಯ ಕೈಮಗ್ಗ ದಿನಾಚರಣೆ..

0
138

ಚಾಮರಾಜನಗರ/ಕೊಳ್ಳೇಗಾಲ;ವಿದ್ಯುತ್ ಕೈಮಗ್ಗಕ್ಕೆ ದೊರೆಯುತ್ತಿರುವ ಸಕಾ೯ರದ ಸಬ್ಸಿಡಿ ಯನ್ನು ಮಾನವ ಚಾಲಿತ ಕ್ಟೆಮಗ್ಗಕ್ಕೂ ಕೊಡಿಸಲು ಸಕಾ೯ರದ ಗಮನ ಸೆಳೆಯುವುದಾಗಿ ಶಾಸಕ ಎಸ್. ಜಯಣ್ಣ ಭರವಸೆ ನೀಡಿದರು.

ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬೆಂಗಳೂರು ದಕ್ಷಿಣ ವಲಯ ಕೈಮಗ್ಗ ಜವಳಿ ಇಲಾಖೆ ಹಾಗೂ ನೇಕಾರರ ಸೇವಾ ಕೇಂದ್ರದ ವತಿಯಿಂದ ಆಯೋಜಿಸಿದ್ದ 3ನೇ ರಾಷ್ಟೀಯ ಕೈಮಗ್ಗ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ವಿದ್ಯುತ್ ಕೈಮಗ್ಗಕ್ಕೆ ದೊರೆಯುತ್ತಿರುವ ಸಕಾ೯ರದ ಸಬ್ಲಿಡಿಯನ್ನು ಮಾನವ ಚಾಲಿತ ಕೈಮಗ್ಗಕ್ಕೂ ಕೊಡಿಸಲು ಸಕಾ೯ರದ ಗಮನ ಸೆಳೆಯಲಾಗುವುದು ಎಂದರು.
ರಾಷ್ಟೀಯ ಕೈಮಗ್ಗ ನೇಕಾರರ ಕಾಲೋನಿ ನಿರ್ಮಿಸಲು ಶ್ರೀಚೌಡೇಶ್ವೆರಿ ಶಾಲೆ ಹಿಂಭಾಗದಲ್ಲಿ ಜಮೀನು ಹುಡುಕಾಟ ನಡೆಸಲಾಗುತ್ತಿದ್ದು, ಭೂಮಿ ಮಾಲಿಕರು ಮಾರಾಟ ಮಾಡಲು ಮು೦ದೆ ಬಲದಲ್ಲಿ ಸಬ್ ರಿಜಿಸ್ಟರ್ ಕಚೇರಿಯ ಬೆಲೆಗಿಂತ ಮೂರುಪಟ್ಟು ಹೆಚ್ಚು ಹಣಕ್ಕೆ ಸಕಾ೯ರದಿ೦ದ ಖರೀದಿಸಿ ನೇಕಾರರಿಗೆ ಉಚಿತವಾಗಿ ವಿತರಿಸಲು ಕ್ರಮವಹಿಸುತ್ತೇನೆ ಎ೦ದು ಭರವಸೆ ನೀಡಿದರು.
ಬೆಂಗಳೂರು ದಕ್ಷಿಣ ವಲಯ ಕೈಮಗ್ಗ ಜವಳಿ ಇಲಾಖೆ ಜಂಟಿ ನಿರ್ದೇಶಕ ಸುರೇಶ್ ಕುಮಾರ್ ಮಾತನಾಡಿ, ಚಾಮರಾಜನಗರ ಜಿಲ್ಲೆಗೆ 3ನೇ ವರ್ಷದ ಕ್ಲಸ್ಟರ್ ಯೋಜನೆ ಲಭಿಸಿದ್ಧು, ಸರ್ಕಾರದಿಂದ 49 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದೆ. ಈ ಕ್ಲಸ್ಟರ್ ವ್ಯಾಪ್ತಿಗೆ 13 ಹಳ್ಳಿಗಳು ಸೇರಲಿದ್ದು, ಯೋಜನೆಯ ಫಲಾನುಭವಿಗಳಿಗೆ ಕೈಮಗ್ಗದ ಸಾಧನ ಸಲಕರಣೆ, ಮೋಟಾರ್ ಚರಕ. 60 ಹೊಸ ಕೈಮಗ್ಗವನ್ವು ವಿತರಿಸಲಾಗುವುದು. 50 ಲಕ್ಷ ರೊ. ವೆಚ್ಛದಲ್ಲಿ ಸಾಮಾನ್ಯ ಕಾಯಾ೯ಗಾರ ನಡೆಸಲು ಹಾಗೂ ಮಾರಾಟ ಸಂರ್ಕೀಣಕ್ಕೆ 5 ಲಕ್ಷ ರೂ. ಬಿಡುಗಡೆ ಮಾಡಲಾಗುವುದು ಎಂದರು.
ಬೆಂಗಳೂರಿನ ನೇಕಾರ ಸೇವಾಕೇಂದ್ರದ ಉಪನಿರ್ದೇಶಕ ಜವಹಾರ್ ಕುಸ್ಕೋನ್ ಕೈಮಗ್ಗ ಜವಳಿ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಸೈಯದ್ ನಯೀಂ ಅಹಮದ್, ದೇವಾಂಗ ಮುಖಂಡರಾದ ಅಚ್ಗಾಳ್ ನಾಗರಾಜಪ್ಪ ನಗರಸಭೆ ಸದಸ್ಯರಾದ ಪರಮೇಶ್ವರಯ್ಯ , ಎ.ಪಿ.ಶಂಕರ್, ಕೃಷ್ಣವೇಣಿ, ಚಾ.ನಗರದ ಬ್ಲಾಕ್ ನೇಕಾರರ ಸಂಘದ ಅಧ್ಯಕ್ಷ ವಿ.ರಾಜು ಇದ್ದರು.

LEAVE A REPLY

Please enter your comment!
Please enter your name here