ರಾಷ್ಟ್ರದ್ವಜಕ್ಕೆ ಅವಮಾನ ಜನಪ್ರಿಯರಾಜಕಾರಣಿಗಳೆಲ್ಲಾ ಮೌನ?

0
290

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ಸ್ವಾತಂತ್ರ್ಯ ಬಂದು ಏಳುದಶಕಗಳು ಕಳೆದರೂ ಸ್ವಾತಂತ್ರ್ಯದ ಪ್ರತೀಕವಾದ ರಾಷ್ಟ್ರದ್ವಜದ ಘನತೆಗೌರ ಅರಿಯದ ಅಧಿಕಾರಿಗಳು. ಆಗಷ್ಟ್ 15 ರಂದು ಮಾತ್ರ ಕಾಟಾಚಾರಕ್ಕೆ ಆಚರಣೆ ಮಾಡಿ ಕೈ ತೊಳೊದುಕೊಂಡು ಇಡೀ ವರ್ಷ ಅವರ ವರಮಾನದ ಕಡೆ ಗಮನಹರಿಸೋ ಇವರುಗಳಿಗೆ ರಾಷ್ಟ್ರದ್ವಜಕ್ಕೆ ಗೌರವ ಸಲ್ಲಿಸಬೇಕೆಂಬ ಕನಿಷ್ಟ ಪ್ರಜ್ಞೆಯನ್ನು ಮರೆಯುತ್ತಿರುವ ಇವರಿಗೆ ನಾಚಿಕೆಯಾಗಬೇಕು.
ಸಂಬಂಧಪಟ್ಟ ಅಧಿಕಾರಿಗಳು ಇತ್ತಗಮನ ಹರಿಸಿ ಇವರುಗಳ ವಿರುದ್ಧ ಕ್ರಮ ಜರಿಗಿಸಬೇಕಿದೆ, ಇಲ್ಲಿನ ತಾಲ್ಲೂಕು ಪಂಚಾಯ್ತಿಯ ಆವರಣದಲ್ಲಿನ ರಾಷ್ಟ್ರದ್ವಜ ಬಣ್ಣ ಕಳೆದುಕೊಂಡು ವರ್ಷಗಳು ಕಳೆದರೂ ಇತ್ತ ಕಣ್ಣೆತ್ತಿ ನೋಡದ ನಿರ್ಲಕ್ಷ್ಯಾಧಿಕಾರಿ  ರಾಷ್ಟ್ರದ್ವಜಕ್ಕೆ ಅವಮಾನ ಮಾಡುತ್ತಿರುವ ಇಂಥಹ ಅಧಿಕಾರಿಗಳಿಗೆ ಸರ್ಕಾರ ಅದ್ಯಾವ ಕಾರಣಕ್ಕೆ ಸಂಬಳ ನೀಡುತ್ತಿದೆಯೋ ಎಂಬ ಅನುಮಾನ ಜನಸಾಮಾನ್ಯರಲ್ಲಿ ಮೂಡಿದೆ.ರಾಷ್ಟ್ರದ್ವಜದನಬಗ್ಗೆ ಜನಸಾಮಾನ್ಯರಿಗಿರುವ ಗೌರವ ಸಂಬಳ ಪಡೆಯುವ ಅಧಿಕಾರಿಗಳಿಗೆ ಇಲ್ಲದಿರುವುದು ಒಂದು ದೌರ್ಭಾಗ್ಯ.

ದಿನ ಬೆಳಗಾದರೆ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಸಾವಿರಾರು ಕೋಟಿ ಅನುದಾನ ತಂದಿರುವ ಹೇಳಿಕೆಗಳು ಪುಂಕಾನುಪುಂಕವಾಗಿ ಕೇಳಿಬರುತ್ತಿದ್ದರೂ ಕನಿಷ್ಟ ಒಂದು ರಾಷ್ಟ್ರದ್ವಜ ಖರೀದಿಸಿ ಬಣ್ಣಕಳೆದುಕೊಂಡ ಬಾವುಟ ಬದಲಾಯಿಸುವ ಹಣಕಾಸು ತಾಲ್ಲೂಕು ಪಂಚಾಯ್ತಿಯಲ್ಲಿಲ್ಲವೇ ಎಂಬುದಕ್ಕೆ ದಿನನಿತ್ಯ ಹೇಳಿಕೆನೀಡುವ ರಾಜಕಾರಣಿಗಳೇ ಉತ್ತರಿಸಬೇಕಿದೆ.

LEAVE A REPLY

Please enter your comment!
Please enter your name here