ರಾಷ್ಟ್ರಧ್ವಜಕ್ಕೆ ಅಪಮಾನ.

0
140

ಬೆಂಗಳೂರು/ವರ್ತೂರು:ಇಂದು ರಾಷ್ಟ್ರದ್ಯಂತ ೬೯ ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಣೆ ಮಾಡಲಾಗಿದ್ದು, ಶಾಲಾ ಮುಖ್ಯ ಶಿಕ್ಷಕರ ಯಡವಟ್ಟಿನಿಂದ ರಾಷ್ಟ್ರ ಧ್ವಜಕ್ಕೆ ಅಪಮಾನ ವಾಗಿರುವಂತ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವರ್ತೂರು ಸರ್ಕಾರಿ ಉರ್ದು ಶಾಲೆಯಲ್ಲಿ ೬೯ ನೇ ಗಣರಾಜ್ಯೋತ್ಸ ಅಂಗವಾಗಿ ಇಂದು ಮುಂಜಾನೆ ಶಾಲೆಯಲ್ಲಿ ರಾಷ್ಟ್ರ ಧ್ವಜ ವನ್ನು ಹಾರಿಸಲಾಗಿತ್ತು. ಸಂಜೆ ೫:೩೦ ಸಮಯದಲ್ಲಿ ಧ್ವಜವನ್ನು ಕೆಳಗಿಳಿಸುವ ಸಂದರ್ಭದಲ್ಲಿ ಶಿಕ್ಷಕರು ಇದರ ಜವಬ್ದಾರಿಯನ್ನು ನಿರ್ವಹಿಸಿ ಮನೆಗೆ ತೆರಳದೆ ಸೈಯದ್ ಎಂಬ ವ್ಯಕ್ತಿಗೆ ಕೆಲಸ ನೇಮಿಸಿದ್ದಾರೆ. ಇದರ ಬಗ್ಗೆ ಅರಿವಿಲ್ಲದ ಸೈಯದ್ ರಾಷ್ಟ್ರ ಧ್ವಜವನ್ನು ಧ್ವಜಸ್ತಂಭ ಸಮೇತ ಕೆಳಗಿಳಿಸಿದ್ದು, ನೆಲದ ಮೇಲಿಟ್ಟು ಕಾಲಿನಿಂದ ತುಳಿದು ಬಿಚ್ಚುವ ಮೂಲಕ ಅಪಮಾನ ವೆಸಗಿದ್ದಾನೆ ಎನ್ನಲಾಗಿದೆ.

ಇದನ್ನು ಕಂಡ ಸಾರ್ವಜನಿಕರೋರ್ವರು ಸೈಯದ್ ನನ್ನು ಪ್ರಶ್ನಿಸಿದಾಗ ಗಾಬರಿಗೊಂಡು ಕುರ್ಚಿಮೇಲೆ ಇಟ್ಟು ಬಿಡಿಸಲು ಮುಂದಾಗಿದ್ದು,
ಈ ಬಗ್ಗೆ ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ ನಂತರ
ಸೈಯದ್ ನನ್ನು ಬಂದಿಸಿ ವಿಚಾರಣೆ ನಡೆಸಿದಾಗ ಪ್ರಕರಣದ ಸತ್ಯಾಂಶ ತಿಳಿದು ಬಂದಿದೆ. ಇದರಲ್ಲಿ ಶಾಲಾ ಶಿಕ್ಷಕರ ಬೇಜವಬ್ದಾರಿ ತನ ತೋರುತ್ತಿದ್ದು ಸಂಬಂದಪಟ್ಟ ಅಧಿಕಾರಿಗಳು ಶಾಲಾ ಶಿಕ್ಷಕರ ವಿರುದ್ದ ಯಾವ ಕ್ರಮ ಜರುಗಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ

LEAVE A REPLY

Please enter your comment!
Please enter your name here