ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮ…

0
133

ಬಳ್ಳಾರಿ/ಹೊಸಪೇಟೆ:ಭಾರತದಲ್ಲಿ ಪುಟ್ಟ ಪುಟ್ಟ ರಾಜರಿಂದ ಆಡಳಿತ ಕಂಡಂತಹ ವಿವಿಧ ರಾಜ್ಯಗಳನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ದೇಶದ ಉಕ್ಕಿನ ಮನುಷ್ಯ ಎಂದು ಪ್ರಖ್ಯಾತಿ ಹೊಂದಿದ ಸರ್ದಾರ್ ವಲ್ಲಬಾಯಿ ಪಟೇಲ್ ಎಂದಿಗೂ ಅಜರಾಮರಾಗಿದ್ದಾರೆ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಫಣಿರಾಜ್ ಹೇಳಿದರು. ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯತಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮದ ನಿಮಿತ್ತ ಸರ್ದಾರರನ್ನು ಉದ್ದೇಶಿಸಿ ಮಾತನಾಡಿದರು. ಬಾರತದ ರಾಜಕೀಯ ಏಕಿಕರಣದಲ್ಲಿ ಪ್ರಮುಖ ಪಾತ್ರ ವಹಿಸಿ ರಾಷ್ಟ್ರ ಹಿತಕ್ಕಾಗಿ ಸರ್ಕಾರದ ನಿರ್ದಾರಗಳನ್ನು ಜಾರಿ ಮಾಡಲು ಸಿದ್ದರಿದ್ದರು ಎಂದರು. ಬಳಿಕ ಪಂಚಾಯತಿ ಸಿಬ್ಬಂದಿಗಳಿಗೆ ರಾಷ್ಟ್ರೀಯ ಏಕಾತ ದಿವಸ್‍ನ ಪ್ರತಿಜ್ಞಾವಿಧಿ ಭೋದಿಸಿದರು. ಪ.ಪಂ ಅಧ್ಯಕ್ಷ ಬಿ.ಆರ್. ಮಳಲಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಸಿ.ಖಾಜಾ ಹುಸೇನ್, ಗಂಗಮ್ಮ, ಶಶಿಧರ, ಸಿಬ್ಬಂದಿಗಳಾದ ಮಂಜುನಾಥ, ಬಿಲಾಲ್ ಪಾಷ, ನಾಗರಾಜ್ ಲಕ್ಷ್ಮೀದೇವಿ ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here