ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ..

0
337

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ.. ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮತ್ತು ಜಿಲ್ಲಾ ಸಮಿತಿಯಿಂದ ರಸ್ತೆ ತಡೆ.ನ್ಯಾಯ ಮೂರ್ತಿ ಡಾ ಎ.ಜೆ ಸದಾಶಿವ ಆಯೋಗ ವರದಿಯನ್ನು ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿದ್ದಾರೆ ಎಂದು ರಾಷ್ಟ್ರೀಯ ಹೆದ್ದಾರಿ ಗಳಲ್ಲಿ ರಸ್ತೆ ತಡೆ.ಬಹು ಸಂಖ್ಯಾತರಾಗಿರುವ ಮಾದಿಗ ದಂಡೋರ ,ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಸಮಾರು 30 ವರ್ಷ ಗಳಿಂದ ವಿವಿಧ ರೀತಿಯ ಹೋರಾಟಗಳು ,ಚಳುವಳಿಗಳನ್ನು ಮಾಡಿಕೊಂಡು ಬಂದಿದು ಯಾವುದೇ ರೀತಿಯಾದ ಸೌಲಭ್ಯಗಳು ಸಿಗದೆ ವಂಚಿತರಾಗಿದ್ದರೆ ಎಂದು ನ್ಯಾಯಮೂರ್ತಿ ಡಾ ಎ.ಜೆ ಸದಾಶಿವ ಆಯೋಗ ವರದಿಯ ಪ್ರಕಾರ ಅನುಷ್ಠಾನಗೊಳಿಸದೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯತೆಯನ್ನು ತೋರುತ್ತ ಅನ್ಯಾಯ ಮಾಡುತ್ತಿದ್ದಾರೆ ಎಂದು ಮತ್ತು ಪ್ರಸ್ತುತ ನಡೆಯುತ್ತಿರುವ ಬೆಳಗಾಂ ಅಧಿವೇಶನದಲ್ಲಿ ನ್ಯಾಯಮೂರ್ತಿ ಡಾ ಎ.ಜೆ ಸದಾಶಿವ ಆಯೋಗ ವರದಿ ಅನುಷ್ಠಾನ ಮತ್ತು ಒಳ ಮೀಸಲಾತಿ (ಎ.ಬಿ.ಸಿ.ಡಿ ವರ್ಗೀಕರಣ) ಜಾರಿಗೆ ಆಗ್ರಹಿಸಿ ಹಾಗೂ ಮಾದಿಗ ಜನಾಂಗಕ್ಕೆ ಒದಗಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆಂದು ಆಶ್ವಾಸನೆ ಕೊಟ್ಟಿರುತ್ತಾರೆ ಎಂದು ರಾಷ್ಟ್ರೀಯ ಹೆದ್ದಾರಿ ಸುಮಾರು ಎರಡು ಗಂಟೆಗಳ ಕಾಲ ರಸ್ತೆ ತಡೆ ಮಾಡಿದರು.ನಂತರ ತಾಲ್ಲೂಕಿನ ಉಪ ತಹಶಿಲ್ದಾರರಿಗೆ ಅಣ್ಣಪ್ಪ ರವರಿಗೆ ಮಾನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಎಂ.ವಿ ರಾಮಪ್ಪ ,ಗುರು ಪ್ರಸಾದ ,ಶ್ರೀನಿವಾಸ ,ಮಿಟಹಳ್ಳಿ ಮಂಜುನಾಥ ,ಬಾರತ್ ಕುಮಾರ್ ,ಆಟೋ ಕೃಷ್ಣ ,ನರಸಿಂಹ ,ಎಸ್ ನಾರಾಯಣ ಸ್ವಾಮಿ ,ಸ್ವರಪಲ್ಲಿ ಕೃಷ್ಣಪ್ಪ ,ಶ್ರೀಕಾಂತ್ ಮೂರ್ತಿ,ಆನಂದ , ಇನ್ನೂ ಮುಂತಾದವರು ಮಾದಿಗ ದಂಡೋರ ಕಾರ್ಯಕರ್ತರು ಇದ್ದರೂ.

LEAVE A REPLY

Please enter your comment!
Please enter your name here