ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ..

0
222

ಬೆಂಗಳೂರು/ಕೆ.ಆರ್.ಪುರ:- ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾದಾನ ಮಾಡುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಸ್ಥಳೀಯ ಶಾಸಕ ಭೈರತಿ ಬಸವರಾಜು ಹೇಳಿದರು.

ಕೇಂಬ್ರಿಡ್ಜ್ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಚಿಗುರು-2018ರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಇಲ್ಲಿ ವಿದ್ಯಾಭ್ಯಾಸ ಮಾಡಿ ಹೆಚ್ಚಿನ ಅಧ್ಯಯನಕ್ಕೆ ಹಾಗೂ ಪ್ರಮುಖ ಕಂಪನಿಗಳಲ್ಲಿ ಕೆಲಸ ಮಾಡಲು, ವಿದೇಶಗಳಿಗೆ ಇಲ್ಲಿಯ ವಿಧ್ಯಾರ್ಥಿಗಳು ಹೋಗುತ್ತಿರುವುದು ಸಂತೋಷದ ವಿಚಾರ ಹಾಗೂ ಇಂತಹ ಶಿಕ್ಷಣ ಸಂಸ್ಥೆ ನನ್ನದೇ ಕ್ಷೇತ್ರದಲ್ಲಿರುವುದು ನಮಗೆ ಹೆಚ್ಚು ಹೆಮ್ಮೆ ತರುವ ವಿಚಾರ ಎಂದರು.
ಐಐಎಂ ಬೆಂಗಳೂರಿನ ಮಾನವ ಸಂಪನ್ಮೂಲ ವಿಭಾಗದ ಮುಖ್ಯ ವ್ಯವಸ್ಥಾಪಕರಾದ ಶಿವಕುಮಾರ್ ಮಾತನಾಡಿ, ವಿದ್ಯಾಭ್ಯಾಸ ಎಂದರೆ ಬರೀ ಓದಲ್ಲ,ಬದಲಾಗಿ ಕನಸು ಕಾಣಿ, ನೀವೇ ನಿಮ್ಮ ಭವಿಷ್ಯದ ಬರಹಗಾರರು, ಗುರಿ ಮುಟ್ಟಲು ಕನಸು ಕಾಣಿ, ನೀವು ಕೆಲಸಗಾರರಾಗುವ ಬದಲು ಉದ್ದಿಮೆದಾರರಾಗಿ, ನೂರಾರು ಜನರಿಗೆ ಉದ್ಯೋಗ ನೀಡುವಂತವರಾಗಿ, ಸ್ಯಾನ್ಪ್ರಾನ್ಸಿಕೊ ನಗರದ ನಂತರ ಬೆಂಗಳೂರು ಜಗತ್ತಿನ ಎರಡನೆಯ ಉದ್ದಿಮೆದಾರರ ನಗರವಾಗಿ ರೂಪುಗೊಳ್ಳುತ್ತಿದೆ, ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಕರೆ ನೀಡಿದರು.
ಕನ್ನಡ ಚಲನಚಿತ್ರ ರಂಗದ ಪ್ರಖ್ಯಾತ ಚಿತ್ರಸಾಹಿತಿ, ಬರಹಗಾರ ಮತ್ತು ಚಿತ್ರ ನಿರ್ದೇಶಕರಾದ ಕವಿರಾಜ್ ಮಾತನಾಡಿ, ಕಷ್ಟಪಟ್ಟು ಕೆಲಸ ಮಾಡಿ, ನೀವು ಪಡುವ ಕಷ್ಟಕ್ಕೆ ಎಂದಾದರೂ ಬೆಲೆ ಸಿಕ್ಕಿಯೇ ಸಿಕ್ಕುತ್ತದೆ,ಅನಾಯಾಸವಾಗಿ ಏನು ದೊರೆಯುವುದಿಲ್ಲ, ಪ್ರತಿಭೆಯಿದ್ದವರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಅವಕಾಶಗಳು ಇದ್ದೇ ಇರುತ್ತವೆ, ಸಿನಿಮಾ ಕ್ಷೇತ್ರವೂ ಇದಕ್ಕೆ ಹೊರತಲ್ಲ, ನಿಮ್ಮ ತಂದೆ-ತಾಯಿಗಳ ಆಸೆಯನ್ನು ಪೂರೈಸಿ, ಹಾಗೆಂದು ನಿಮ್ಮ ಕನಸು-ಕನವರಿಕೆಗಳನ್ನು ಕೈಬಿಡಬೇಡಿ, ನಿಮ್ಮ ಇಷ್ಟದಂತೆಯೇ ಬದುಕಿ, ನಿಮ್ಮ ಗುರಿ ಮತ್ತು ಕನಸುಗಳನ್ನು ಮರೆಯಬೇಡಿ ಎಂದರು.
ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ಶರತ್ ಲೋಹಿತಾಶ್ವ ಮಾತನಾಡಿ, ವಿದ್ಯಾಭ್ಯಾಸದಿಂದ ಙ್ಞಾನ ಬೆಳೆಯುತ್ತದೆ. ಬದುಕು ಹಸನು ಮಾಡಿಕೊಳ್ಳಲು ಙ್ಞಾನದಿಂದ ಸಾದ್ಯ,ನೀವೆ ನಿಮ್ಮ ಬದುಕಿನ ದಾರಿಯನ್ನು ನಿರ್ಧರಿಸಿ. ಯಾರದೋ ಒತಾಯಕ್ಕೆ ಮಣಿದು, ಇಷ್ಟವಿಲ್ಲದ  ವೃತ್ತಿಯನ್ನು ಆರಿಸಿಕೊಳ್ಳಬೇಡಿ,ಯಾವುದೇ ಕೆಲಸವಾದರೂ ಪ್ರೀತಿಯಿಂದ ಶ್ರದ್ದೆಯಿಟ್ಟು ಮಾಡಿ, ಆಗ ನಿಮಗೆ ಸಂತೋಷದ ಜೊತೆಗೆ ಯಶಸ್ಸು ದೊರೆಯುತ್ತದೆ ಎಂದರು.
ಕೇಂಬ್ರಿಡ್ಜ್ ಸಮೂಹ ವಿದ್ಯಾಸಂಸ್ಥೆಗಳ ಮುಖ್ಯಸ್ಥರಾದ ಶ್ರೀ. ಡಿ.ಕೆ.ಮೋಹನ್ರವರು ಮಾತನಾಡಿ, ವಿದ್ಯಾಥರ್ಿ ಜೀವನ ಎಲ್ಲರ ಜೀವನದಲ್ಲೂ ಒಂದು ಪ್ರಮುಖ ಘಟ್ಟ,ಜಾಗತೀಕರಣದಿಂದಾಗಿ ಪ್ರತಿಯೊಬ್ಬರಿಗೂ ಅವಕಾಶಗಳು ದೊರೆಯುತ್ತಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಉದ್ದಿಮೆದಾರರಾಗಿ, ಸ್ವಾವಲಂಬಿಗಳಾಗಿ ಬೆಳೆಯಿರಿ,ಜೀವನದಲ್ಲಿ ಯಶಸ್ವಿ ನಾಯಕರಾಗಿ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ|| ಸುರೇಶ್, ಕೇಂಬ್ರಿಡ್ಜ್ ಕ್ಯಾಂಪಸ್ನ ಪ್ರಾಂಶುಪಾಲರಾದ ಡಾ|| ಉದಯ್ ಕುಮಾರ್, ಕಾಲೇಜಿನ ಡೀನ್ ಡಾ|| ಡಿ.ಹೆಚ್.ರಾವ್, ಮುಖ್ಯ ಆಡಳಿತಾಧಿಕಾರಿಗಳಾದ ಡಾ|| ಯು.ಪಿ. ಚಂದ್ರಶೇಖರ್, ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾಥರ್ಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here