ರಾಸಾಯನಿಕ ತ್ಯಾಜ್ಯಗಳಿಂದ ಹಾಳಾಗುತ್ತಿರುವ ಕೆರೆಗಳು

0
144

ಬೆಂಗಳೂರು/ಮಹದೇವಪುರ:- ಜಲಮೂಲ ಗಳನ್ನು ಸಂರಕ್ಷಿಸಲು ಇನ್ನಿಲ್ಲದ ಕಸರತ್ತುಗಳನ್ನು ಸರ್ಕಾರಗಳು ನಡೆಸುತ್ತಲೇ ಇವೆ. ಅನುದಾನಗಳನ್ನು ಘೋಷಣೆ ಮಾಡುತ್ತಲೇ ಇದ್ದಾರೆ, ಆದರೇ ಕೆರೆಗಳ ಅಭಿವೃದ್ದಿ ಮಾತ್ರ ಆಗುತ್ತಲೇ ಇಲ್ಲ. ಕೆಲವು ಕೆರೆಗಳು ನೀರಿಲ್ಲದೇ ಬರಿದಾದರೇ, ಕೆಲವು ಕೆರೆಗಳು ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯಗಳು ಸೇರಿ ಮಲಿನಗೊಂಡು ಅವನತಿಯತ್ತ ಸಾಗಿವೆ.
ಕಡು ಕಪ್ಪು ಬಣ್ಣದ ನೀರು, ಅಲ್ಲಲ್ಲಿ ತೇಲುತ್ತಿರುವ ತ್ಯಾಜ್ಯ, ಅಳೆತ್ತರಕ್ಕೆ ಬೆಳೆದು ನಿಂತಿರುವ ಜೊಂಡು ಇವೆಲ್ಲಾ ದೃಷ್ಯಗಳು ಕಾಣಸಿಗುತ್ತಿರುವುದು ಬೆಂಗಳೂರು ಹೊರವಲಯ ಆವಲಹಳ್ಳಿಯ ಕೆರೆಯಲ್ಲಿ. ಸುಮಾರು 600 ಎಕರೆಗೂ ಹೆಚ್ಚು ವಿಸ್ಥಿರ್ಣವುಳ್ಳ ಕೆರೆ ಆವಲಹಳ್ಳಿ ಸುತ್ತಮುತ್ತಲಿನ ವಿರ್ಗೊನಗರ, ಬಿದರೇ ಅಗ್ರಹಾರ, ದೊಡ್ಡಬನಹಳ್ಳಿ, ಹೀರಂಡಹಳ್ಳಿ ಸೇರಿದಂತೆ ನೂರಾರು ಗ್ರಾಮಗಳ ಜನರು ಇದೇ ಕೆರೆಯನ್ನು ಅವಲಂಬಿಸಿದ್ದರು. ವ್ಯವಸಾಯ, ಜಾನುವಾರುಗಳು ಇದೇ ಕೆರೆಯನ್ನು ಹೆಚ್ಚು ನಂಬಿಕೊಂಡಿದ್ದರು. ಕಳೆದ ಏಳೆಂಟು ವರ್ಷಗಳ ಹಿಂದೆ ಈ ಗ್ರಾಮಗಳಲ್ಲಿ ಹಚ್ಚಹಸಿರು ನಳನಳಿಸುತ್ತಿದ್ದು, ವಿಧವಿಧವಾದ ಹಣ್ಣು ತರಕಾರಿ ಸೊಪ್ಪುಗಳು ಎಲ್ಲರ ತೋಟಗಳಲ್ಲಿ ಸೊಂಪಾಗಿ ಬೆಳೆಯುತ್ತಿದ್ದರು. ಭತ್ತ, ರಾಗಿ ಪ್ರಮುಖ ಬೆಳೆಗಳಾಗಿದ್ದ ಇಲ್ಲಿ ಆಹಾರಕ್ಕೆ ಕೊರತೆಯೂ ಇರಲಿಲ್ಲ ಆದರೇ ಪರಿಸ್ಥಿತಿ ಆಗಿನಂತಿಲ್ಲ.
ಊರಲ್ಲೊಂದು ಕೆರೆ ಇದ್ದರೇ ನೂರಾರು ಗ್ರಾಮಗಳು ನೆಮ್ಮದಿಯಿಂದ ಬದುಕಬಹುದು ಅಂತರ್ಜಲ ಮಟ್ಟ ಹೆಚ್ಚಿ ಕುಡಿಯುವ ನೀರಿನ ಮಟ್ಟ ಹೆಚ್ಚುತ್ತದೆ ಜನ ಜಾನುವಾರುಗಳು ನೆಮ್ಮದಿಯಿಂದ ಬದುಕ ಬಹುದು. ಕೆಲವು ಕೆರೆಗಳು ನೀರಿಲ್ಲದೆ ಬರಿದಾದರೇ ಕೆಲವು ಕೆರೆಗಳಿಗೆ ಮಲಿನ ನೀರು ಸೇರಿ ಕಲುಷಿತ ಗೊಳ್ಳುತ್ತಿವೆ. ಆವಲಹಳ್ಳಿ ಕೆರೆಯ ಪಕ್ಕದಲ್ಲಿ ವಿರ್ಗೊನಗರ ಕೈಗಾರಿಕಾ ಪ್ರದೇಶವಿದೆ. ಹತ್ತಾರು ಕಾಖರ್ಾನೆಗಳು ಕಾರ್ಯನಿರ್ವಹಿಸುತ್ತವೆ.
ಅದರಲ್ಲೂ ಸಿಪ್ಲಾ, ರ್ಯಾನ್ಬ್ಯಾಕ್ಸಿ ಔಷಧಿಗಳನ್ನು ತಯಾರಿಸುವ ಕಾರ್ಖಾನೆಗಳಿವೆ. ಇವುಗಳಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ತ್ಯಾಜ್ಯಗಳನ್ನು ನೇರವಾಗಿ ಕೆರೆಗೆ ಬಿಡುತ್ತಿದ್ದಾರೆ. ಎಸ್ಟಿಪಿ ಪ್ಲಾಂಟ್ಗಳನ್ನು ತಯಾರಿಸಿ ಶುದ್ದಿಕರಿಸಿದ ನೀರನ್ನು ಕೆರೆಗಳಿಗೆ ಬಿಡಬೇಕು ಎಂಬ ಕಾನೂನಿದ್ದರೂ ಸಹ ಅದನ್ನು ಗಾಳಿಗೆ ತೂರಲಾಗಿದೆ.
ಇನ್ನಾದರೂ ಸಂಭಂದಪಟ್ಟವರು ಕೆರೆಗಳ ಅಭಿವೃದ್ದಿಗೆ ಮುಂದಾಗದಿದ್ದರೇ ಮುಂದೊಂದು ದಿನ ಹನಿ ನೀರಿಗೂ ತಾತ್ವಾರ ಪಡುವಂತಹ ಸ್ಥಿತಿ ಬರುವುದರಲ್ಲಿ ಯಾವುದೇ ಸಂಶಯವಿಲ್ಲ.

LEAVE A REPLY

Please enter your comment!
Please enter your name here