ರೈತನೊಬ್ಬ ಚಿಕಿತ್ಸೆ ಸಿಗದೇ ಮೃತ

0
215

ಬಳ್ಳಾರಿ/ಹೊಸಪೇಟೆ:ಖಾಸಗಿ ವೈದ್ಯರ ಮುಷ್ಕರ್ ನಾಲ್ಕನೇ ದಿನಕ್ಕೆ ಮುಂದುವರೆದಿದೆ. ಖಾಸಗಿ ವೈದ್ಯರ ಪ್ರತಿಭಟನೆಯಿಂದ ಬಳ್ಳಾರಿಯಲ್ಲಿಂದು ರೈತನೊಬ್ಬ ಚಿಕಿತ್ಸೆ ಸಿಗದೇ ಮೃತಪಟ್ಟರೇ, ರೋಗಿಗಳು

ಚಿಕಿತ್ಸೆಗಾಗಿ ಆಸ್ಪತ್ರೆಗಳ ಪರದಾಡುತ್ತಿರುವ ಪರಿಸ್ಥಿತಿ ಬಳ್ಳಾರಿಯಲ್ಲಿ ನಿರ್ಮಾಣವಾಗಿದೆ, ಇಂದು ಮುಂಜಾನೆ ಹೊಸಪೇಟೆ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ಹೃದಯಾಘಾತಕ್ಕೆ ಒಳಗಾದ

ರೈತನೊಬ್ಬನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದ ಪರಿಣಾಮ ರೈತ ಮೃತಪಟ್ಟರೇ, ಇನ್ನೂ ಡೆಂಗ್ಯೂ ರೋಗಕ್ಕೆ ತುತ್ತಾಗಿರುವ ರೋಗಿಯೊಬ್ಬ ಚಿಕಿತ್ಸೆ ನೀಡುವಂತೆ ಖಾಸಗು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿರುವ ದೃಶ್ಯ ಕಂಡು ಬಂದಿತೂ. ಬಳ್ಳಾರಿಯ ಎಲ್ಲ ಖಾಸಗಿ ಆಸ್ಪತ್ರೆಗಳ ವೈದ್ಯರು ಇಂದಿನಿಂದ ಓಪಿಡಿ ಚಿಕಿತ್ಸೆಯನ್ನು ಸಹ ಬಂದ್ ಮಾಡಿ ಆಸ್ಪತ್ರೆಗೆ ಬೀಗ್ ಜಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ರೋಗಿಗಳು ಪರದಾಡುವಂತ ಪರಿಸ್ಥಿತಿ ಬಳ್ಳಾರಿಯಲ್ಲಿ ನಿರ್ಮಾಣವಾಗಿದೆ.

LEAVE A REPLY

Please enter your comment!
Please enter your name here