ರೈತರನ್ನು ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿ ಪ್ರತಿಭಟನೆ

0
152

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ :- ಅಕ್ಷರಬ್ಯಾಸ ಇಲ್ಲದಿರುವಂತ ರೈತರು ತಲೆಮಾರುಗಳಿಂದ ಉಳುಮೆ ಮಾಡುತ್ತಿರುವಂತೆ ಕೃಷಿ ಆಧಾರಿತ ಅಮರಾವತಿ ಜಮೀನನ್ನು ಕಸಿದುಕೊಂಡು ರೈತರನ್ನು ಒಕ್ಕಲೆಬ್ಬಿಸಿ ಆತ್ಮಹತ್ಯೆಗಳಿಗೆ ಎಡೆ ಮಾಡಿಕೊಡುವಂತ ಕೆಲಸ ತಾಲ್ಲೂಕಿನ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಜಿಲ್ಲಾದ್ಯಕ್ಷ ರವಿನಾರಾಯಣರೆಡ್ಡಿ ಖಂಡಿಸಿದರು.

ತಾಲ್ಲೂಕು ಕಛೇರಿ ಬಳಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ)ಬಣದಿಂದ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಕಟ್ಟಲು ಮಂಜೂರಾಗಿದ್ದ ಸುಂಡ್ರಹಳ್ಳಿ ಗ್ರಾಮವನ್ನು ಬಿಟ್ಟು ಅಮರಾವತಿಗೆ ನಿಗಧಿ ಮಾಡುತ್ತಿರುವುದನ್ನು ಪ್ರತಿಭಟಿಸಿ ಶಿರಸ್ತೇದಾರ್ ನರೇಂದ್ರಬಾಬುಗೆ ಮನವಿ ಪತ್ರ ನೀಡಲಾಯಿತು.

ದೇಶಕ್ಕೆ ಅನ್ನ ನೀಡುತ್ತಿರುವಂತ ರೈತರ ಬೆನ್ನಲುಬು ಮುರಿಯುವಂತಹ ಕೆಸಲದ ಜೊತೆಗೆ ಸುಮಾರು 60 ವರ್ಷಗಳಿಂದ ಉಳುಮೆಮಾಡಿಕೊಂಡು ಬದುಕುತ್ತಿರುವ ಕೃಷಿ ಆಧಾರಿತ ಭೂಮಿಯಾಗಿರುವಂತ ಅಮರಾವತಿಯ ಜಮೀನು ರೈತರಿಂದ ಕಸಿದುಕೊಳ್ಳಲು ಸರ್ಕಾರ ಮುಂದಾದರೆ ರಾಜ್ಯಾದ್ಯಂತ ಉಗ್ರ ಹೋರಾಟದ ಮೂಲಕ ನೊಂದ ರೈತರ ಶಕ್ತಿ ಏನೆಂಬುದನ್ನು ತೋರಿಸಬೇಕಾಗುತ್ತದೆ.

ಮೂರು ಜಿಲ್ಲೆಗಳಿಗೂ
ಸಮೀಪದಲ್ಲಿರುವಂತ ಸುಂಡ್ರಹಳ್ಳಿ ಜಮೀನಿನಲ್ಲೆಲ್ಲ ವಿಶ್ವವಿದ್ಯಾಲಯ ನಿರ್ಮಿಸಲಿ ಯಾವುದೇ ಕಾರಣ ನೀಡದೆ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲ ಆಗುವಂತ ರೀತಿಯಲ್ಲಿ ಅವರ ಆಸೆ ಆಮಿಷಗಳಿಗೆ ಒಳಗಾಗಿ ಈಗಾಗಲೆ ಮಂಜೂರಾಗಿದ್ದ ಸುಂಡ್ರಹಳ್ಳಿ ಗ್ರಾಮದಿಂದ ಏಕಾಏಕಿ ಅಮರಾವತಿಗೆ ಸ್ಥಳಾಂತರ ಮಾಡುತ್ತಿರುವುದು ಖಂಡನೀಯ ಎಂದರು.

ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ಮಾತನಾಡಿ ಸುಮಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬದುಕುತ್ತಿರುವ ಅಮರಾವತಿ ರೈತರನ್ನು ಬೀದಿಪಾಲು ಮಾಡುವಂತ ಕೆಲಸಕ್ಕೆ
ತಾಲ್ಲೂಕು ಆಡಳಿತ ಮುಂದಾಗಿದೆ. ಉಳುಮೆ ಮಾಡುತ್ತಿರುವ ಜಮೀನು ಪಾರಂ ನಂ 53ರ ಅಡಿಯಲ್ಲಿ ಮಂಜೂರು ಮಾಡಿ ಸಾಗುವಳಿ ಚೀಟಿ ನೀಡುವುದನ್ನು ಮರೆತು 30 ,ಕೊಳವೆ ಬಾವಿಗಳು 25 ಚಕ್ಕ್ ಡ್ಯಾಂಗಳು, ಗೊಡಂಬಿ, ಮಾವು, ನೀಲಗಿರಿ ಹಾಗೂ ರೇಷ್ಮೆ ಹಿಪ್ಪುನೇರಳೆ ಸೊಪ್ಪು ಇರುವಂತ ಕೃಷಿ ಭೂಮಿಯನ್ನು ನಂಬಿಕೊಡಿರುವ ರೈತರನ್ನು ನಾಶ ಮಾಡಿ ವಿಶ್ವವಿದ್ಯಾಲಯ ನಿರ್ಮಿಸಲು ಮುಂದಾದರೆ ಮುಂದಾಗುವ ಎಲ್ಲಾ ಅನಾಹುತಗಳಿಗೆ ರಾಜಸ್ವ ನಿರೀಕ್ಷಕರಾದ ಮೋಹನ್ ಹಾಗೂ ತಾಲ್ಲೂಕು ಆಡಳಿತವೆ ನೇರ ಹೊಣೆ ಯಾಗಿರುತ್ತಾರೆಂದು ಖಂಡಿಸಿದರು.

ಪ್ರತಿಭಟನೆಯಲ್ಲಿ :- ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಅರಿಕೆರೆ ಮುನಿರಾಜು ಮಾತನಾಡಿದರು.ಸರ್ಕಾರ ಹಾಗೂ ತಾಲ್ಲೂಕು ಆಡಳಿತ ವಿರುದ್ಧ ದಿಕ್ಕಾರಗಳನ್ನು ಕೊಗಿದರು.

ಜಿಲ್ಲಾ ಸಂಚಾಲಕ ಜೆ.ಎಸ್ ವೆಂಕಟಸ್ವಾಮಿ, ಮಹಿಳಾ ಜಿಲ್ಲಾದ್ಯಕ್ಷೆ
ಅನುಸೂಯಮ್ಮ ಯುವ ಜಿಲ್ಲಾದ್ಯಕ್ಷ ಅರುಣ್ ಕುಮಾರ್, ಪ್ರಧಾನ ಜಿಲ್ಲಾ ಸಂಚಾಲಕ ರಾಮಾಂಜಿನಪ್ಪ, ತಾಲ್ಲೂಕು ಕಾರ್ಯದರ್ಶಿ ಭಕ್ತರಹಳ್ಳಿ ಪ್ರತಿಶ್, ದೊಣ್ಣಹಳ್ಳಿ ರಮೇಶ್,ಮಂಜುನಾಥ್,
ಚಂದ್ರಪ್ಪ, ಮಾರಪ್ಪ ಹಾಗೂ ಹಲವಾರು ಮುಖಂಡರು ರೈತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here