ರೈತರಿಂದ ಪ್ರತಿಭಟನಾ ರ್ಯಾಲಿ

0
332

ವಿಜಯಪುರ/ಸಿಂದಗಿ. ಕಬ್ಬಿನ ಬಾಕಿ ಹಣ ನೀಡಲು ಕಾರ್ಖಾನೆಗಳಿಗೆ ಸೂಚಿಸಬೇಕು, ಬೆಳೆ ಹಾನಿ ಪರಿಹಾರ ನೀಡಬೇಕು, ತೊಗರಿ ಕೇಂದ್ರ ಪ್ರಾರಂಭಿಸ ಬೇಕು ಎಂಬ ಬೇಡಿಕೆಗಳೊಂದಿಗೆ ರೈತರ 6 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ಪದಾ„ಕಾರಿಗಳು ಬುಧವಾರ ಪಟ್ಟಣದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು.ಮಹಿಳಾ ರೈತರು ಸೇರಿದಂತೆ ನೂರಾರು ರೈತರು ತಮ್ಮ ಬೇಡಿಕೆಗಳನ್ನು ಈಡೆರಿಸುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿ ಪಟ್ಟಣದ ಎಪಿಎಂಸಿ ಕಚೇರಿಯಿಂದ ಪ್ರತಿಭಟನಾ ರ್ಯಾಲಿ ಪ್ರಾರಂಭಿಸಿ ಬಸವೇಶ್ವರ ವೃತ್ತದ ಮಾರ್ಗವಾಗಿ ತಹಶೀಲ್ದಾರ ಕಚೇರಿ ತಲುಪಿ ಅಲ್ಲಿ ಪ್ರತಿಭಟನೆ ನಡೆಸಿದರು. ನಂತರ ಪ್ರತಿಭಟನಾಕಾರರು ಶಿರಸ್ತೆದಾರರ ಎಚ್.ಎಂ.ತಾಳಿಕೋಟಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಬಸನಗೌಡ ಧರ್ಮಗೊಂಡ ಮಾತನಾಡಿ, ರಾಜ್ಯದಲ್ಲಿ ಪ್ರತಿಯೊಂದು ಸರಕಾರ ರೈತರ ಸರಕಾರ ಎಂದು ಹೇಳುತ್ತಾರೆ. ಆದರೆ ರೈತರ ಕಷ್ಟಗಳಿಗೆ ಸಂದಿಸುವುದ್ಲಿಲ. ರೈತ ಸಾಲ ಮಾಡಿ ಕಬ್ಬು ಬಿತ್ತನೆ ಮಾಡಿ ಹೆಚ್ಚಿಗೆ ಹಣ ನೀಡಿ ಕಟಾವು ಮಾಡಿ ಸಕ್ಕರೆ ಕಾರ್ಖಾನೆಗಳಿಗೆ ನೀಡಿದ್ದಾರೆ. ಆದರೆ 2016-17ನೇ ಸಾಲಿನ ಬಾಕಿ ಉಳಿದ 300 ರೂ ಸಕ್ಕರೆ ಕಾರ್ಖಾನೆ ಮಾಲಿಕರು ರೈತರ ಖಾತೆಗಳಿಗೆ ಜಮೆ ಮಾಡಿಲ್ಲ. ಶಿಘ್ರದಲ್ಲಿ ಕಬ್ಬಿನ ಬಾಕಿ ಹಣವನ್ನು ರೈತರ ಖಾತೆಗಳಿಗೆ ನೀಡಬೇಕು, 2017-18ನೇ ಸಾಲಿನ ಕಬ್ಬಿನ ದರ ಇನ್ನು ನಿಗದಿ ಪಡೆಸಿಲ್ಲ. ಶಿಘ್ರದಲ್ಲಿ ಕಬ್ಬಿನದರ ನಿಗದಿ ಪಡೆಸಬೇಕು ಎಂದು ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರಕಾರದ ಫಸಲ್ ಭೀಮಾ ಯೋಜನೆಯ ವಿಮೆ ಹಣವನ್ನು ರೈತರ ಖಾತೆಗಳಿಗೆ ಜಮೆ ಮಾಡಬೇಕು, ಅತಿವೃಷ್ಠಿಯಿಂದ ಹಾನಿಗೊಳಗಾದ ಬೆಳೆಯ ಪರಿಹಾರ ಹಣವನ್ನು ರೈತರ ಖಾತೆಗಳಿಗೆ ಜಮೆ ಮಾಡಬೇಕು. ತಾಲೂಕಿನಲ್ಲಿ ಹೆಚ್ಚಿಗೆ ತೊಗರಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ರೈತರಿಗೆ ಅನಕೂಲಕರ ಮಾಡಿಕೊಡಬೇಕು ಎಂದರು ಒತ್ತಾಯಿಸಿದರು.
ತಾಲೂಕಿನ ಕಡ್ಲೆವಾಡ ಪಿ.ಎ. ಗ್ರಾಮ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಪಡೆಸಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸಲದಿದ್ದಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ರೈತ ಮುಖಂಡ, ಕಜಾಪ ಯಂಕಚಿ ವಲಯ ಘಟಕ ಅಧ್ಯಕ್ಷ ಭೀಮಣ್ಣ ಹೆರೂರ ಮಾತನಾಡಿ, ರೈತ ತನ್ನ ಜಮೀನುಗಳ ಕೆಲಸಗಳನ್ನು ಮಾಡಿಕೊಳ್ಳಲು ತಹಶೀಲ್ದಾರ ಕಚೇರಿಗೆ ಅಲೆದಾಡಬೇಕಾಗಿದೆ. ಶಿಘ್ರದಲ್ಲಿ ರೈತರ ಬೇಡಿಕೆಯಂತೆ ರೈತರ ಜಮೀನುಗಳ ಪೆÇೀಡಿ ಕಾರ್ಯಗಳನ್ನು ಶಿಘ್ರದಲ್ಲಿ ಪೂರ್ಣಗೊಳಿಸಬೇಕು ಎಂದರು.ತಾಲೂಕಿನ ವಿವಿಧ ಗ್ರಾಮದಿಂದ ಆಗಮಿಸಿದ ರೈತರಾದ ಬಲಭೀಮ ಪಾರಸನಳ್ಳಿ, ಕಂಠೆಪ್ಪ ಕೊಲ್ಲೂರ, ಸಿದ್ದಪ್ಪ ಬೂದಿಹಾಳ, ರಮೇಶ ಪಾರಸನಳ್ಳಿ, ರಮೇಶ ಚೌದರಿ, ಮಲ್ಲಿಕಾರ್ಜುನ ಪಾರ್ಸನಳ್ಳಿ, ಶರಣಪ್ಪ ಪಾರಸನಳ್ಳಿ, ಮಲ್ಲಮ್ಮ ಹರಿಜನ, ಸಂಗೀತಾ, ತಾಯಮ್ಮ ಹರಿಜನ, ಸುಸಲಾಬಾಯಿ ಹರಿಜನ, ಬಾಂಗಾರೆವ್ವ ಹರಿಜನ ಸೇರಿದಂರತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವರದಿ: ನಮ್ಮೂರು ಟಿವಿ ನಂದೀಶ
ಸಿಂದಗಿ-9880624377

LEAVE A REPLY

Please enter your comment!
Please enter your name here