ರೈತರ ಕುಂದುಕೊರತೆಗಳ ಸಭೆ

0
216

ಚಿಕ್ಕಬಳ್ಳಾಪುರ /ಶಿಡ್ಲಘಟ್ಟ : ತಾಲೂಕಿನ ಬೆಳ್ಳೂ ಗೇಟಿನ ಶ್ರೀ ಗುಟ್ಟಾಂಜಿನೇಯ ಕಲ್ಯಾಣ ಮಂಟಪದಲ್ಲಿ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆನವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ರೈತರ ಕುಂದುಕೊರತೆಗಳ ಪರಿಶೀಲನಾ ಸಭೆ ನಡೆಯಿತು.
ತಾಲೂಕಿನಲ್ಲಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಯಿತು
ಶಾಶ್ವತವಾಗಿ ಜನರಿಗೆ ಕುಡಿಯುವುದಕ್ಕೆ ನೀರು.ಲಂಚ ಮುಕ್ತ ಖಾತೆ ಬದಲಾವಣೆ.ಜಮೀನುಗಳ ಪಿ ನಂಬರ್ ಬದಲಾಣೆ, ಕೃಷಿ ಸಾಲ ವಸೂಲಿಗೆ ಒತ್ತಡ ಹೇರುತ್ತಿರುವ ಬ್ಯಾಂಕಿನ ವ್ಯವಸ್ಥಾಪಕರು, ಟ್ಯಾಂಕರ್‍ನಲ್ಲಿ ನೀರು ಪೂರೈಕೆಯಲ್ಲಿ ನಡೆದ ಅವ್ಯವಹಾರ,ಮುಗಿಯದ ವಿದ್ಯುತ್ ಕಿರಿಕಿರಿ ಸಮಸ್ಯೆ.ಅಮಾನಿ-ಗೌಡನ ಕೆರೆಗಳ ಒತ್ತುವರಿ ಬಗ್ಗೆ ..ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಣಿಕೆ, ಮುಂತಾದ ಸಮಸ್ಯೆಗಳ ಬಗ್ಗೆ ರೈತರು ಜಿಲ್ಲಾಧಿಕಾರಿ ಮುಂದೆ ಪ್ರಸ್ತಾಪಿಸಿದರು.

LEAVE A REPLY

Please enter your comment!
Please enter your name here