ರೈತರ ಬೆಳೆ ವಿಮೆ ಪಾವತಿಗೆ ಆಗ್ರಹ..

0
256

ಬಳ್ಳಾರಿ /ಕೂಡ್ಲಿಗಿ:ಬಳ್ಳಾರಿ ಜಿಲ್ಲೆ ಬಣವಿ ಕಲ್ಲು ಗ್ರಾಮದಿಂದ ಕಾಲ್ನಡಿಗೆ-ಸಂಸದ ಬಿ.ಶ್ರೀರಾಮುಲು ನೇತೃತ್ವದಲ್ಲಿ ಪಾದಯಾತ್ರೆ-

ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದ ಖಾಸಗಿ ವಿಮಾ ಕಂಪನಿ-ಕಂಪನಿ ವಿರುದ್ಧ ಕ್ರಮ‌ಕೈಗೊಳ್ಳಲು ಆಗ್ರಹ-ಪಕ್ಷಭೇದ ಮರೆತು ಕಾಲ್ನಡಿಗೆಯಲ್ಲಿ ಪಾಲ್ಗೊಂಡ ರೈತ ಸಂಕುಲ-ಸಂಸತ್ ನಲ್ಲಿ ಪ್ರಸ್ತಾಪಿಸುವುದಾಗಿ ಬಿ.ಶ್ರೀರಾಮುಲು ಹೇಳಿಕೆ

*ಆ್ಯಂಕರ್* ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬಳ್ಳಾರಿ ಜಿಲ್ಲೆಯ ಬರ ಪರಿಸ್ಥಿತಿ ಬಗ್ಗೆ ತಪ್ಪು ಮಾಹಿತಿ ನೀಡಿ ರೈತರಿಗೆ ಫಸಲ್ ಬಿಮಾ ಯೋಜನೆ ಹಣ ನೀಡದ ಕ್ರಾಫ್ ಯೂನಿವರ್ಸಲ್ ಸೋಂಪೋ ಇನ್ಸುರೆನ್ಸ್ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ
ಇಂದು ಬೃಹತ್ ಕಾಲ್ನಡಿಗೆಯನ್ನು ಕೂಡ್ಲಿಗಿಯ ಬಣವಿಕಲ್ಲು ಗ್ರಾಮದಿಂದ ಜಾಥಾ ಕೈಗೊಳ್ಳಲಾಗಿದೆ.

ಕೂಡ್ಲಿಗಿ ತಾಲೂಕಿನ‌ ಬಣವಿಕಲ್ಲು ಗ್ರಾಮದ ಕೆ.ನಾಗರಾಜು ಅವರ ತೋಟದಿಂದ ರೈತರಿಗೆ ಫಸಲ್ ಬಿಮಾ ಯೋಜನೆಯ ಹಣ ಪಾವತಿಸುವಂತೆ ಒತ್ತಾಯಿಸಿ ಪಾದಯಾತ್ರೆ ಆರಂಭವಾಯಿತು.
ರಾಜ್ಯದಲ್ಲಿ ಕಳೆದ ೩ ವರ್ಷಗಳಿಂದ ಬರ ಆವರಿಸಿದೆ. ಇದಕ್ಕೆ ಬಳ್ಳಾರಿ ಜಿಲ್ಲೆಯೂ ಕೂಡ ಹೊರತಲ್ಲ.‌ ಕೇಂದ್ರ ಬರ ಅಧ್ಯಯನ ತಂಡ ಬರ ಪರಿವೀಕ್ಷಣೆ ಮಾಡಿದೆ. ಜಿಲ್ಲೆಯಲ್ಲಿ ಶೇ.,೯೦ ರಷ್ಟು ಬರ ಬಿದ್ದಿದ್ದರೂ ಕ್ರಾಪ್ ಯೂನಿವರ್ಸಲ್ ಸೋಂಪೋ ಇನ್ಸೂರೆನ್ಸ್ ಕಂಪನಿ ಸ್ವಂತ ಸರ್ವೇ ಕಾರ್ಯ ಮಾಡಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದೆ. ಜಿಲ್ಲೆಯ ರೈತರು ಕೇಂದ್ರದ ಫಸಲ್ ಬಿಮಾ ಯೋಜನೆಯಡಿ ವಿಮಾ ಕಂತಿನ ಹಣ ಪಾವತಿಸಿದ್ದಾರೆ. ಆದ್ರೆ, ಸದರಿ ಯೋಜನೆಯಿಂದ ಬಳ್ಳಾರಿ ಜಿಲ್ಲೆಯ ರೈತರಿಗೆ ಭಾರೀ ಅನ್ಯಾಯ ವಾಗಿದೆ. ಈ ಕುರಿತು ಸಂಸತ್ ನಲ್ಲಿ ಪ್ರಸ್ತಾಪಿಸುವುದಾಗಿ ಸಂಸದ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಬೈಟ್: ಬಿ.ಶ್ರೀರಾಮುಲು, ಸಂಸದರು, ಬಳ್ಳಾರಿ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ಸತತ ಬರಗಾಲ ಆವರಿಸಿ, ರೈತರು ದಿಕ್ಕುಗಾಣದಂತಾಗಿದ್ದಾರೆ. ಆದರೂ ಜಿಲ್ಲೆಯಲ್ಲಿ ಶೇ. ೯೦ ರಷ್ಟು ಬರಗಾಲ ಇದ್ದರೂ ಖಾಸಗಿ ವಿಮಾ ಕಂಪನಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದೆ. ರೈತರು ೯ ಕೋಟಿಗಿಂತಲೂ ಅಧಿಕ ಹಣ ವಿಮೆ ಕಂಪನಿಗೆ ಜಮೆ ಮಾಡಿದ್ದಾರೆ. ಸುಮಾರು 70 ಕೋಟಿಗೂ ಅಧಿಕ ವಿಮೆ ಹಣ ರೈತರಿಗೆ ಪಾವತಿಯಾಗಬೇಕು. ಆದ್ರೆ, ಬಳ್ಳಾರಿ ಜಿಲ್ಲೆಗೆ ಕೇವಲ 1 ಕೋಟಿ 3 ಲಕ್ಷ ಮಾತ್ರ ಹಣ ಬಂದಿದೆ. ಇದರಿಂದ ರೈತರ ಕಷ್ಟ ಪರಿಹಾರ ಸಾಧ್ಯವಿಲ್ಲ. ತಹಶೀಲ್ದಾರರು, ಕೃಷಿ ಅಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ಕಂಪನಿ ಜೊತೆ ಶಾಮೀಲಾಗಿದ್ದು, ಸರ್ಕಾರ ಕಂಪನಿ ವಿರುದ್ಧ ಕ್ರಮ ಕೈಗೆತ್ತಿಕೊಳ್ಳಬೇಕೆಂದು ಈ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಅಂತ ಶಾಸಕರು ಹೇಳಿದ್ದಾರೆ.

ಬೈಟ್:೨) ಬಿ.ನಾಗೇಂದ್ರ, ಶಾಸಕರು, ಕೂಡ್ಲಗಿ ಕ್ಷೇತ್ರ.

ಒಟ್ನಲ್ಲಿ, ಬಣವಿಕಲ್ಲು, ಅಮಲಾಪುರ, ಕ್ಯಾಸನಕೆರೆ, ವಿರೂಪಾಪುರ, ಮೊರಬ ಕ್ರಾಸ್ ಮೂಲಕ ಕೂಡ್ಲಿಗಿಯತ್ತ ಪಾದಯಾತ್ರೆ ಕೈಗೊಂಡು ರಾಜ್ಯ ಸರ್ಕಾರ ರೈತರಿಗೆ ಬೆಳೆ ವಿಮೆ ಹಣ ಕೂಡಲೇ ನೀಡಬೇಕು ಅಂತ ಒತ್ತಾಯಿಸಲಾಯಿತು. ಅದೇರೀತಿ, ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ರೈತರಿಗೆ ವಂಚನೆ ಮಾಡಿದ ಕ್ರಾಪ್ ಯೂನಿವರ್ಸಲ್ ಸೋಂಪೋ ಇನ್ಸೂರೆನ್ಸ್ ಕಂಪನಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಲಾಯಿತು. ಈ ವೇಳೆ ಜಿ.ಪಂ. ಅಧ್ಯಕ್ಷೆ ದೀನಾ ಮಂಜುನಾಥ್, ಜಿ.ಪಂ.ಸದಸ್ಯರಾದ ಹರ್ಷವರ್ಧನ, ಜಿ.ಉಮೇಶ್, ಚಾನುಕೋಟಿ ಶ್ರೀಗಳು ಸೇರಿದಂತೆ ಐದು ಸಾವಿರಕ್ಕೂ ಅಧಿಕ ಜನ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here