ರೈತರ ಸಂಕಷ್ಟಕ್ಕೆ ಸ್ಪಂದಿಸಿದ ರಾಜ್ಯ ಕೃಷಿ ಸಚಿವ…

0
330

ಸರ್ಕಾರವು ಯೋಜನೆ ರೂಪಿಸುವ ಮೂಲಕ ರೈತರಸಂಕಷ್ಟಕ್ಕೆ ಸ್ಪಂದಿಸಿ ರಾಜ್ಯ ಕೃಷಿ ಸಚಿವ ಕೃಷ್ಣ ಭೈರೆಗೌಡ ಹೇಳಿಕೆ.

ಬಳ್ಳಾರಿ /ಹೊಸಪೇಟೆ,ಮರಿಯಮ್ಮನಹಳ್ಳಿ : ಕೃಷಿ ಯನ್ನು ಬಲಪಡಿಸಲು ರಾಜ್ಯ ಸರ್ಕಾರವು ಹಲವಾರು ಮಹತ್ವದ ಯೋಜನೆ ಗಳನ್ನು ರೂಪಿಸುವ ಮೂಲಕ ರೈತರಸಂಕಷ್ಟಕ್ಕೆ ಸ್ಪಂದಿಸಿ ದೆ ಎಂದು ರಾಜ್ಯ ಕೃಷಿ ಸಚಿವ ಕೃಷ್ಣ ಭೈರೆಗೌಡ ಹೇಳಿದರು .ಅವರು ಪಟ್ಟಣದಲ್ಲಿಕೃಷಿಇಲಾಖೆಯ ಕೃಷಿ ಯಂತ್ರ ಗಾರ ಕೇಂದ್ರ ವನ್ನು ಉದ್ಘಾಟಿಸಿ ಮಾತನಾಡಿದರು , ರಾಜ್ಯದ ರೈತರ ಕೃಷಿ ಚಟುವಟಿಕೆಗಳ ವೆಚ್ಚ ತಗ್ಗಿಸಲು ಸರ್ಕಾರ ವು ಖಾಸಗಿ ಯವರನೆರವುನೊಂದಿಗೆ ರಾಜ್ಯದ ಲ್ಲಿ ಈಗಾಗಲೇ 334 ಯಂತ್ರ ಗಾರಗಳನ್ನು ತೆರೆಯಲಾಗಿದೆ , ಮುಂದಿನ ದಿನಗಳಲ್ಲಿ ಇನ್ನು 330 ಯಂತ್ರ ಗಾರಗಳನ್ನು ತೆರೆಯುವಕುರಿತುಚಿಂತನೆ ನಡೆಸಲಾಗಿದೆ ಎಂದರು.ಸಾಮಾನ್ಯ ಕೃಷಿಚಟುವಟಿಕೆಯಿಂದ ತಗಲುವವೆಚ್ಚ ಭರಿಸಲಾಗದ ರೈತರ ಬವಣೆ ತಗ್ಗಿಸಲು ಕಡಿಮೆ ಬಾಡಿಗೆ ಪಡೆದು ಯಂತ್ರ ಗಳನ್ನು ಪಡೆದು ಅದಿಕ ಖರ್ಚನ್ನಿಂದ ಪಾರಗಬಹುದು ,ಇದರಿಂದ ರಾಜ್ಯದ 7 ಲಕ್ಷ ರೈತರು ಈಯೊಜನೆಯ ಲಾಭ ಪಡೆಯುತ್ತುದ್ದಾರೆಂದರು.ಮಳೆಯಾಶ್ರಿತ ರೈತರ ಸಂಕಷ್ಟ ತಪ್ಪಿಸಲು ಕೃಷಿ ಭಾಗ್ಯ ಯೋಜನೆಜಾರಿಗೆತಂದು ಕೃಷಿ ಹೊಂಡಗಳನ್ನು ನಿರ್ಮಿಸಿ ಸ್ವಾವಲಂಬನೆಗೆ ಶಾಶ್ವತ ಯೋಜನೆ ಜಾರಿಗೆತರಲಾಗಿದೆ ಅಲ್ಲದೆ.ರಾಜ್ಯ ಸರ್ಕಾರವು 8850 ಕೋಟೆ ರೂ . ಸಾಲಮನ್ನಾಮಾಡಿದೆ , ಆದರೆ ರಾಜ್ಯದ ವಿರೋಧ ಪಕ್ಷಗಳು ರಾಷ್ಟೀಕೃತ ಬ್ಯಾಂಕ್ ಗಳಲ್ಲಿನ ರೈತರಸಾಲವನ್ನು ಮನ್ನಮಾಡಿಸಲುಮುಂದಾಗಲಿ ಎಂದು ವಿರೋಧ ಪಕ್ಷದ ನಾಯಕರಿಗೆ ಸವಾಲೆಸೆದರು .ಕೇವಲಬದ್ದತೆಯಿಲ್ಲದೆ ರಾಜ್ಯ ಸರ್ಕಾರ ದ ಮೇಲೆ ಗೂಬೆಕೂರಿಸುವ ವಿರೋಧಿ ಗಳು ಜನರನ್ನು ಮಾತಿನಮೋಡಿಯಲ್ಲಿ ಮುಳುಗಿಸಿವೆ ಎಂದು ಹೆಸರೆತ್ತದೆ ಪ್ರದಾನಿಯನ್ನು ಲೇವಡಿ ಮಾಡಿದರು .ಹಬೊಹಳ್ಳಿ ಶಾಸಕ ಭೀಮನಾಯ್ಕ ಸಭೆಯ ಅದ್ಯಕ್ಷ ತೆ ವಹಿಸಿದರು , ಇದಕ್ಕೂ ಮುನ್ನ ಸಚಿವ ರು ಹಾರುವನಹಳ್ಳಿ ಬಳಿ ಸಿರಿದಾನ್ಯ ಬೆಳೆದ ರೈತರು ಮತ್ತು ನಾಗಲಾಪುರಗ್ರಾಮದ ಬಳಿ ಕೃಷಿಭಾಗ್ಯಯೋಜನೆಯ ಫಲಾನುಭವಿಗಳೊಂದಿಗೆ ಪ್ರಾತ್ಯಕ್ಷಿಕೆ ನಡೆಸಿದರು . ಸಂಧರ್ಭದಲ್ಲಿ ಜ.ಪಂ.ಸದಸ್ಯೆ ರೇಖಾಪ್ರಕಾಶ , ತಾ.ಪಂ.ಅದ್ಯಕ್ಷೆ ಜೋಗದನೀಲಮ್ಮ , ಉಪಾಧ್ಯಕ್ಷ ಗಾದಿಲಿಂಗ , ಪ.ಪಂ.ಉಪಾಧ್ಯಕ್ಷ ಬಂಗಾರಿಮಂಜುನಾಥ ,ಎಪಿಎಂಸಿ ನಿರ್ದೇಶಕ ಕುರಿಶಿವಮೂರ್ತಿ , ಪ.ಪಂ.ಸದಸ್ಯ ರಾದ ಮಹೇಶ್ , ವಿಷ್ಣು ನಾಯ್ಕ , ಬುಡೇನಸಾಬ್ ,ವಿಜಯಕುಮಾರ್ , ಸ್ಥಳಿಯಮುಖಂಡರಾದ ವಿಶ್ವ ನಾಥಶೆಟ್ಟಿ , ಸಿನೆಮ ಮಂಜಣ್ಣ , ಇತರರಿದ್ದರು .

LEAVE A REPLY

Please enter your comment!
Please enter your name here