ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರದ ವಿರುದ್ದ ರೈತರ ಪ್ರತಿಭಟನೆ

0
170

ಚಿಕ್ಕಬಳ್ಳಾಪುರ: ಗುಡಿಬಂಡೆ ಇಡೀ ತಾಲ್ಲೂಕು ಬರಗಾಲಕ್ಕೆ ತುತ್ತಾಗಿ ಅನ್ನ ನೀಡುವ ರೈತ ಸಾಯುವ ಪರಿಸ್ಥಿತಿಯಿದ್ದಾನೆ. ಆದರೆ ಈ ಬಗ್ಗೆ ಕಿಂಚಿತ್ತು ಸ್ಪಂಧಿಸದ ಅಧಿಕಾರಿ ಹಾಗೂ ಸರ್ಕಾರದ ನಿರ್ಲ್ಯಕ್ಷ್ಯ ಧೋರಣೆಯನ್ನು ಖಂಡಿಸಿ ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆಯಿತು.

ಈ ಸಂಧರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಬೈರೇಗೌಡ
ತಾಲ್ಲೂಕಿನಾದ್ಯಂತ ಮಳೆಯಿಲ್ಲದೇ, ರೈತರು ಬೆಳೆದ ಬೆಳೆಗಳು ಒಣಗಿ ರೈತ ಸಾಯುವ ಪರಿಸ್ಥಿತಿಯಲ್ಲಿದ್ಧಾನೆ ಜೊತೆಗೆ ದನಕಕರುಗಳಿಗೆ ನೀರು, ಮೇವು ಕೊರತೆ ನೀಗಿಸುವಲ್ಲಿ ಸರ್ಕಾರ ನಿರ್ಲಕ್ಷ ದೋರಣೆ ತೋರುತ್ತಿದೆ. ಕಣ್ಣಾ ಮುಚ್ಚಾಲೆ ಆಡುತ್ತಿರುವ ಅಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ನೀರಿನ ಕೊರತೆ ಇದ್ದರೂ ಕಷ್ಟ ಪಟ್ಟು ಬೆಳೆ ತೆಗೆದರೆ ಸೂಕ್ತ ಬೆಲೆ ಸಿಗುತ್ತಿಲ್ಲ. ಇದರಿಂದ ನೊಂದ ರೈತ ಆತ್ಮಹತ್ಯೆ ಮೊರೆ ಹೋಗುತ್ತಿದ್ದಾನೆ. ಆದರೆ ಸರ್ಕಾರ ಮಾತ್ರ ರೈತರ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದು ಖಂಡನಾರ್ಹ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ನಂತರ ತಾಲ್ಲೂಕು ಅಧ್ಯಕ್ಷ ರಾಮನಾಥರೆಡ್ಡಿ ಮಾತನಾಡಿ ಸರ್ಕಾರ ರೈತರಿಗೆ ನೀಡಿರುವ ಬ್ಯಾಂಕಿನ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಪ್ರತಿ ಎಕರೆಗೆ ೨೫೦೦೦ ಪರಿಹಾರ ಒದಗಿಸಬೇಕು. ಸರ್ಕಾರಿ ಕಛೇರಿಗಳಲ್ಲಿ ರೈತರ ಕೆಲಸಗಳು ಮಾಡಿಕೊಡದೇ ವಿನಾ ಕಾರಣ ಅಲೆದಾಡುಸುತ್ತಿದ್ದಾರೆ. ಹನಿ ನೀರಾವರಿಗೆ ಶೇ.೧೦೦% ಅನುದಾನ ನೀಡಬೇಕು. ಕೃಷಿ ಉತ್ಪನ್ನಗಳ ಬೆಲೆ ಕಡಿಮೆಯಾದಗ ಸರ್ಕಾರ ಮಾರುಕಟ್ಟೆ ಪ್ರವೇಶ ಮಾಡಿ ಸೂಕ್ತ ಬೆಲೆ ಒದಗಿಸಿಕೊಡಬೇಕು. ಹಳ್ಳಿಗಳಲ್ಲಿ ಅಕ್ರಮ ಮಧ್ಯ ಮಾರಾಟವನ್ನು ನಿಲ್ಲಿಸಬೇಕು. ಪಂಚಾಯಿತಿಗೊಂದು ಬೀಜ ಬ್ಯಾಂಕ್ ತೆರೆಯಬೇಕು. ೮ ಗಂಟೆ ಕಾಲ ವಿದ್ಯುತ್ ಪೂರೈಸಬೇಕು ಮೊದಲಾದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಈ ವೇಳೆ ಸಂಘದ ಪದಾಧಿಕಾರಿಗಳಾದ ನಂದೀಶ್, ನವೀನ್‌ರೆಡ್ಡಿ, ರವಿ, ಬಲರಾಮಪ್ಪ, ವೆಂಕಟಶಿವಾರೆಡ್ಡಿ, ಶ್ರೀನಿವಾಸ, ವೆಂಕಟರವಣಪ್ಪ, ವಿನಾಯಕ, ಅಶ್ವತ್ಥಪ್ಪ, ರಾಜಪ್ಪ, ಸೇರಿದಂತೆ ಹಲವರಿದ್ದರು.

LEAVE A REPLY

Please enter your comment!
Please enter your name here