ರೈತರ ಸಾಲಮನ್ನಾಗಾಗಿ ಒತ್ತಾಯಿಸಿ ಆಗ್ರಹ.

0
179

ಮಂಡ್ಯ/ಮಳವಳ್ಳಿ: ರೈತರ ಪೂರ್ಣಪ್ರಮಾಣದ ಸಾಲ ಮನ್ನಾದ ಜೊತೆಗೆ ಕೃಷಿ ಕೂಲಿಕಾರರ ಖಾಸಗಿ ಕ್ಷೇತ್ರದಲ್ಲಿ ಮಾಡಿದ ಸಾಲಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯನಂದ ಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.

ಮಳವಳ್ಳಿ ಪಟ್ಟಣದ ಕೃಷಿಕೂಲಿಕಾರರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಟಿ ಮಾತನಾಡಿದ ಅವರು ರಾಜ್ಯ ಸಕಾ೯ರ ರೈತರಿಗೆ 50 ಸಾವಿರ ರೂ ಸಾಲಮನ್ನಾ ಮಾಡಿರುವುದು ಸ್ವಾಗತರ್ಹ ಆದರೆ ಈ ಬರಗಾಲದಲ್ಲಿ ರೈತರ ಪೂರ್ಣ ಪ್ರಮಾಣದ ಸಾಲ ಮನ್ನಾ ಮಾಡಬೇಕಾಗಿದ್ದು , ಇದಕ್ಕೆ ಕೇಂದ್ರ ಸಕಾ೯ರ ಮುಂದೆ ಬರುತ್ತಿಲ್ಲ . ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿರುವುದು ಸಾಲವೇ ಕಾರಣವಾಗಿದ್ದು ಮೋದಿ ಸಕಾ೯ರ ವಿರುವರೆಗೂ ರೈತರ ಆತ್ಮಹತ್ಯೆ ,ನಿರಂತರ ವಾಗಿ ನಡೆಯುತ್ತಲೇ ಇರುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು. ರೈತರಿಗೂ ಕೃಷಿ ಕೂಲಿಕಾರರಿಗೂ ಸಂಬಂಧವಿದ್ದು ರೈತರ ಬದುಕು ಚೆನ್ನಾಗಿದ್ದರೆ ಕೃಷಿಕೂಲಿಕಾರರಿಗೆ ಕೂಲಿ ಸಿಗುತ್ತದೆ ರೈತರು ಸಂಕಷ್ಟದಲ್ಲಿರುವಾಗ ಕೃಷಿ ಕೂಲಿಕಾರರಿಗೆ ಕೂಲಿ ಇಲ್ಲದೆ ಖಾಸಗಿ ಕ್ಷೇತ್ರದಲ್ಲಿ ಸಾಲ ಮಾಡಿರುತ್ತಾರೆ ಅದನ್ನು ಎರಡು ಸಕಾ೯ರ ಗಳು ಮನಗೊಂಡು ಸಾಲಮನ್ನಾ ಮಾಡಬೇಕು ಇಲ್ಲದಿದ್ದರೆ ಹೋರಾಟ ರೂಪಿಸುವುದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಪುಟ್ಟಮಾದು, ತಾಲ್ಲೂಕು ಅದ್ಯಕ್ಷ ಶಿವಮಲ್ಲು, ಬಸವರಾಜು ಇದ್ದರು. ನಂತರ ಕೂಲಿಕಾರರ ಸಭೆ ನಡೆಸಲಾಯಿತು

LEAVE A REPLY

Please enter your comment!
Please enter your name here