ರೈತರ ಸಾಲ ಮನ್ನಾ ,ಶಾಶ್ವತ ನೀರಾವರಿ ಜಾರಿ!

0
201

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೇವಲ 24 ಗಂಟೆಯೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ, ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಜೆಡಿಎಸ್ ರಾಜ್ಯಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ನಗರದ ನೆಹರು ಕ್ರೀಡಾಂಗಣದಲ್ಲಿ ಮಾಜಿ ಶಾಸಕ  ದಿವಂಗತ ಎಸ್.ಮುನಿಶಾಮಪ್ಪನವರ 5ನೇ ಪುಣ್ಯಸ್ಮರಣೆ ಹಾಗೂ ಪೌರಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ರಾಜ್ಯದಲ್ಲಿ 58 ಕೋಟಿ ರೈತರ ಸಾಲವಿದ್ದು , ಜೆಡಿಎಸ್ ಅಧಿಕಾರಕ್ಕೆ ಬಂದ ಒಂದೇ ದಿನದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ ಮುಂದಿನ ಒಂದು ವರ್ಷದಲ್ಲಿ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದರು. ಅಲ್ಲಿಯವರಗೆ ರೈತರು ಆತಂಕಪಡಬಾರದು.ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದು.

ಜೆಡಿಎಸ್ ಪಕ್ಷದ ನಾಯಕ ನಾನೇ ಅಗಿರುವುದರಿಂದ ಈ ಘೋಷಣೆ ಮಾಡುತ್ತಿದ್ದೇನೆ ಎಂದು ಹೇಳಿದ
ಮಳೆಬೆಳೆಗಳಾಗದೆ ರೈತರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದು ಸಾಲವನ್ನು ಮರುಪಾವತಿಸದೆ ರೈತರು ಅನೇಕ ಕಡೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಸುಮಾರು 65 ಸಾವಿರ ಕೋಟಿ ರೂಗಳ ಬೆಳೆ ನಷ್ಟವಾಗಿದೆ ಎಂದು ಸರಕಾರ ಧೃಡಪಡಿಸಿದೆ ಆದರೇ ರೈತರ ಸಾಲ ಮನ್ನಾ ಮಾಡುವ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಾಟಕ ಮಾಡುವ ಮೂಲಕ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದ ಅವರು ಸಿಎಂ ಸಿದ್ದರಾಮಯ್ಯ ಕೇಂದ್ರ ಸರಕಾರ ವಾಣಿಜ್ಯ ಬ್ಯಾಂಕ್‍ಗಳಿಂದ ಪಡೆದಿರುವ ಸಾಲವನ್ನು ಮನ್ನಾ ಮಾಡಿದರೆ ತಾವು ಸಹಕಾರಿ ಬ್ಯಾಂಕ್‍ಗಳಿಂದ ಪಡೆದಿರು ಸಾಲವನ್ನು ಮನ್ನಾ ಮಾಡುತ್ತೇನೆ ಎಂದು ಹೇಳುವ ಮೂಲಕ ರೈತರ ಹಿತವನ್ನು ಕಡೆಗಣಿಸಿದ್ದಾರೆ ಎಂದು ಕಿಡಿಕಾರಿದರು.

ನಮ್ಮನ್ನು ನಂಬಿರುವ ಜನರಿಗೆ ಯಾವುದೇ ಸುಳ್ಳು ಭರವಸೆಗಳನ್ನು ನೀಡದೆ, ಪ್ರಾಮಾಣೆಕವಾಗಿ ಪಕ್ಷವನ್ನು ಬಲಗೊಳಿಸಿ ಉತ್ತಮ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟರೆ ಸದಾ ನಿಮ್ಮ ಋಣಿಯಾಗಿರುವೆ .
ಈ ಕ್ಷೇತ್ರದಲ್ಲಿ ಮೂಲ ರೇಷ್ಮೆ ಹಾಗೂ ಹಾಲು ಹೆಚ್ಚಾಗಿರುವ ಭಾಗದ ರೈತರಿಗೆ ನೀರು ಅತ್ಯಮೂಲ್ಯವಾಗಿದ್ದು ಈಗಿನ ಸರಕಾರ ರೈತರ ಬಗ್ಗೆ ಕಾಳಜಿ ಇಲ್ಲ ರೈತರ ಕಷ್ಟ ಸುಖವನ್ನು ಅರಿಯದೆ ಬರಗಾಲ ಬಂದಿದ್ದರೂ ಸಹ ಬ್ಯಾಂಕ್ ಸಾಲ ಮನ್ನಾ ಮಾಡಲು ಮುಂದೆ ಬರುತ್ತಿಲ್ಲ… ಆದರೆ ಯಾವುದೇ ಬರಪರಿಹಾರ ಕೇಳಿದರು ಸಹ ಕೇಂದ್ರದ ಕಡೆ ಕೈ ತೋರಿಸುವ ಕಾಂಗ್ರೆಸ್ ಪಕ್ಷದವರು ಕೇಂದ್ರದಲ್ಲಿ ಕಾಗ್ರೇಸ್ ಸರಕಾರದ ಆಡಳಿತ ಇದ್ದಾಗ ಇವರು ಮಾಡಿದ್ದಾದರು ಏನು ಎಂದರು. ಈ ಭಾಗದ ರೈತರಿಗೆ ಶಾಶ್ವತವಾಗಿ  ನೀರು ಕೊಡುವುದು ನನ್ನ ಮೊದಲ ಕೆಲಸ
ರಾಜ್ಯದಲ್ಲಿ ಭೀಕರವಾಗಿ ಬರಗಾಲ ಇದ್ದು, ಕುಡಿಯುವದಕ್ಕೆ ನೀರಿಲ್ಲ ದನಕರುಗಳಿಗೆ ಮೇವಿಲ್ಲ, ಇನ್ನೂ ಅಧಿಕಾರಿಗಳು ಬರಪರಿಹಾರ ಕಾಮಗಾರಿಗಳನ್ನು ನಡೆಸುವ ನೆಪದಲ್ಲಿ ಭಾರಿ ಅವ್ಯವಹಾರ ನಡೆಸುತ್ತಿದ್ದಾರೆ ಅಧಿಕಾರಿಗಳ ಮೇಲೆ ಮಂತ್ರಿಗಳ ಹಿಡಿತ ಇಲ್ಲದಂತಾಗಿದೆ ಭ್ರಷ್ಟಚಾರಕ್ಕೆ ಪರೋಕ್ಷವಾಗಿ ಸಹಕಾರ ಮತ್ತು ಪೋಷಣೆ ಮಾಡುತ್ತಿರುವುದಕ್ಕೆ ಈ ಸ್ಥಿತಿ ಬಂದೂದಗಿದೆ . ಸತತ ಬರಗಾಲದಿಂದ ತತ್ತರಿಸುತ್ತಿರುವ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸಲು ಸರಕಾರಗಳಿಗೆ ಇಚ್ಚಾಶಕ್ತಿ ಕೊರತೆ ಎದ್ದು ಕಾಣುತ್ತಿದೆ ಈ ಭಾಗಗಳಿಗೆ ಎತ್ತಿನಹೊಳೆ ಯೋಜನೆಯಡಿ ಶಾಶ್ವತ ನೀರಾವರಿ ಯೋಜನೆ ಇನ್ನೂ 15 ವರ್ಷ ಕಳೆದರು ಸಹ ನೀರು ಬರುವುದಿಲ್ಲ ಸರಕಾರ ಮತ್ತು ಸಂಸದರು ಈ ಭಾಗದ ಜನಗಳ ದಿಕ್ಕುತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ . ಜನರ ಆಶೋತ್ತರಗಳಿಗೆ ಸ್ಪಂದಿಸಿ ಜನಪರ ಆಡಳಿತ ನೀಡುವ ಬದಲಿಗೆ ಆರೂವರೆ ಕನ್ನಡಿಗರು ಪಾವತಿಸುವ ತೆರೆಗೆ ಹಣವನ್ನು ಲೂಟಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪರೋಕ್ಷವಾಗಿ ಕುಮಕ್ಕು ನೀಡುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು ಹೇಳಿದರು.

ತಾಲ್ಲೂಕಿನ ಮೂರು ಹೋಬಳಿಗಳಿಗಳ ಆರೋಗ್ಯ ಕೇಂದ್ರಗಳಿಗೆ ಅಂಬುಲೆನ್ಸ್ ಮೂರು ಮಿನಿ ವಾಹನಗಳನ್ನು ರಾಜ್ಯಾದ್ಯಕ್ಷರು ಇದೆ ಸಂದಭ್್ದಲ್ಲಿ ಉದ್ಘಾಟಿಸಿದರು

ಶಾಸಕ ಎಂ. ರಾಜಣ್ಣ ಮಾತನಾಡಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವು ಪ್ರಬಲವಾಗಿದ್ದು, ನಮ್ಮ ತಾಲ್ಲೂಕಿನಲ್ಲಿ ಸಹ ಬಲಿಷ್ಟವಾಗಿದೆ ಮುಂಬಾರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಚುಕ್ಕಾಣಿ ಹಿಡಿಯುವುದು ಸತ್ಯ, ಪಕ್ಷವನ್ನು ಬೆಳೆಸಲು ಮುಂದಾಗಬೇಕೆಂದರು.

ಈ ಸಂದರ್ಭದಲ್ಲಿ ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ,ಮಾಲೂರಿನ ಶಾಸಕ ಮಂಜುನಾಥ್‍ಗೌಡ, ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್‍ಬಾಬು,ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ.ನಾಗರಾಜ್,ಮಾಜಿ ಶಾಸಕ ಬಚ್ಚೆಗೌಡ, ನಗರಸಭಾಧ್ಯಕ್ಷ ಅಫ್ಸರ್‍ಪಾಷ, ರಾಜ್ಯ ಜೆ.ಡಿ.ಎಸ್ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ರಹಮತ್ತುಲ್ಲಾ,ಜಿಲ್ಲಾಧ್ಯಕ್ಷ ಕನಕಪ್ರಸಾದ್,ಮುಖಂಡರಾದ ಮೇಲೂರು ರವಿಕುಮಾರ್, ತಾಪಂ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ನರಸಿಂಹಯ್ಯ,ಜಿಪಂ ಸದಸ್ಯ ಬಂಕ್ ಮುನಿಯಪ್ಪ, ತಾಲೂಕು ಜೆ.ಡಿ.ಎಸ್ ಅಧ್ಯಕ್ಷ ಡಾ.ಧನುಂಜಯರೆಡ್ಡಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಆಯಿಷಾ ಸುಲ್ತಾನಾ, ನಗರಸಭೆ ಮಾಜಿ ಸದಸ್ಯ ಆದಿಲ್, ಸೈಯದ್ ಬಾಬಾ,ಮತ್ತಿತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here