ರೈಲ್ವೆಯಲ್ಲಿ ಪ್ರಯಾಣಿಸುವಾಗ ಎಗರಿಸ್ತಾರೆ ಮಾಂಗಲ್ಯ ಸರ…!?

0
206

ಬಳ್ಳಾರಿ/ಬಳ್ಳಾರಿ:ಮಹಿಳೆಯರೇ ಎಚ್ಚರ ಎಚ್ಚರ, ನೀವೂ ಅಪ್ಪಿ ತಪ್ಪಿ ರೈಲ್ವೆಯಲ್ಲಿ ಪ್ರಯಾಣಿಸುತ್ತಿದ್ದರೆ ನಿಮ್ಮ ಮಾಂಗಲ್ಯ ಸರ್ ಎಗರಿಸ್ತಾರೆ ನೋಡಿ. ಹೌದು. ಕಳೆದ ರಾತ್ರಿ ಬೆಂಗಳೂರಿನಿಂದ ಹಂಪಿ ಎಕ್ಸಪ್ರೇಸ್ ಟ್ರೈನ್ ನಲ್ಲಿ ಬಳ್ಳಾರಿ ಆಗಮಿಸುತ್ತಿದ್ದ ಗೃಹಿಣಿಯ ೬೦ ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ, ಬಳ್ಳಾರಿಯ ರೇಡಿಯೋ ಪಾರ್ಕ ನಿವಾಸಿ ಪ್ರಮೀಳಾ ಕಳೆದ ರಾತ್ರಿ ತಾಯಿಯೊಂದಿಗೆ ರೈಲ್ವೆಯಲ್ಲಿ ಬಳ್ಳಾರಿಗೆ ಆಗಮಿಸುತ್ತಿದ್ದರು, ಗೃಹಿಣಿ ಪ್ರಮೀಳಾರವರು ಎಸ್ 6 ರಿಜರವೇಷನ್ ಬೋಗಿಯಲ್ಲಿ ಮಗುವಿಗೆ ಹಾಲುಣಿಸುವ ವೇಳೆಯಲ್ಲಿ ಕಳ್ಳರು ಮಾಂಗಲ್ಯ ಸರ ದೋಚಿದ್ದಾರೆ. ಮಂಗಲ್ಯ ಸರ ದೋಚಿದ ಕೂಡಲೇ ಗೃಹಿಣಿ ರೈಲ್ವೆಯಲ್ಲಿದ್ದ ಆರ್ ಪಿಎಫ್ ಪೊಲೀಸರಿಗೆ, ಟಿಸಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ, ನೀವೂ ಕರ್ನಾಟಕದವರು, ಗೌರಿಬಿದನೂರು ಬಳಿ ನಿಮ್ಮ ಮಾಂಗಲ್ಯ ಕಳ್ಳತನವಾಗಿದೆ. ನೀವೂ ಕರ್ನಾಟಕದಲ್ಲೆ ದೂರು ನೀಡಿ ಅಂತಾ ಆರ್ ಪಿಎಪ್ ಪೊಲೀಸರು ನಿರ್ಲಕ್ಷ ತನದಿಂದ ಉತ್ತರ ನೀಡಿದ್ದಾರೆ, ಹೀಗಾಗಿ ರಾತ್ರಯೀಡಿ ಪ್ರಮೀಳಾರವರು ದೂರು ನೀಡಲು ಪರದಾಡಿದ್ದಾರೆ. ಅಲ್ಲದೇ ಪ್ರಮೀಳಾರವರ ಸಂಭದಿಕರೊಬ್ಬರು ಆರ್ ಪಿಎಫ್ ಸುರಕ್ಷಾ ವಾಣಿಗೆ ಕರೆ ಮಾಡಿ ಮಾಹಿತಿ ನೀಡಿದಾಗ ಅಸಭ್ಯವಾಗಿ ಮಾತನಾಡಿದ್ದಾರೆ,ಹೀಗಾಗಿ ಪ್ರಮೀಳಾರವರ ಸಂಭದಿಕರು ರೈಲ್ವೆ ಸಚಿವರಿಗೆ ಟ್ಟೀಟ್ ಮಾಡಿ ಪ್ರಕರಣದ ಬಗ್ಗೆ ವಿವರಿಸಿದ್ದಾರೆ, ಹೀಗಾಗಿ ರೈಲ್ವೆಯಲ್ಲಿ ಮಹಿಳೆಯರು ಪ್ರಯಾಣಿವಾಗ ರಕ್ಷಣೆ ಇಲ್ಲದಂತಾಗಿದೆ ಎಂದು ಮಂಗಲ್ಯ ಸರ ಕಳೆದುಕೊಂಡು ಗೃಹಿಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ,

 

ಬೈಟ್. ೧) ಪ್ರಮೀಳಾ ( ಮಾಂಗಲ್ಯ ಸರ ಕಳೆದುಕೊಂಡ ಗೃಹಿಣಿ )
೨) ಮಂಜುನಾಥ ( ಸಂಭದಿಕರು )

LEAVE A REPLY

Please enter your comment!
Please enter your name here