ರೈಲ್ವೆ ಅಧಿಕಾರಿಗಳ ನಿರ್ಲಕ್ಷದ ವಿರುದ್ದ ಆಕ್ರೋಶ

0
344

ಬೆಂಗಳೂರು/ಕೃಷ್ಣರಾಜಪುರ: ನಿಗದಿತ ಸಮಯಕ್ಕೆ ಸರಿಯಾಗಿ ಆಗಮಿಸದ ಹೊಸೂರು – ಯಶವಂತಪುರ ರೈಲನ್ನು ಸುಮಾರು 2 ಗಂಟೆಗಳ ಕಾಲ ತಡೆದ ಪ್ರಯಾಣಿಕರು ರೈಲ್ವೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿದಿನ ಹೊಸೂರು -ಯಶವಂತಪುರ ಮಾರ್ಗದಲ್ಲಿ ಸಂಚರಿಸುವ ರೈಲು ನಿಗದಿತ ಸಮಯಕ್ಕಿಂದ ಕನಿಷ್ಟ 1 ಗಂಟೆ ತಡವಾಗಿ ಆಗಮಿಸುತ್ತಿವೆ. ಇದರಿಂದ ಕೆಲಸಕ್ಕೆ ತೆರಳಲು ತೀವ್ರ ತೊಂದರೆ ಉಂಟಾಗುತ್ತಿದ್ದು ಆಕ್ರೋಶಗೊಂಡ ಪ್ರಯಾಣಿಕರು ರಾಮಮೂರ್ತಿ ನಗರ ಸಮೀಪದ ಕಸ್ತೂರಿನಗರದಲ್ಲಿ ರೈಲನ್ನು ತಡೆದು ಪ್ರತಿಭಟಣೆ ನಡೆಸಿದರು. ಇನ್ನು ವಿನಾಕರಣ ಬಾನಸವಾಡಿ ರೈಲ್ವೇ ನಿಲ್ದಾಣದಲ್ಲಿ ಸಿಬ್ಬಂದಿ ಕಾಲಹರಣ ಮಾಡುತ್ತಾರೆ ಪ್ರಶ್ನಿಸಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆಂದು ಬೇಸರ ವ್ಯಕ್ತಪಡಿಸಿದರು. ಕೆಲ ದಿನಗಳ ಹಿಂದೆ ಸಜರ್ಾಪುರ ರಸ್ತೆಯ ಕಾಮರ್ೆಲಾರಾಮ್ ರೈಲ್ವೆ ನಿಲ್ದಾಣದಲ್ಲಿ ಇದೇ ವಿಚಾರಕ್ಕೆ ಸಂಬಂದ ಪಟ್ಟಂತೆ ಪ್ರಯಾಣಿಕರು ಪ್ರತಿಭಟಣೆ ನಡೆಸಿದರು. ಇದರಿಂದ ಎಚ್ಚೆತ್ತುಕೊಳ್ಳದ ರೈಲ್ವೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ರೈಲು ತಡವಾಗಿ ಬರುತ್ತಿರುವುದು ಪ್ರಯಾಣಿಕರನ್ನು ಇನ್ನಷ್ಟು ಕೆರಳಿಸಿದ್ದು ಸುಮಾರು 2 ಗಂಟೆಗಳ ಕಾಲ ರೈಲನ್ನು ತಡೆದರಿಂದ ಕೆಲ ರೈಲುಗಳ ಸಮಯದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಪ್ರತಿಭಟನಾ ಸ್ಥಳಕ್ಕೆ ಬೇಟಿನೀಡಿದ ಹಿರಿಯ ರೈಲ್ವೆ ಅಧಿಕಾರಿ ರಾಮಕೃಷ್ಣ ಪ್ರತಿಭಟಣಾಕಾರ ಮನವಲ್ಲಿಸುವಲ್ಲಿ ಯಶಸ್ವಿಯಾದರು. ಹೊಸೂರು-ಯಶವಂತಪುರ ಮಾರ್ಗಕ್ಕೆ ಒಂದೇ ರೈಲು ಸಂಚರಿಸುವುದರಿಂದ ಸಮಯದಲ್ಲಿ ವ್ಯತ್ಯಯವಾಗುತ್ತಿದೆ. ಈ ಸಮಸ್ಯೆಗಳ ಬಗ್ಗೆ ಮೇಲಾಧಿಕಾರಿಗಳು ಮತ್ತು ಪ್ರಯಾಣಿಕರೊಂದಿಗೆ ಚಚರ್ಿಸಿ ಪರಿಹರಿಸುವುದಾಗಿ ಭರವಸೆ ನೀಡಿದರು. ಸದ್ಯ ಅದೇನೆ ಇರಲಿ ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯ ಮತ್ತು ಟ್ರಾಫಿಕ್ ಸಮಸ್ಯೆ ತಡೆಯಲು ಸಾವಿರಾರು ಉದ್ಯೋಗಿಗಳು ರೈಲುಗಳನ್ನೆ ಅವಲಂಬಿಸಿದ್ದಾರೆ, ಆದೂ ಸಹಾ ಸಮಯಕ್ಕೆ ಸರಿಯಾಗಿ ತಲುಪಬೇಕಾದ ಸಮಯಕ್ಕೆ ತಲುಪದಿರುವುದು ಪ್ರಯಾಣಿಕರಲ್ಲಿ ಬೇಸರ ಮೂಡಿಸಿದೆ ಪ್ರಣಿಕರಾದ ನಂದನ್ ಅಭಿಪ್ರಾಯ ಪಟ್ಟಿದ್ದಾರೆ.

LEAVE A REPLY

Please enter your comment!
Please enter your name here