ಬೆಂಗಳೂರು/ಕೆ.ಆರ್.ಪುರ: ಕೃಷ್ಣರಾಜಪುರ ರೈಲ್ವೆ ನಿಲ್ದಾಣದಲ್ಲಿ ಭದ್ರತೆಯ ಕೊರತೆ ತಲೆದೋರಿದ್ದು ಆತಂಕದಲ್ಲಿ ಪ್ರಯಾಣ ಬೆಳೆಸುವಂತಾಗಿದೆ. ಇಲ್ಲಿನ ಕೆಆರ್ಪುರದ ಐಟಿಐ ಬಳಿಯಿರುವ ಕೃಷ್ಣರಾಜಪುರ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಭದ್ರತೆ ಒದಗಿಸುವಲ್ಲಿ ನಿರ್ಲಕ್ಷ್ಯದಿಂದ್ದಿದ್ದಾರೆಂಬುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ದಿನನಿತ್ಯ ನೂರಾರು ಗೂಡ್ಸ್ ಮತ್ತು ಪ್ಯಾಸೆಂಜರ್ ರೈಲುಗಳು ಸಂಚರಿಸುವ ಈ ಮಾರ್ಗದಲ್ಲಿ ರೈಲುಗಳ ಸಂಚಾರ ನಿರಂತರವಾಗಿರುತ್ತದೆ, ಪ್ರಯಾಣಿಕರೂ ಆಂಧ್ರ, ತಮಿಳುನಾಡು, ಬಿಹಾರ, ಒಡಿಸ್ಸಾ, ಛತ್ತೀಸ್ಗಡ್, ರಾಜಸ್ಥಾನ ಸೇರಿದಂತೆ ಇನ್ನಿತರೇ ರಾಜ್ಯಗಳಿಂದ ಲಕ್ಷಾಂತರ ಪ್ರಯಾಣಿಕರು ಸಂಚಾರ ನಡೆಸುತ್ತಾರೆ, ರಾಜ್ಯದಿಂದಲೂ ಸಹ ಇತರ ಭಾಗಗಳಿಗೆ ಈ ಮಾರ್ಗದಿಂದಲೇ ಜನ ಸಂಚಾರ ನಡೆಸುತ್ತಾರೆ. ರೈಲ್ವೆ ನಿಲ್ದಾಣಗಳಲ್ಲಿ ಹೆಚ್ಚಿನ ಜನಸಂದಣಿ ಸೇರುವುದು ಸರ್ವೆ ಸಾಮಾನ್ಯವಾಗಿದ್ದು, ಅವಘಡಗಳು, ಮತ್ತು ಕಿಡಿಗೇಡಿಗಳ ದುಷ್ಕೃತ್ಯ ನಡೆಯವುದು ಸಹಜವಾದದ್ದು, ಸ್ಟೋಟಕ ವಸ್ತುಗಳು, ಬಂದೂಕುಗಳ ಪ್ರಯೋಗ ಸೇರಿದಂತೆ ಮಾರಕ ಮತ್ತು ಮಾದಕ ವಸ್ತುಗಳ ಸರಬರಾಜಾಗುವುದನ್ನೂ ಸಹ ತಳ್ಳಿ ಹಾಕುವಂತಿಲ್ಲ, ಇಂತಹ ಸಂಚಾರ ವ್ಯವಸ್ಥೆಗೆ ಸೂಕ್ತ ಭದ್ರತೆ ಒದಗಿಸುವುದು ಸರ್ಕಾರದ ಆಧ್ಯ ಕರ್ತವ್ಯವಾಗಬೇಕು, ಆದರೆ ಕೃಷ್ಣರಾಜಪುರ ರೈಲ್ವೆ ನಿಲ್ದಾಣದಲ್ಲಿ ಭದ್ರತೆ ಒದಗಿಸುವಲ್ಲಿ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂಬುದು ಪ್ರಯಾಣಿಕರ ಅಳಲು.
ಅಲ್ಲದೆ ರೈಲ್ವೆ ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕರು ಕೆಲವೊಮ್ಮೆ ತಾವು ತೆರಳ ಬೇಕಾದ ರೈಲುಗಳಿಗೆ ಕಾಯುವ ಪ್ರಮೇಯವೂ ಇದೆ ಈ ವೇಳೆ ಕೆಲ ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ರಾತ್ರಿ ಕಳೆಯಲು ನಿದ್ರೆಗೆ ಜಾರುತ್ತಾರೆ. ಕಿಡಿಗೇಡಿಗಳಿಗೆ ಇಂತಹ ಸಮಯ ದುಷ್ಕೃತ್ಯವೆಸಗಲು ಸೂಕ್ತವಾದದ್ದು, ರೈಲ್ವೆ ಪೊಲೀಸರು ನಿಲ್ದಾಣದಲ್ಲಿ ಭದ್ರತೆ ದೃಷ್ಟಿಯಿಂದ ರಾತ್ರಿ ಪಾಳಿಯನ್ನೂ ಸಹ ಮಾಡುವುದಿಲ್ಲವೆಂಬ ಆರೋಪುಗಳು ಇವೆ.
ಪಿಕ್ಪ್ಯಾಕೆಟ್, ದರೋಡೆ, ಅಲ್ಲದೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಸೇರಿದಂತೆ ಕೊಲೆ ಸುಲಿಗೆಯಂತಹ ಕೃತ್ಯಗಳಿಗೆ ಇದು ಪೂರಕವಾದದ್ದು, ಪ್ರಯಾಣಿಕರು ಅವಘಡಗಳು ಸಂಭವಿಸುವುದನ್ನು ಗಮನಿಸಿ ಸದಾ ಆತಂಕದಲ್ಲಿರುತ್ತಾರೆ. ಈ ರೀತಿಯ ಅವಘಡಗಳು ಸಂಭವಿಸದಿರಲು ಭದ್ರತೆ ಅತ್ಯವಶ್ಯವಾದ ಸಂಗತಿಯಾಗಿದ್ದು, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಸೂಕ್ತ ಭದ್ರತೆ ಒದಗಿಸಿ ಪ್ರಯಾಣಿಕರನ್ನು ಭೀತಿ ಮುಕ್ತರನ್ನಾಗಿಸಿ ಸುರಕ್ಷಿತ ಪ್ರಯಾಣಕ್ಕೆ ಅನುವು ಮಾಡಿ ಕೊಡಬೇಕಿದೆ ಎಂದು ಪ್ರಯಾಣಿಕ ಮಂಜುನಾಥ್ ಕೋರಿದರು.
ಮುರಳಿ, ಕೆ.ಆರ್.ಪುರ ನಮ್ಮೂರು ಟೀವಿ.