ರೌಡಿಗಳ ಮೇಲೆ ಪೋಲಿಸರ ಗುಂಡಿನ ದಾಳಿ…?

0
64

ಬೆಂಗಳೂರು/ಮಹದೇವಪುರ: ಕೊಲೆ ಪ್ರಕರಣ ದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸುವ ವೇಳೆ ಪೋಲಿಸರ ಮೇಲೆ ಕಲ್ಲು ತೂರಾಟ ನಡೆಸಿದ ರೌಡಿಗಳ ಮೇಲೆ ಪೋಲಿಸರು ಗುಂಡು ಹಾರಿಸಿರುವ(ಪೈರಿಂಗ್) ಮಾಡಿರುವ ಘಟನೆ ಬೆಂಗಳೂರಿನ ಕಾಡುಗೋಡಿ ಪೋಲಿಸ್ ಠಾಣ್ ವ್ಯಾಪ್ತಿಯ ಖಾಜಿ ಸೊಣ್ಣೇನಹಳ್ಳಿ‌ ಗೇಟ್ ನಲ್ಲಿ ನಡೆದಿದೆ. ವೈಟ್ಫಿಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಗುಂಡೇಟು ತಿಂದ ಆರೋಪಿ ಗಳು ಅಪ್ಪು@ ನವೀನ್,ಗಿರಿ@ ಗಿರೀಶ್ ಎಂದು ತಿಳಿದುಬಂದಿದೆ. ಈ ಆರೋಪಿಗಳು ರಾತ್ರಿವೇಳೆ ಯಲ್ಲಿ ಒಂಟಿಯಾಗಿ ಬರುವಂತಹ ವಾಹನ ಸವಾರರನ್ನು ಬೆದರಿಸಿ ದರೋಡೆ ಮಾಡುತ್ತಿದ್ದರು. ಟೆಕ್ಕಿ ಚೇತನ್ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಯಾಗಿದ್ದ ಅಪ್ಪು ಹಾಗೂ ಗಿರಿ ಎ2 ಆರೋಪಿ ಗಳಾಗಿದ್ದಾರೆ. ನಿನ್ನೆ ತಡರಾತ್ರಿ ಖಚಿತ ಮಾಹಿತಿ ಮೇರೆಗೆ ಕೆ.ಆರ್.ಪುರ ಇನ್ಸ್‌ಪೆಕ್ಟರ್ ಜಯರಾಜ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲು ಹೋದ ಸಂಧರ್ಭದಲ್ಲಿ ಖಾಜಿ ಸೊಣ್ಣೇನಹಳ್ಳಿ ಗೇಟ್ ನಲ್ಲಿ ಬಂದಿಸಲು ಮುಂದಾದಾಗ ಪೋಲಿಸರ ಮೇಲೆ ಕಲ್ಲು ತೂರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.‌ ಆಗ ಇಬ್ಬರು ಆರೋಪಿಗಳ ಬಲಗಾಲಿಗೆ ಇನ್ಸ್‌ಪೆಕ್ಟರ್ ಜಯರಾಜ್ ಗುಂಡು ಹಾರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಗುಂಡೇಟು ತಿಂದು ಗಾಯಗೊಂಡ ಆರೋಪಿ ಗಳನ್ನು ಕಾಡುಗೋಡಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದ್ದು,ಈ ಘಟನೆಯಲ್ಲಿ ಮುನಿ ರಾಜು ಎಂಬ ಪೊಲೀಸ್ ಪೇದೆಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೈಟ್ : ಅಬ್ದುಲ್ ಅಹದ್, ಡಿಸಿಪಿ.

LEAVE A REPLY

Please enter your comment!
Please enter your name here