ಲಾಕ್ ಮುರಿದು ಕಳ್ಳತನ…

0
124

ಬೆಂಗಳೂರು/ಮಹದೇವಪುರ:- ಮನಿ ಟ್ರಾನ್ಸ್ಪರ್ ಮಾಡುವ ಅಂಗಡಿಯ ಬಾಗಿಲು ಲಾಕ್ ಮುರಿದು ಕಳ್ಳತನ ಮಾಡಿರುವ ಘಟನೆ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಳೆದ ರಾತ್ರಿ ಗುಂಜೂರು ವರ್ತೂರು ಮುಖ್ಯ ರಸ್ತೆಯ ಬಸ್ಸು ನಿಲ್ದಾಣ ಬಳಿಯ ಇರುವ ಮಹಾದೇವ ಮೊಬೈಲ್ ಮನಿ ಟ್ರಾನ್ಸ್ಪರ್ ಅಂಗಡಿಯಾ ಬಾಗಿಲು ಲಾಕ್ ಮುರಿದು ಅಂಗಡಿಯಲ್ಲಿದ್ದ ೧೦,೦೦೦ ಹಣವನ್ನು ಕದ್ದಿದ್ದಾರೆ.
ಈ ಬಗ್ಗೆ ವರ್ತೂರು ಪೊಲೀಸ್ ಠಾಣೆಲ್ಲಿ ಪ್ರಕಾರಣ ದಾಖಲೆಯಾಗಿದೆ . ಈ ಹಿಂದೆಯು ಎರಡು ಬಾರಿ ಅಂಗಡಿಯಲ್ಲಿ ಕಳ್ಳತನ ಮಾಡಲು ಕಳ್ಳರು ಪ್ರಯತ್ನ ಪಟ್ಟಿದರು.
ಈ ಬಾರಿ ಅಂಗಡಿಯ ಬಾಗಿಲಿನ ಲಾಕ್ ಮುರಿದು ಹಣವನ್ನು ಕದಿದ್ದಾರೆ ಎಂದು ಮಾಲೀಕ ಗಿರಿದಾರಿಲಾಲ್ ತಿಳಿಸಿದರು.
ಈ ಪ್ರದೇಶದಲ್ಲಿ ಇತ್ತೀಚೆಗೆ ಹೆಚ್ಚು ಕಳ್ಳತನ ಹಾಗೂ ದರೋಡೆ ಪ್ರಕರಣಗಳು ಹೆಚ್ಚುತ್ತವೆ ಅದರೂ ಪೋಲಿಸರು ಸೂಕ್ತ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಸ್ಥಳೀಯರು ದೂರಿದರು.

LEAVE A REPLY

Please enter your comment!
Please enter your name here