ಲಾರಿ ಹಾಯ್ದು ಕುರಿಗಳು ಸಾವು

0
198

ರಾಯಚೂರು/ಲಿಂಗಸೂಗುರು: ತಾಲ್ಲೂಕಿನ ಕಸಬಾಯಿ ಲಿಂಗಸಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುರಿಗಳ ಮೇಲೆ ಲಾರಿ ಹಾಯ್ದ ಪರಿಣಾಮ 8 ಕುರಿಗಳು ಸಾವಿಗಿಡಾದ ಘಟನೆ ಇಂದು ನಡೆದಿದೆ.

ಕುಪ್ಪಣ್ಣ ಎಂಬವರಿಗೆ ಸೇರಿದ ಕುರಿಗಳಾಗಿದ್ದು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಮೇಯಲು ಹೋಗಿದ್ದ ಸಂದರ್ಭದಲ್ಲಿ ಆಂಧ್ರದಿಂದ ರತ್ನಗಿರಿಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿಯೊಂದು ವೇಗವಾಗಿ ಕುರಿಗಳು ಮೇಲೆ ಹಾಯ್ದು ಹೋಗಿದೆ ಎಂದು ಹೇಳಲಾಗಿದೆ.ಇದರಿಂದ 8ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿವೆ,2ಕುರಿಗಳಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.ಈ ಕುರಿತು ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here