ಲೆಕ್ಕ ಶೀರ್ಷಿಕೆಯ ಪ್ರತಿ ನೋಡಿ ಪಂಚಾಯತಿ ಸದಸ್ಯರು ಕಂಗಾಲು..

0
313

ಳ್ಳಾರಿ / ಹೊಸಪೇಟೆ : ಅಧಿಕಾರಿಗಳು ನೀಡಿದ ಲೆಕ್ಕ ಶೀರ್ಷಿಕೆಯ ಪ್ರತಿ ನೋಡಿ ಪಂಚಾಯತಿ ಸದಸ್ಯರು ಕಂಗಾಲದ ಘಟನೆ ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯತಿ ಕಾರ್ಯಲಯದಲ್ಲಿ ನಡೆದಿದೆ. ಸ್ಥಳೀಯ ಪಟ್ಟಣ ಪಂಚಾಯತಿ ಕಾರ್ಯಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮನ್ಯ ಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಸಾಮಾನ್ಯ ಸಭೆಯ ಅಜೆಂಡಾ ಪ್ರತಿ ನೀಡಿದಾಗ ಈ ಘಟನೆ ನಡೆದಿದೆ. 2017/18 ನೇ ಸಾಲಿನ ಪ್ರಾರಂಭದ ಮೂರು ತಿಂಗಳಲ್ಲೇ 12ಲಕ್ಷ ಪೀಠೋಪಕರಣ ದುರಸ್ಥಿ ಮತ್ತು ಕಛೇರಿ ಖರ್ಚಿಗೆ ಬಳಸಿರುವುದನ್ನು ಕಂಡು ಸದಸ್ಯರು ಅಧಿಕಾರಿಗಳ ವಿರುದ್ದು ಕಿಡಿಕಾರಿದರು. ನಂತರ ಅಧಿಕಾರಿಗಳು ಸದಸ್ಯರನ್ನು ಸಮಜಾಯಿಸಿ ವಿದ್ಯುತ್ ಬಿಲ್ ಹಾಗೂ ಇತರೆ ಖರ್ಚುಗಳು ಒಳಗೊಂಡಿರಬಹುದು ಎಂದು ಉತ್ತರ ನೀಡಿದರು ಸಹ ಪಟ್ಟು ಬಿಡದ ಆಡಳಿತ ವರ್ಗದವರು ಅವುಗಳ ವಿವರಗಳನ್ನು ವಾರದೊಳಗೆ ಎಲ್ಲಾ ಸದಸ್ಯರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಭಾರಿ ಮುಖ್ಯಾಧಿಕಾರಿ ವಿಜಯಲಕ್ಷ್ಮೀ, ಪ.ಪಂ ಅಧ್ಯಕ್ಷ ಬಸವರಾಯರೆಡ್ಡಿ ಮಳಲಿ, ಉಪಾಧ್ಯಕ್ಷ ಕೊರವರ ಭೀಮಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಜಂತೆ, ಸದಸ್ಯರಾದ ಗೋಪಾಲ್, ಸಿ.ಖಾಜಾ ಹುಸೇನ್, ಕಿರಣ್‍ಕುಮಾರ, ಹನುಮಂತ ನಾಯಕ ಇತರರಿದ್ದರು.

LEAVE A REPLY

Please enter your comment!
Please enter your name here