ಲೋಕಕಲ್ಯಾಣಾರ್ಥವಾಗಿ ಹಂಪಿಯಲ್ಲಿ ಹೋಮ…

0
213

ಬಳ್ಳಾರಿ /ಹೊಸಪೇಟೆ:ಲೋಕಕಲ್ಯಾಣಾರ್ಥಹಾಗೂ ಗ್ರಾಮದಲ್ಲಿ ಸಮೃದ್ಧ ಮಳೆ-ಬೆಳೆಗಾಗಿ ಪ್ರಾರ್ಥಿಸಿ ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ಹಿಂಭಾಗದ ಮಳಯಾಳ ಭ್ರಹ್ಮ ದೇವಾಲಯದಲ್ಲಿಶ್ರೀ ಗಣಪತಿ, ನವಗ್ರಹ ಹಾಗೂ ಮಹಾರುದ್ರ ಹೋಮವನ್ನು ಗುರುವಾರ ನೆರವೇರಿಸಲಾಯಿತು. 

ಶ್ರಾವಣಮಾಸದ ನಿಮಿತ್ತವಾಗಿ ವೃತಾಚರಣೆಯಲ್ಲಿದ್ದ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ಮಾಲೆಧಾರಿಗಳು ಹಂಪಿಯ ವಿದ್ಯಾರಣ್ಯ ಪೀಠದ ಶ್ರೀ ವಿದ್ಯಾರಣ್ಯ ಭಾರತಿ ಶ್ರೀಗಳ ಸಾನಿಧ್ಯದಲ್ಲಿ ಶ್ರೀ ಗಣಪತಿ, ನವಗ್ರಹ ಹಾಗೂ ಮಹಾರುದ್ರ ಹೋಮ ನೆರವೇರಿಸಿ, ಗ್ರಾಮದಲ್ಲಿ ಸಮೃದ್ಧ ಮಳೆ-ಬೆಳೆ ಕರುಣಿಸುವಂತೆ ಪ್ರಾರ್ಥಿಸಿದರು.
ದೇವಸ್ಥಾನದ ಪ್ರಧಾನ ಆರ್ಚಕರಾದ ಪಿ.ಶ್ರೀನಾಥ ಶರ್ಮಾ, ಜೆ.ಎಸ್.ಮುರುಳಿಧರ ಶಾಸ್ತ್ರಿ, ರವಿ ಪಾಟೇಲ್, ಪಿ.ರಘುನಾಥ ಶರ್ಮಾ ಇತರರು ಹೋಮ-ಹವನವನ್ನು ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದರು.
ಪ್ರವಾಸಿ ಮಾಗದರ್ಶಿ ಗೋಪಾಲ, ವಿರೇಶ, ಶರಣ, ಶಿವಕುಮಾರ ಹಾಗೂ ಶ್ರೀನಿವಾಸ ಮತ್ತಿತರರು ಶ್ರದ್ಧಾ-ಭಕ್ತಿಯಿಂದ ಹೋಮ ನೆರವೇರಿಸಿದರು.
ಹಂಪಿ, ಕಡ್ಡಿರಾಂಪುರ, ಕಮಲಾಪುರ, ವೆಂಕಟಾಪುರ ಹಾಗೂ ಬುಕ್ಕಸಾಗರ ಸೇರಿದಂತೆ ಇತರೆ ಗ್ರಾಮಗಳ 25ಕ್ಕೂ ಜನ ಭಕ್ತರು, ಶ್ರಾವಣಮಾಸದ ಒಂದು ತಿಂಗಳು ಕಾಲ ವ್ರತಾರ್ಚಣೆ ಕೈಗೊಂಡಿದ್ದು, ಇದೀಗ ಲೋಕಾಕಲ್ಯಾಣಾರ್ಥವಾಗಿ ಹೋಮ ಕೈಗೊಂಡು ಪ್ರಾರ್ಥನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here