ವಕೀಲರ ಮೇಲೆ ಮಾರಣಾಂತಿಕ ಹಲ್ಲೆ

0
357

ಚಿಕ್ಕಬಳ್ಳಾಪುರ/ಬಾಗೇಪಲ್ಲಿ:- ಹಾಡಹಗಲೇ ಧಾರವಾಡದ ತಹಸೀಲ್ದಾರ ಕಚೇರಿ ಎದುರು ವಕೀಲರೊಬ್ಬರ ಮೇಲೆ ಮಚ್ಚು ಲಾಂಗ್ ಗಳಿಂದ ಮಾರಣಾಂತಿಕ ಹಲ್ಲೆ ನಡೆದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಹಿರಿಯ ವಕೀಲ ಮದನ್ ಮೋಹನ್ ತಿಳಿಸಿದರು .

ಬಾಗೇಪಲ್ಲಿ ವಕೀಲರ ಸಂಘ ವತಿಯಿಂದ ನ್ಯಾಯಾಲಯದ ಕಾರ್ಯ ಕಲಾಪಗಳನ್ನು ಬಹಿಷ್ಕರಿಸಿ ಬಾಗೇಪಲ್ಲಿ ನ್ಯಾಯಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದರು .

ದೊಡ್ಡಮನಿ ವಕೀಲರ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆಗೆ ಯತ್ನಿಸಿದ ದುಷ್ಕರ್ಮಿಗಳು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ವಕೀಲ‌ ಹಾಗೂ ಬಿ.ಐ. ದೊಡ್ಡಮನಿ ಎಂಬುವವರ ಮೇಲೆಯೇ ಲಾಂಗು, ಮಚ್ಚಿನಿಂದ ಹಲ್ಲೆಗೊಳಗಾದವರು. ಹಲ್ಲೆಯಾದ ಕೂಡಲೇ ಪ್ರಾಣ ಭೀತಿಯಿಂದ ಬಿ.ಐ. ದೊಡ್ಡಮನಿ ಕೂಡಲೇ ಗ್ರಾಮೀಣ ಪೊಲೀಸ್ ಠಾಣೆ ಬಳಿ ದೌಡಾಯಿಸಿದ್ದಾರೆ. ಕೂಡಲೇ ಕಾರ್ಯ ಪ್ರವತ್ತರಾದ ಪೊಲೀಸರು ದೊಡ್ಡಮನಿ ಅವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

ತಹಸೀಲ್ದಾರ್ ಕಚೇರಿಯ ಎದುರಿನ ವಕೀಲರ ಕಚೇರಿ ಯೊಳಗಡೆ ನುಗ್ಗಿ ಹಲ್ಲೆ ಮಾಡಿರುವುದಕ್ಕೆ ಇಡೀ ವಕೀಲ ಸಮುದಾಯ ಬೆಚ್ಚಿಬಿದ್ದಿದೆ.

ಪ್ರಜಾಪ್ರಭುತ್ವದಲ್ಲಿ ಈ ರೀತಿಯಾಗಿ ನ್ಯಾಯವಾದಿಗಳ ಮೇಲೆ ಸಾರ್ವಜನಿಕ ಸ್ಥಳಗಳಲ್ಲಿ ಕಿಡಿಗೇಡಿಗಳು ಹಲ್ಲೆ ಮಾಡಿರುವುದು ಇಂದಿನ ಪ್ರಜಾಪ್ರಭುತ್ವದ ಮೌಲ್ಯ ಗಳನ್ನು ನಾಶ ಮಾಡುವಂತೆ ಸ್ಪಷ್ಟವಾಗಿ ಗೋಚರ ವಾಗುತ್ತದೆ .
ಇಂತಹ ಘಟನೆಗಳು ಮುಂದುವರೆದ ಈ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಆಗಿದೆ ದೊಡ್ಡ ಮನೆ ನ್ಯಾಯವಾದಿಗಳ ಮೇಲೆ ನಡೆದಿರುವ ಹಲ್ಲೆ ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಅಥವಾ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ಭಾಗ್ಯ ಪಡೆದು ವಕೀಲರ ಸಂಘದಿಂದ ಆಗ್ರಹ ಇದೇ ಸಂದರ್ಭದಲ್ಲಿ ಬಾಗೇಪಲ್ಲಿ ವಕೀಲ ಸಂಘದ ಕಾರ್ಯದರ್ಶಿ ಎಸ್ ಎನ್ ಪ್ರಸನ್ನ ಕುಮಾರ್ ಮಾತನಾಡಿ ಇದೇ ರೀತಿಯಲ್ಲಿ ವಕೀಲರ ಮೇಲೆ ದೌರ್ಜನ್ಯಗಳು ಮುಂದುವರಿದರೆ ವಕೀಲರಸಮುದಾಯ ಯಾವೊಬ್ಬ ವಕೀಲರು ನಿರ್ಭೀತಿಯಿಂದ ತಮ್ಮ ವೃತ್ತಿಯನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ ಎಂದರು ಆದುದರಿಂದ ವಕೀಲರಿಗೆ ಪ್ರತ್ಯೇಕವಾಗಿ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿ ಮಾಡಬೇಕು ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ನರಸಿಂಹರೆಡ್ಡಿ, ಜಿ ಸುಧಾಕರ್,ನಂಜುಂಡಪ್ಪ ,ವೆಂಕಟನಾರಾಯಣ , ಜೆಎನ್ ಮಂಜುನಾಥ್,ಶಾನ್ ಭಾಷಾ,ಕೆಎನ್ ರವಿ ಕುಮಾರ್,ಆದಿನಾರಾಯಣ, ಬಾಬುನಾಗಭೂಷಣ , ಇತರ ವಕೀಲರು ಹಾಜರಿದ್ದರು .

LEAVE A REPLY

Please enter your comment!
Please enter your name here