ವರದಕ್ಷಿಣೆ ಕಿರುಕುಳ,ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ.

0
120

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲೂಕಿನ ಕೆಂಚಾರ್ಲಹಳ್ಳಿ ವ್ಯಾಪ್ತಿಯಲ್ಲಿರುವ ಕೋಡೆಗಂಡ್ಲು ಗ್ರಾಮದಲ್ಲಿ ವಾಸವಾಗಿದ್ದ ವೆಂಕಟೇಶ್ ರವರಿಗೆ ಚಂದ್ರಕಲಾ ರವರು ಸುಮಾರು ಹನ್ನೆರಡು ವರ್ಷಗಳ ಹಿಂದೆಯೇ ಮದುವೆಯಾಗಿದ್ದು ಇವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಒಂದು ಎಂಟು ವರ್ಷ ಮಗು ಮತ್ತೊಂದು ನಾಲ್ಕು ವರ್ಷ ಹೆಣ್ಣು ಮಗು ಇದೆ ಎಂದು ತಿಳಿದಬಂದಿದೇ.ಮನೆಯಲ್ಲಿ ಮಾವ ಜಯಣ್ಣ ಮತ್ತು ಮಾವನ ಎರಡನೇ ಹೆಂಡತಿ ಅತ್ತೆ ನಾರಾಯಣಮ್ಮ ಇವರು ಇಬ್ಬರೂ ಸೇರಿ ಸೊಸೆಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಚಂದ್ರಕಲಾ ಕುಟುಂಬದವರು ಆರೋಪಿಸಿದ್ದಾರೆ.ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆ ಚಂದ್ರಕಲಾ ರಾತ್ರಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು ಚಂದ್ರಕಲಾ ಕುಟುಂಬದಿಂದ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.ಕೆಂಚಾರ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here