ವರುಣನ ಅವಾಂತರಕ್ಕೆ ನಾಲ್ಕು ಮಂದಿ ಬಲಿ

0
141

ಬಾಗಲಕೋಟೆ : ರಾತ್ರಿಸುರಿದ ಮಳೆಯಿಂದ ಹಳ್ಳದಲ್ಲಿ ಕಾರೊಂದು ಕೊಚ್ಚಿಕೊಂಡು ಹೋದ ಪರಿಣಾಮ ನಾಲ್ವರು ದುರಂತ ಸಾವನ್ನು ಕಂಡು, ಓರ್ವ ಪ್ರವಾಹದಲ್ಲಿ ಈ ಜಿ ದಡ ಸೇರಿ ಬದುಕಿ ಬಂದಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಯಂಡಿಗೇರಿ ಗ್ರಾಮದಲ್ಲಿ ಡೆದಿದೆ.. ರಾತ್ರಿ ವೇಳೆ ರಭಸವಾಗಿ ರಸ್ತೆಯ ಮೇಲೆ ಹರಿಯುತ್ತಿದ್ದ ನೀರಲ್ಲಿ ಕಾರು ಸಿಲುಕಿದ್ದು, ನೀರಿನ ರಭಸಕ್ಕೆ ಕಾರು 200 ಮೀಟರ್ವರೆಗೆ ಕೊಚ್ಚಿಕೊಂಡು ಹೋಗಿದೆ.. ಕಾರಿನಲ್ಲಿದ್ದ ಯಂಡಿಗೇರಿ ಗ್ರಾಮದ ಹೊಳಬಸಪ್ಪ ಮತ್ತು ಯಮನಪ್ಪ ಮತ್ತು ಬೆಳಗಾವಿ ಜಿಲ್ಲೆಯ ಕರಡಿಗುಡ್ಡ ಗ್ರಾಮದ ಅಶೋಕ ಮತ್ತು ವೀರಭದ್ರಪ್ಪ ಮೃತಪಟ್ಟಿದ್ದಾರೆ.. ಇನ್ನು ಕಾರಿನಲ್ಲಿದ್ದ ಯಂಡಿಗೇರಿ ಗ್ರಾಮದ ನಿವಾಸಿ ಬಸಲಿಂಗಪ್ಪ್ ಪ್ರವಾಹದಲ್ಲಿಯೇ ಈಜಿ ದಡ ಸೇರಿ ಬದುಕಿ ಬಂದಿದ್ದಾನೆ.. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಎಎಸ್ಪಿ ಲಕ್ಷ್ಮೀಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ರು..ಮೃತದೇಹಗಳನ್ನ ಕೆರೂರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ..

LEAVE A REPLY

Please enter your comment!
Please enter your name here