ವರ್ಗಾವಣೆ ಆದೇಶ ಖಂಡಿಸಿ ಕರವೇ ಪ್ರತಿಭಟನೆ..

0
206

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ:ಡಿಐಜಿ ರೂಪರವರ ವರ್ಗಾವಣೆ ಖಂಡಿಸಿಕರವೇ ಪ್ರವೀಣ್ ಕುಮಾರ್ ಶೆಟ್ಟ ಬಣದ ರಾಜ್ಯಕಾರ್ಯದರ್ಶಿ ರಾಜಘಟ್ಟ ರವಿ ನೇತೃತ್ವದಲ್ಲಿ ನಗರದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಇತ್ತೀಚೆಗೆ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮ ಗಳನ್ನು ಬಯಲೆದ ಡಿಐಜಿ ರೂಪಾರವರನ್ನು ವರ್ಗಾವಣೆಗೊಳಿಸಿದ ಸರ್ಕಾರ ಸರ್ವಾಧಿಕಾರ ಧೋರಣೆ ಖಂಡನೀಯ ಎಂದರು. ಪ್ರಾಮಾಣಿಕ ಅಧಿಕಾರಿಗಳನ್ನು ಪದೇಪದೇ ಎತ್ತಂಗಡಿ,ವರ್ಗಾವಣೆ ಮಾಡಿ ಮಾನಸಿಕ ಹಿಂಸೆ ನೀಡಿ, ಅಧಿಕಾರಿಗಳ ಕರ್ತವ್ಯ ದಲ್ಲಿ ಜಿಗುಪ್ಸೆ ಉಂಟುಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೆಮಾಡಿದರು.ಪ್ರಾಮಾಣಿಕ ಅಧಿಕಾರಿಗಳಿಗೆ ಸರ್ಕಾರ ತೆಗೆದುಕೊಳ್ಳುತ್ತಿರುವ ದೋರಣೆ ರಾಜ್ಯದ ಜನತೆಗೆ ಆಡಳಿತದಮೇಲೆ ಅನುಮಾನಮೂಡಿಸುವಂತಾಗಿದೆ. ಈ ಕೂಡಲೇ ರೂಪಾರವರಿಗೆಬನೀಡಿರುವ ವರ್ಗಾವಣೆ ಯನ್ನು ರದ್ದುಗೊಳಿಸ ಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರವೇ ತಾಲೂಕು ಗೌರಾವಾಧ್ಯಕ್ಷ ಪೂ.ಮಹೇಶ್,ಅಧ್ಯಕ್ಷ ಹೆಚ್.ಎಸ್.ವೆಂಕಟೇಶ್, ಕಾರ್ಯಾಧ್ಯಕ್ಷ.ಹಮಾಮ್ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ವೇಣು,ಕಾರ್ಮಿಕ ಘಟಕ ತಾ.ಅಧ್ಯಕ್ಷ .ವಿರಾಜ್ ರಮೇಶ್,ನಗರಾಧ್ಯಕ್ಷ ಎಸ್ಕೆ.ಸತೀಶ್ ,ಅಮ್ಮು ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here