ವರ್ತಕರ ವಿರೋಧದ ನಡುವೆಯೂ ಒಣಮೀನು ಕಟ್ಟಡ ನೆಲಸಮ

0
156

ಶಿವಮೊಗ್ಗ/ಸಾಗರ:ನೂರಾರು ವರ್ಷಗಳಿಂದ ಒಣ ಮೀನು ಮಾರಾಟ ಮಾಡುತ್ತಿದ್ದ ಕುಟುಂಬ ಇದೀಗ ಬೀದಿಗೆ ಬಿದ್ದಿದೆ.

ಇಂದು ಬೆಳಗಿನ ಜಾವ 3 ಗಂಟೆಗೆ ನಗರಸಭೆ, ತಾಲ್ಲೂಕು ಆಡಳಿತ ಕಾರ್ಯಾಚರಣೆ ನಡೆಸಿ ಆಜಾದ್ ರಸ್ತೆಯಲ್ಲಿರುವ ಪುರಾತನ ಒಣಮೀನು ಮಾರ್ಕೇಟ್ ಪೋಲೀಸ್ ಇಲಾಖೆಯ ಭದ್ರತೆಯೊಂದಿಗೆ ಜೆಸಿಬಿ ಮೂಲಕ ನೆಲಸಮಗೊಳಿಸಿದ್ದಾರೆ.

ಸರ್ಕಾರ ಹೈಟೆಕ್ ಕಟ್ಟಡ ಕಟ್ಟುತ್ತೇನೆಂದು ಹೇಳಿದ್ದು ಒಂದು ರೀತಿಯಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಬೆಳವಣೆಗೆ.

ಆದರೆ ಆ ಕಟ್ಟಡಗಳು ಇದೀಗ ವ್ಯಾಪಾರ ಮಾಡುತ್ತಿದ್ದವರಿಗೆ ಸಿಗುತ್ತದೆ ಎಂದು ಯಾರಿಗೂ ಹೇಳಲೂ ಸಾಧ್ಯವಿಲ್ಲಾ.

ವರ್ತಕರ ಆತಂಕ ಏನೆಂದರೆ ಹೈಟೆಕ್ ಮಾರ್ಕೇಟ್ ಆದ ಮೇಲೆ ಅದರ ಬಾಡಿಗೆಗಳು ಜಾಸ್ತಿ ಆಗುತ್ತದೆ.ಅವಾಗ ಸಣ್ಣ ಪುಟ್ಟ ವ್ಯಾಪಾರ ಮಾಡುವ ನಮಗೆ ಮಳಿಗೆಗಳನ್ನು ಖರೀದಿಸಲು ಸಾಧ್ಯವಿಲ್ಲಾ.

ದಯವಿಟ್ಟು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಸ್ಥಳೀಯ ಆಡಳಿತಗಳು ಆದಷ್ಟೂ ಬೇಗ ಕಟ್ಟಡ ನಿರ್ಮಾಣ ಪ್ರಾರಂಭಿಸಿ ಅಲ್ಲೇ ವ್ಯಾಪಾರ ಮಾಡುತ್ತಿದ್ದವರಿಗೆ ಮೊದಲ ಆಧ್ಯತೆ ಕೊಟ್ಟು ಅವರಿಗೆ ಅನುಕೂಲ ಆಗುವ ದರ ನಿಗದಿ ಮಾಡಿಕೊಡಿ ಎಂದು ಸ್ಥಳೀಯರು ವರ್ತಕರ ಪರವಾಗಿ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here