ವರ್ಷಗಳು ಕಳೆದರೂ ಬೆಳಗದ ವಿದ್ಯುತ್ ಕಂಬದಲ್ಲಿ ದೀಪಗಳು.

0
248

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ನಗರ ವ್ಯಾಪ್ತಿಗೆ ಸೇರಿದ ಹಂಡಿಗನಾಳ ರಸ್ತೆಯ ಮಾರ್ಗದ ಕೆರೆ ಕಟ್ಟೆಯ ಮೇಲೆ ಸುಮಾರು ಮೂರು ವರ್ಷಗಳ ಹಿಂದೆ ಅಳವಡಿಸಲಾಗಿದ್ದ ವಿದ್ಯುತ್ ದೀಪಗಳ ದುಸ್ಥಿತಿ‌. ಇತ್ತೀಚಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು ಈ ರಸ್ತೆಯು ಕೆರೆ ಕಟ್ಟೆಯ ಮೇಲೆ ವಿದ್ಯುತ್ ದೀಪಗಳಿಲ್ಲದೆ ರಾತ್ರಿ ವೇಳೆಯಲ್ಲಿ ವಾಹನ ಸವಾರರಿಗೆ ಅಪಘಾತಗಳು ಹೆಚ್ಚಾಗುತ್ತಿರುವ ಘಟನೆಗಳು. ಶಿಡ್ಲಘಟ್ಟದಿಂದ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಕಡೆಗೆ ತೆರಳುವ ಮಾರ್ಗದಲ್ಲಿ ಪ್ರತಿದಿನ ವಾಹನಗಳ ಸಂಚಾರ ಹೆಚ್ಚಾಗಿದ್ದು ರಾತ್ರಿ ವೇಳೆ ಸಂಚಾರ ಮಾಡುವ ವಾಹನ ಸವಾರರಿಗೆ ಯಾವುದೇ ಅಹಿತಕರ ಘಟನೆಗಳು ಆಗದಂತೆ ವಿದ್ಯುತ್ ದೀಪಗಳ ಬೆಳಕಲ್ಲಿ ಸಂಚಾರ ಸುಗಮಕ್ಕೆ ಅಳವಡಿಸಿದ್ದು.ಯಾವ ಕಾರಣಕ್ಕೆ ತೆಗೆದಿದ್ದಾರೆ ಗೊತ್ತಿಲ್ಲ ಸುಮಾರು ಮೂರು ವರ್ಷಗಳು ಕಳೆದರೂ ಸಹ ಮತ್ತೆ ವಿದ್ಯುತ್ ಕಂಬಗಳಲ್ಲಿ ದೀಪಗಳು ಹಾಕುವ ಗೋಜಿಗೆ ಅಧಿಕಾರಿಗಳು ಮತ್ತು ಸದಸ್ಯರು ಸೇರಿದಂತೆ ಕ್ರಮ ಕೈಗೊಳ್ಳಲು ಮುಂದಾಗದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.ಇನ್ನಾದರೂ ಸಮಸ್ಯೆ ಸರಿಪಡಿಸಲಿ ಎಂದು ಸಾರ್ವಜನಿಕರ ಒತ್ತಾಯವಾಗಿದೆ.

LEAVE A REPLY

Please enter your comment!
Please enter your name here