ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ

0
106

ಚಿಕ್ಕಬಳ್ಳಾಪುರ / ಚಿಂತಾಮಣಿ :ನಗರದ ಕನಂಪಲ್ಲಿಯ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಇಂದು ವಾಯು ಮಾಲಿನ್ಯ ನಿಯಂತ್ರಣ ಮಾಸ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಪ್ರಾದೇಶಿಕ ಕಚೇರಿಯ ಅಧಿಕಾರಿ ಪ್ರಕಾಶ್ ಮಾಲಿನ್ಯ ಅಳಿಸಿ ಪರಿಸರಉಳಿಸಿ ಹಸಿರೇ ಜೀವನ ಮಾಲಿನ್ಯವೇ ಮರಣ ಹಾಗಾಗಿ ಹೊಸದಾಗಿ ದ್ವಿಚಕ್ರ ವಾಹನವನ್ನು ತೆಗೆದು ಕೊಂಡರೆ ಮತ್ತು ಹೊಸದಾಗಿ ಡಿ.ಎಲ್ ಮಾಡಿಸುವಾಗ ಅಂತಹವರು ಒಂದು ಗಿಡವನ್ನು ಸಹ ನೆಡಬೇಕು,ಗಿಡವನ್ನು ನೆಡವುದ್ದರಿಂದ ಪರಿಸರ ಉಳಿಯುತ್ತದೆ ಎಂದರು.

ಮೋಟರ್ ವಾಹನಗಳ ಸಂಚಾರದಿಂದಾಗಿ ಅವುಗಳು ಹೊರಸೂಸುವ ಹೊಗೆಯಿಂದಾಗಿ ಶುದ್ಧ ಗಾಳಿಯೂ ವಿಷಕಾರಿಯಾಗುತ್ತದೆ. ಅವುಗಳು ಹೊರ ಹಾಕುವುದರಿಂದ ವಿಷಕಾರಿ ಅನಿಲಗಳಿಂದ ದುಷ್ಟ ಪರಿಣಾಮಗಳು ಉಂಟಾಗುತ್ತವೆ ಎಂಬ ವಿಷಯವು ಸಾರ್ವಜನಿಕರಿಗೆ ಗೊತ್ತಿರಲಿ ಎಂದರು.

ವಾಹನ ಸವಾರರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದರೆ ಅಂತವರಿಗೆ ದಂಡ ವಿಧಿಸಲಾಗುವುದು, ಇದುವರೆಗೂ 10 ದ್ವಿಚಕ್ರ ವಾಹನಗಳಿಗೆ ಸುಮಾರು 35,000 ದಿಂದ 40,000 ವರೆಗೆ ದಂಡ ವಿಧಿಸಲಾಗಿದೆ ಎಂದರು. ಅದಕ್ಕಾಗಿ ಮಾನವ ಕುಲದ ಉದ್ಧಾರಕ್ಕೆ ಮತ್ತು ನಮ್ಮ ಮುಂದಿನ ಪೀಳಿಗೆಯ ಆರೋಗ್ಯವಂತ ಜೀವನಕ್ಕೆ ನಾವು ಪ್ರತಿಯೊಬ್ಬರೂ ನಮ್ಮ ವಾಹನದಿಂದ ಹೊರಸೂಸುವ ವಿಷಾನಿಲಗಳನ್ನು ತಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಸೂಪರ್ಡೇಂಟ್ ವೇಣುಗೋಪಾಲ್, ದೇವರಾಜ್ ,ಶ್ರೀನಿವಾಸ್ ಮತ್ತು ಇನ್ನೂ ಇತರರೂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here