ವಾರಬಂಧಿ ಅವೈಜ್ಞಾನಿಕ ತುರ್ತು ಸಭೆ ಕರೆಯಲು ಆಗ್ರಹ…

0
184

ರಾಯಚೂರು.ಆಲಮಟ್ಟಿಯಲ್ಲಿ ನೀರಿದ್ದರೂ ವಾರಬಂಧಿ ಪ್ರಕಾರ ನೀರು ಬಿಡಲು ತಿರ್ಮಾನ ಅವೈಜ್ಞಾನಿಕವಾಗಿದೆ. ಜನ ಪ್ರತಿನಿಧಿಗಳಿಗೆ ತುರ್ತು ಸಭೆ ಕರೆದು ನೀರು ಬಿಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಗೌರವಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಹೇಳಿದರು.

ಅವರಿಂದು ಸುದ್ದಿಗೊಷ್ಟಿಯಲ್ಲಿ ಮಾತನಾಡಿ ದಿ.25 ರಂದು ಆಲಮಟ್ಟಿ ನೀರಾವರಿ ಸಲಹಾ ಸಮಿತಿ ಸಭೆಯನ್ನು ಕರೆಯಲಾಗಿತ್ತು.ಸಭೆಯಲ್ಲಿ 14 ದಿನಗಳವರೆಗೆ ನೀರು ಹರಿಸಿ 12 ದಿನಗಳವರೆಗೆ ಬಂದ್ ಮಾಡಲಾಗುವುದು ಎಂದು ತಿರ್ಮಾನಿಸಿದೆ.ಈ ತಿರ್ಮಾನ ಅವೈಜ್ಞಾನಿಕವಾಗಿದೆ ಎಂದರು.
ಮಹಾರಾಷ್ರದಲ್ಲಿ ಉತ್ತಮ ಮಳೆಯಾಗಿದ್ದು ಆಲಮಟ್ಟಿ ಮತ್ತು ನಾರಾಯಣ ಪೂರ ಜಲಾಶಯದಲ್ಲಿ ಹೆಚ್ಚು ನೀರು ಸಂಗ್ರಹವಾಗಿದೆ ಆದರೆ ಈ ನೀತಿಯಿಂದ ಮೇಲ್ಬಾಗದ ರೈತರಿಗೆ ಮಾತ್ರ ನೀರು ಬಳಸಿಕೊಳ್ಳಬಹುದು ಆದರೆ ಕೇಳ ಭಾಗಕ್ಕೆ ನೀರು ಬರಲು ಸಾಧ್ಯವಿಲ್ಲ ಇದೊಂದು ಅವೈಜ್ಞಾನಿಕ ನೀತಿಯಾಗಿದೆ.12 ದಿನಗಳವರೆಗೆ ನೀರು ಬಂದ ಮಾಡುವುದು ಸರಿಯಲ್ಲ ಎಂದರು.ಕೂಡಲೇ ಜನಪ್ರತಿ ನಿಧಿಗಳು ತುರ್ತು ಸಭೆಯನ್ನು ಕರೆದು ನೀರು ಬಿಡಲು ತಿರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದರು.
ದೇವದುರ್ಗದಲ್ಲಿ 159 ಅಭಿವೃದ್ದಿ ಕಾಮಗಾರಿಗಳು ಸ್ಥಗಿತಗೊಳಿಸಿರುವುದು ಸರಕಾರ ದೋರಣೆ ಸರಿಯಲ್ಲ,ಅಲ್ಲಿಯ ಶಾಸಕರು ಸುಮಾರು 50 ದಿನಗಳ ವರೆಗೆ ಪ್ರತಿಭಟನೆ ಮಾಡುತ್ತಿದ್ದು ಸರಕಾರ ಮತ್ತು ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸುತ್ತಿಲ್ಲ.ಕಾಂಗ್ರೇಸ್ ನಾಯಕರು ರಾಜಕೀಯ ಪ್ರೇರಿತ ಹೋರಾಟ ಎಂದು ಬಿಂಬಿಸುತ್ತಿದ್ದಾರೆ.ಈ ಬಗ್ಗೆ ಸರಕಾರವೇ ತನಿಖೆ ನಡೆಸಲಿ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಲಿ.ತಾಕತ್ತಿದ್ದರೆ ಬಹಿರಂಗ ಸವಾಲಿಗೆ ಮುಂದಾಗಲಿ ಎಂದರು.
ಈ ಸಂದರ್ಭದಲ್ಲಿ ಲಕ್ಷ್ಮಣಗೌಡ,ಮಲ್ಲಣ್ಣ ದಿನ್ನಿ ,ಹುಲಿಗೆಪ್ಪ, ಜಯಪ್ಪ ಸ್ವಾಮಿ, ಪ್ರಭಾಕರ್, ಬಸವನಗೌಡ, ಇನ್ನಿತರು ಇದ್ದರು.

LEAVE A REPLY

Please enter your comment!
Please enter your name here