ವಾಲ್ಮೀಕಿ ಜಯಂತಿ,ಪೂರ್ವಭಾವಿ ಸಭೆ.

0
183

ಚಾಮರಾಜನಗರ/ಕೊಳ್ಳೇಗಾಲ:ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಆಡಳಿತ ವತಿಯಿಂದ ನಡೆದ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯು ಶಾಸಕರುಗಳಾದ ಎಸ್.ಜಯಣ್ಣ ಹಾಗೂ ಆರ್.ನರೇಂದ್ರ ಅವರ ಸಮ್ಮುಖದಲ್ಲಿ ಜರುಗಿತು.

ಅ.5 ರಂದು ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಪಟ್ಟಣದ ವಸಂತಕುಮಾರಿ ಕಾಲೇಜು ಮೈದಾನದಲ್ಲಿ ಅದ್ದೂರಿಯಾಗಿ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ನಾಯಕ ಜನಾಂಗ ತಾಲ್ಲೂಕು ಅಧ್ಯಕ್ಷ ಚಿಕ್ಕಲಿಂಗಯ್ಯ ಮಾತನಾಡಿ, ಬೆಂಗಳೂರಿನಲ್ಲಿ ಅದ್ದೂರಿಯಾಗಿ ಈ ಬಾರಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಆಚರಿಸುತ್ತಿದ್ದು. ತಾಲ್ಲೂಕಿನಲ್ಲಿ ಮೆರವಣಿಗೆಯನ್ನು ಈ ಬಾರಿ ರದ್ದುಪಡಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಸಿ ಎಂದು ತಿಳಿಸಿದರು.
ವಾಲ್ಮೀಕಿ ಕಾರ್ಯಕ್ರಮದಲ್ಲಿಯೂ ಸಹ ಪ್ರತಿ ಕಾರ್ಯಕ್ರಮದಂತೆ ಆಚರಿಸಲು ಶಾಸಕರು ಸೂಚಿಸಿದರು. ಮುಖ್ಯ ಭಾಷಣಕಾರರು ಹಾಗೂ ಸಭೆಯಲ್ಲಿ ನಾಯಕ ಸಮುದಾಯದವರಿಗೆ ಸನ್ಮಾನಿಸಲು ಗುರುತಿಸುವಂತೆ ಸಭೆಯಲ್ಲಿ ಶಾಸಕರುಗಳೂ ಸೂಚಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಶಾಂತರಾಜು, ತಾ.ಪಂ ಅಧ್ಯಕ್ಷ ರಾಜು, ಉಪಾಧ್ಯಕ್ಷ ಲತಾರಾಜಣ್ಣ, ಸದಸ್ಯರಾದ ಅರುಣ್, ಸಿದ್ದಪ್ಪಾಜಿ, ತಹಶೀಲ್ದಾರ್ ಕಾಮಾಕ್ಷಮ್ಮ, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಡಾ.ದರ್ಶನ್, ಡಿವೈಎಸ್‍ಪಿ ಪುಟ್ಟಮಾದಯ್ಯ, ಬಿಇಒ ಶಿವಲಿಂಗÀಯ್ಯ, ನಾಯಕ ಯಜಮಾನರಾದ ಚಿಕ್ಕಮಾದು, ಶಂಕರ್, ಪರಿಶಿಷ್ಠ ವರ್ಗಗಳ ಅಧಿಕಾರಿ ಗಂಗಾಧರ್, ಸಮಾಜಕಲ್ಯಾಣಾಧಿಕಾರಿ ಮಂಜುಳ ಹಾಗೂ ಇನ್ನೀತರರು ಹಾಜರಿದ್ದರು.

LEAVE A REPLY

Please enter your comment!
Please enter your name here