ವಾಲ್ಮೀಕಿ ಜಯಂತಿ,ಪೂರ್ವಭಾವಿ ಸಭೆ..

0
532

ಬಳ್ಳಾರಿ /ಹೊಸಪೇಟೆ:ನಗರದಲ್ಲಿ ಮಂಗಳವಾರ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅ.5 ರಂದು ತಾಲೂಕು ಆಡಳಿತ ಹಾಗೂ ವಾಲ್ಮೀಕಿ ಸಮಾಜದ ವತಿಯಿಂದ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು.ತಾಲೂಕು ಆಡಳಿತದ ವತಿಯಿಂದ ಸ್ಥಳೀಯ ತಾಲೂಕು ಪಂಚಾಯಿತಿ ಕಛೇರಿ ಸಭಾಂಗಣದಲ್ಲಿ ಮಂಗಳವಾರ ಕರೆಯಲಾಗಿದ್ದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಾಯಕ ಆಯುಕ್ತ ಪ್ರಶಾಂತ್ ಕುಮಾರ್ ಮಿಶ್ರಾ, ಅ.5 ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದರು. ವಾಲ್ಮೀಕಿ ಜಯಂತಿ ಅಂಗವಾಗಿ ಜ್ಯೋತಿ ತರಲು ಹಾಗೂ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಸಲು ಸಭೆ ತೀರ್ಮಾನಿಸಿತು. ಅಲ್ಲದೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಸೂಚಿಸಿದರು. ಹಾಗೂ ಸಭೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ತಹಶೀಲ್ದಾರ್ ಹೆಚ್.ವಿಶ್ವನಾಥ ಮಾತನಾಡಿ, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಶಾಂತಿ ಸಹೌರ್ದತೆಯಿಂದ ವಾಲ್ಮೀಕಿ ಜಯಂತಿ ಆಚರಿಸುವಂತೆ ಕರೆ ನೀಡಿದರು.
ಸಭೆಯಲ್ಲಿ ಹುಡಾ ಆಯುಕ್ತ ಗುರುಪ್ರಸಾದ್, ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗುಜ್ಜಲ ಶಿವರಾಮಪ್ಪ,ಮಾತನಾಡಿ ಆ 5 ರಂದು ಬೆಂಗಳೂರಿನ ವಿಧಾನ ಸೌದದ ತಪ್ಪೋವಣದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ಇರುದರಿಂದ ನಮ್ಮ ಸಮಾಜದ ಬಹುಜನರು ಸೇರುತ್ತವೆ ಎಂದರು ಸಂಘದ ಕಾರ್ಯದರ್ಶಿ ಗುಜ್ಜಲ ರಘು, ಮುಖಂಡರಾದ ಜಿ.ಕೆ.ಹನುಮಂತಪ್ಪ,ಯಮೂರಪ್ಪ ಹುಲುಗಜ್ಜಪ್ಪ ಪರುಶುರಾಮಪ್ಪ ಜಂಬಾನಳ್ಳಿ ವಸಂತ, ಸತ್ಯನಾರಯನ ಎಂ.ಕಟಿಗಿ ಬಸವರಾಜಪ್ಪ ನಾಯಕ, ಬಿ.ತಾಯಪ್ಪ ನಾಯಕ, ಯಮನೂರಪ್ಪ,ಪಿ ವೆಂಟೇಶ ಸೇರಿದಂತೆ ಸಮಾಜದ ಮುಖಂಡರುಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here