ವಾಲ್ಮೀಕಿ ಜಯಂತ್ಯೋತ್ಸವ

0
160

ಮಂಡ್ಯ/ಮಳವಳ್ಳಿ: ಶ್ರೀ ಗಂಗಾಪರಮೇಶ್ವರಿ ಮೀನುಗಾರರ ಸಹಕಾರ ಸಂಘದ ವತಿಯಿಂದ ಶ್ರೀ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ ಅದ್ದೂರಿಯಾಗಿ ಹಾಗೂ ವಿಜೃಂಭಣೆಯಿಂದ ನಡೆಯಿತು.
ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದ ಸಂಘದ ಕಚೇರಿಯಿಂದ ಗ್ರಾಮದ ಪ್ರಮುಖಬೀದಿಗಳಲ್ಲಿ ಬೆಳ್ಳಿರಥದಲ್ಲಿ ಶ್ರೀ ವಾಲ್ಮೀಕಿ ರವರ ಭಾವಚಿತ್ರವಿಟ್ಟು ಮೆರವಣಿಗೆ ಮಾಡಲಾಯಿತು. ಈ ಕಾರ್ಯಕ್ರಮ ವನ್ನು ಜಿ.ಪಂ ಸದಸ್ಯೆ ಸುಜಾತಪುಟ್ಟು ಚಾಲನೆ ನೀಡಿ ಮಾತನಾಡಿ, ವಾಲ್ಮೀಕಿ ರವರ ಆದರ್ಶವನ್ನು ಪಾಲಿಸಬೇಕು . ಅವರು ಪ್ರಸಿದ್ದ ಗ್ರಂಥವಾದ ರಾಮಾಯಣವನ್ನು ದೇಶಕ್ಕೆ ಕೊಡುಗೆ ನೀಡಿದ್ದು, ಹೇಗೆ ಅವನ ಜೀವನದಲ್ಲಿ ಕಷ್ಟಗಳನ್ನು ಅನುಭವಿಸಿ ಕೊನೆಗೆ ಋಷಿಯಾಗಿದ್ದನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಗಂಗಾಮತಸ್ಥ ಮುಖಂಡ ಕೆ.ಜೆ ದೇವರಾಜುರವರು ವಾಲ್ಮೀಕಿ ಬಗ್ಗೆ ವಿವರಿದರು. ನಂತರ ಪೂಜಾಕುಣಿತ. ಡೋಳ್ಳು ಕುಣಿತದೊಂದಿಗೆ ಮೆರವಣಿಗೆ ನಡೆಸಲಾಯಿತು. ಇದೇ ಸಂದರ್ಭ ದಲ್ಲಿ ಸಮಾಜದ ಮುಖಂಡರು ಹಾಗೂ ಯಜಮಾನರುಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ವಿ ಪ್ರಕಾಶ, ಗಂಗಪರಮೇಶ್ವರಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ದೇವರಾಜು. ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಸಿ.ನಾಗರಾಜು, ಹನುಮಂತ, ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here