ವಾಲ್ಮೀಕಿ ಜ್ಯೋತಿಗೆ ಅದ್ಧೂರಿ ಸ್ವಾಗತ..

0
310

ಬಳ್ಳಾರಿ /ಹೊಸಪೇಟೆ:ನಗರಕ್ಕಿಂದು ಆಗಮಿಸಿದ್ದ ಶ್ರೀಮಹರ್ಷಿ ವಾಲ್ಮೀಕಿ ಜ್ಯೋತಿಗೆ ನಗರದಲ್ಲಿಂದು ವಾಲ್ಮೀಕಿ ಸಮಾಜ ಬಾಂಧವರು ಅದ್ಧೂರಿ ಸ್ವಾಗತ ಕೋರಿದರು.ಸಂಡೂರು ರಸ್ತೆ ಮೂಲಕ ನಗರ ಪ್ರವೇಶಿಸಿದ ಶ್ರೀಮಹರ್ಷಿ ವಾಲ್ಮೀಕಿ ಜ್ಯೋತಿಗೆ ನಗರದ ಏಕಲವ್ಯ ವೃತ್ತದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಚಿತ್ರಕೇರಿ ಗರಡಿ ಮನೆ ಹತ್ತಿರ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಪೂಜೆ ಸಲ್ಲಿಸಿ, ನಂತರ ಕೊಪ್ಪಳಕ್ಕೆ ಬೀಳ್ಕೊಡಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ವಾಲ್ಮೀಕಿ ಸಮಾಜದ ಮುಖಂಡ ಜಿ.ಕೆ.ಹನುಮಂತಪ್ಪ, ವಾಲ್ಮೀಕಿ ಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ದೊರೆಯಬೇಕಾದ ಮೀಸಲಾತಿ ನೀಡಲು ಸರ್ಕಾರ ಕ್ರಮಕೈಗೊಳ್ಳಬೇಕು. ಸುಪ್ರೀಂ ಕೋರ್ಟಿನ ನಿರ್ದೇಶನದ ಮೇರೆಗೆ ಹೈಕೋರ್ಟ್ ಎಸ್.ಟಿ.ಮೀಸಲಾತಿ ಹೆಚ್ಚಿಸಲು ಆದೇಶ ನೀಡಿದೆ. ಆದರೆ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಲು ಮೀನಮೇಷ ಏಣಿಸುತ್ತಿದೆ. ಈ ಕುರಿತು ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸಿ, ಎಸ್.ಟಿ.ಗೆ ಶೇ.7.5 ರಷ್ಟು ಮೀಸಲಾತಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಇದೇ ಸಂದರ್ಭದಲ್ಲಿ ಅವರು ಬೆಂಗಳೂರಿನ ವಿಧಾನಸೌಧ ಪೂರ್ವಭಾಗದಲ್ಲಿ ವಾಲ್ಮೀಕಿ ತಪೋವನದಲ್ಲಿ ವಾಲ್ಮೀಕಿ ಪ್ರತಿಮೆಗೆ ಅವಕಾಶ ಮಾಡಿಕೊಟ್ಟ ರಾಜ್ಯ ಸರ್ಕಾರವನ್ನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ರನ್ನು ಅವರು ಸಮಾಜದ ಪರವಾಗಿ ಅಭಿನಂದಿಸಿದರು.
ಅ.5 ರಂದು ಬೆಂಗಳೂರಿನ ವಿಧಾನಸೌಧ ಬಳಿಯ ವಾಲ್ಮೀಕಿ ತಪೋವನದಲ್ಲಿ ವಾಲ್ಮೀಕಿ ಬೃಹತ್ ಪ್ರತಿಮೆ ಲೋಕಾರ್ಪಣೆಗೊಳ್ಳುವ ಹಿನ್ನಲೆಯಲ್ಲಿ ವಾಲ್ಮೀಕಿ ಸಮಾಜದ ವತಿಯಿಂದ ಹಮ್ಮಿಕೊಂಡಿರುವ ವಾಲ್ಮೀಕಿ ಜ್ಯೋತಿಯಾತ್ರೆ ಕಳೆದ ಸೆ.23 ರಂದು ಹರಿಹರದ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಿಂದ ಹೊರಟು ಇಂದು ಸಂಡೂರು ಮೂಲಕ ನಗರ ಪ್ರವೇಶಿಸಿತ್ತು. ನಗರದಿಂದ ಕೊಪ್ಪಳ ಮೂಲಕ ತೆರಳಿದ ವಾಲ್ಮೀಕಿ ಜ್ಯೋತಿ ಅ.4 ರಂದು ಬೆಂಗಳೂರು ತಲುಪಲಿದೆ.
ಈ ಸಂದರ್ಭದಲ್ಲಿ ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಗುಜ್ಜಲ ಶಿವರಾಮಪ್ಪ, ಉಪಾಧ್ಯಕ್ಷ ನಾಣಿಕೇರಿ ತಿಮ್ಮಯ್ಯ, ಹೊಸಪೇಟೆ ರೈತ ಸಂಘದ ಅಧ್ಯಕ್ಷ ಗೋಸಲ ಭರಮಪ್ಪ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಅಧ್ಯಕ್ಷ ಕಿಚಿಡಿ ಶ್ರೀನಿವಾಸ, ಕಾರ್ಯದರ್ಶಿ ಪೂಜಾರಿ ವೆಂಕೋಬ ನಾಯಕ, ಹಂಪಿ ಕವಿವಿ ಸಿಂಡಿಕೇಟ್ ಸದಸ್ಯ ಡಾ.ತಾರಿಹಳ್ಳಿ ವೆಂಕಟೇಶ್, ಮುಖಂಡರಾದ ಗುಜ್ಜಲ ನಾಗರಾಜ, ಬೆಳಗೋಡು ರುದ್ರಪ್ಪ, ಹುಲುಗಜ್ಜಪ್ಪ, ಬಿಸಾಟಿ ತಾಯಪ್ಪ ನಾಯಕ, ಜೆ.ಸತ್ಯನಾರಾಯಣ, ತಳವಾರ ಅಂಬಣ್ಣ, ಸಣ್ಣಕ್ಕಿ ಚಂದ್ರಪ್ಪ, ಜಂಬಣ್ಣ, ಕಂಪ್ಲಿ ಕಣಿಮೆಪ್ಪ, ಗುಂಡಿ ಪ್ರಶಾಂತ, ವಿರೂಪಾಕ್ಷಿ, ಬ್ಯಾಲಾಳ್ ಸಣ್ಯಕಪ್ಪ, ಮ್ಯಾಸರ ಲಕ್ಷ್ಮಣ, ಬೆಳಗೋಡು ಮಂಜು, ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ಯುವ ಘಟಕದ ಅಧ್ಯಕ್ಷ ಗೋಸಲ ಬಸವರಾಜ, ಸೇರಿದಂತೆ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here