ವಾಲ್ಮೀಕಿ ರಥ ಯಾತ್ರೆ…

0
159

ಮಂಡ್ಯ/ಮಳವಳ್ಳಿ:ಅ 5 ರಂದು ಬೆಂಗಳೂರಿನಲ್ಲಿ ಲೋಕಕಲ್ಯಾಣಕ್ಕಾಗಿ ವಾಲ್ಮೀಕಿ ಪುತ್ಥಳಿ ನಿರ್ಮಿಸುತ್ತಿರುವ ಹಿನ್ನಲೆಯಲ್ಲಿ ಎಲ್ಲಡೆ ವಾಲ್ಮೀಕಿ ರಥ ಯಾತ್ರೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಳವಳ್ಳಿ ಪಟ್ಟಣದ ಅಭಿಮಾನಿಗಳು ಹಾಗೂ ಆಟೋ ಸಂಘದವರು ಆತ್ಮೀಯ ವಾಗಿ ಬರಮಾಡಿಕೊಂಡರು. ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಿಂದ ಪಟ್ಟಣದ ಪ್ರಮುಖಬೀದಿಗಳಲ್ಲಿ ಆಟೋಗಳೊಂದಿಗೆ ರಥ ವನ್ನು ಮೆರವಣಿಗೆ ನಡೆಸಿ ನಂತರ ಕುಪ್ಪುಸ್ವಾಮಿ ಐಯ್ಯಾಂಗರ್ ವೃತ್ತದಲ್ಲಿ ರಾಮರೂಢ ಮಠದ ಬಸವಾನಂದ ಸ್ವಾಮಿಜೀ ರಥಕ್ಕೆ ಪೂಜೆ ಸಲ್ಲಿಸಿದರು ನಂತರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ಜೆ ದೇವರಾಜು ಮಾತನಾಡಿ. ವಾಲ್ಮೀಕಿ ನಮ್ಮೇಲರ ದೇವರು ಅವರ ಪುತ್ಥಳಿಯನ್ನು ಬೆಂಗಳೂರಿನಲ್ಲಿ ನಿರ್ಮಿಸುತ್ತಿದ್ದು ನಮ್ಮ ಜನಾಂಗ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದರು. ಇದಲ್ಲದೆ ಇಂದು ಮಂಡ್ಯಕ್ಕೆತೆರಳಿ ನಂತರ ಮದ್ದೂರು ಮೂಲಕ ಬೆಂಗಳೂರಿಗೆ ಅ 5 ರಂದು ತಲುಪಲಿದೆ ಎಂದರು ಇದೇ ಸಂದರ್ಭದಲ್ಲಿ ಬಸವಾನಂದ ಸ್ಚಾಮೀಜೀರವರು ವಾಲ್ಮೀಕಿಯ ಬಗ್ಗೆ ಸಂಕಿಪ್ತವಾಗಿ ವಿವರಿಸಿದರು. ಇದೇ ಸಂದರ್ಭದಲ್ಲಿ ತಾ.ಪಂ ಉಪಾಧ್ಯಕ್ಷ ಮಾಧು. ಪುರಸಭೆ ಸದಸ್ಯ ಗಂಗರಾಜೇಅರಸು, ಉಮೇಶ್, ನಾಗೇಶ್, ಮಂಜಣ್ಣ, ಅಖಿಲ್, ನಾರಾಯಣ, ನಾಗರಾಜು, ಆಟೋ ಸಂಘದ ಅಧ್ಯಕ್ಷ ಉಮೇಶ್, ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here