ವಿಕಲಚೇತನರಿಗೆ ಹಂಪಿ ಉತ್ಸವ ನೋಡಲು ಮುಕ್ತವಾದ ಅವಕಾಶಕ್ಕೆ ಒತ್ತಾಯ

0
265

ಬಳ್ಳಾರಿ/ಹೊಸಪೇಟೆ:ವಿಕಲಚೇತನರಿಗೆ ಹಂಪಿ ಉತ್ಸವ ನೋಡಲು ಮುಕ್ತವಾದ ಅವಕಾಶ ಕಲ್ಪಿಸಿಕೊಡಬೇಕೆಂದು ಹೊಸಪೇಟೆ ನಗರ ವಿಕಲಚೇತನರ ಒಕ್ಕೂಟ, ಮತ್ತು ವಿಕಲಚೇತನರ ಸಂಘಟನೆ ಗಳ ವೇದಿಕೆ ವತಿಯಿಂದ ತಹಶಿಲ್ದಾರರಿಗೆ ಮನವಿ ಪತ್ರ ನೀಡಲಾಯಿತು.

ಕಳೆದ ಸುಮಾರು ವರ್ಷಗಳಿಂದ ಈ ವಿಷಯವಾಗಿ ಮನವಿ ನೀಡಿದರು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಕ್ರಮಕೈಗೊಳ್ಳದೆ ಇರುವುದು ಬೇಸರದ ಸಂಗತಿ ಎಂದು ಸಂಘಟನೆಯ ಪದಾಧಿಕಾರಿಗಳು ವಿರೋದ ವ್ಯಕ್ತ ಪಡಿಸಿದರು.ದಾರಿ ಮಧ್ಯದಲ್ಲಿ ವಿಕಲಚೇತನರ ವಾಹನಗಳನ್ನು ಪೋಲಿಸರು  ತಡೆದು ಇಲ್ಲೆ ನಿಮ್ಮ ವಾಹನಗಳನ್ನು ನಿಲ್ಲಿಸಿ ಹೋಗಿ ಎಂದು ಹೇಳುತ್ತಾರೆ ನಾವು ಯಾವರೀತಿ ಹಂಪಿ ತಲುಪಬೇಕು ಎಂದು ತೀವ್ರ ತರ ಅಂಗವೈಕಲ್ಯ ವುಳ್ಳ ವ್ಯಕ್ತಿಗಳ ಪ್ರಶ್ನೆಯಾಗಿದೆ ,ಆದ್ದರಿಂದ ನವೆಂಬರ್ 3 4 ಮತ್ತು 5  ರಂದು ನಡೆಯುವ ಹಂಪಿ ಉತ್ಸವ ಕ್ಕೆ ವಿಕಲಚೇತನರಿಗೆ ಮುಕ್ತ ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಸಲ್ಲಿಸಿದರು .

ನಮ್ಮ ಬೇಡಿಕೆ ಇಡೇರದಿದ್ದರೆ ಉತ್ಸವ ನಡೆಯುವ ದಿನದಂದು ರಸ್ತೆ ತಡೆನಡೆಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ವಿಕಲಚೇತನರ ನಗರ ಘಟಕ ಅಧ್ಯಕ್ಷರಾದ ಮುಕ್ಕಣ್ಣ,  ವೆಂಕಟೇಶ, ವಿಕಲಚೇತನರ ಮುಖಂಡ ರಾದ ಲೋಹಿತ್ ತಳವಾರ,ಎಸ್ ಎಂ ಬಾಷ,ಮೆಹಬೂಬ್ ಬಾಷ,ರಾಜಸಾಬ್,ಹುಲುಗಪ್ಪ,ಅರುಣ್ ಕುಮಾರ,ಶಾಂತ,ಮಂಜುಳ,ಶಿವಗಂಗಮ್ಮ,ಅಂಜಿನಿ,ನಾಗರಾಜ್,ಇನ್ನೂ ಮುಂತಾದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here